ಅಣ್ಣ, ತಮ್ಮಂದಿರ ವರಿಸಿದ ಅಕ್ಕ, ತಂಗಿಯರು: ಮೊದಲ ರಾತ್ರಿಯೇ ಅನಿರೀಕ್ಷಿತ ಘಟನೆ!

First Published | Nov 23, 2020, 3:43 PM IST


ಪ್ರೇಮಸೌಧವಿರುವ ನಗರ ಆಗ್ರಾದಲ್ಲಿ ಬೆಚ್ಚಿ ಬೀಳುವ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ಇಬ್ಬರು ಸಹೋದರಿಯರು, ಇಬ್ಬರು ಸಹೋದರರೊಂದಿಗೆ ಮದುವೆಯಾಗಿದ್ದರು. ಆದರೆ ಫಸ್ಟ್‌ ನೈಟ್‌ಗೂ ಮೊದಲು ಶೌಚಕ್ಕೆಂದು ತೆರಳಿದವರು ಸಿನಿಮೀಯ ಶೈಲಿಯಲ್ಲಿ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ. ಅತ್ತ ವರನ ಮನೆಯವರು ಸೊಸೆಯರ ಬಗ್ಗೆ ಸುಳಿವು ಸಿಗದೆ ಕಂಗಾಲಾದರೆ, ಇತ್ತ ಮನೆ ಮಕ್ಕಳನ್ನು ಗಂಡನ ಮನೆಗೆ ಕಳುಹಿಸಿಕೊಟ್ಟ ಕೇವಲ ಮೂರು ಗಂಟೆಯೊಳಗೆ ನಾಪತ್ತೆಯಾಗಿದ್ದಾರೆಂಬ ವಿಚಾರ ಕೇಳಿದ ತಂದೆ ತಾಯಿ ಚಿಂತೆಗೀಡಾಗಿದ್ದಾರೆ.

ಬಾಹ್ ಠಾಣಾ ವ್ಯಾಪ್ತಿಯ ಫರೇರಾ ಹಳ್ಳಿಯ ನಿವಾಸಿ ಇಬ್ಬರು ಸಹೋದರರ ಮದುವೆ ಗುರುವಾರದಂದು ಸೋನ್‌ಭದ್ರದ ಇಬ್ಬರು ಸಹೋದರಿಯರೊಂದಿಗೆ ನಡೆದಿತ್ತು. ರಾತ್ರಿ ಸುಮಾರು ಹನ್ನೊಂದು ಗಂಟೆಗೆ ಮದುವೆಗೆ ಸಂಬಂಧಿಸಿದ ಎಲ್ಲಾ ಸಂಪ್ರದಾಯಗಳು ಕೊನೆಯಾಗಿದ್ದು, ಬಳಿಕ ಇವರನ್ನು ಗಂಡನ ಮನೆಗೆ ಕಳುಹಿಸಲಾಗಿತ್ತು. ಈ ವೇಳೆ ಯುವತಿಯರ ಅಣ್ಣ ಮದುವೆ ಮಾಡಿಕೊಟ್ಟದ್ದಕ್ಕೆ ಪ್ರತಿಯಾಗಿ ಒಂದು ಲಕ್ಷ ರೂಪಾಯಿ ಪಡೆದಿದ್ದ ಎಂಬ ಆರೋಪವೂ ಕೇಳಿ ಬಂದಿದೆ.
ರಾತ್ರಿ ಸುಮಾರು ಒಂದು ಗಂಟೆಗೆ ಇಬ್ಬರೂ ಗಂಡನ ಮನೆ ತಲುಪಿದ ಮಧುಮಕ್ಕಳು ಶೌಚಾಲಯಕ್ಕೆ ತೆರಳಬೇಕೆಂದಿದ್ದಾರೆ. ಹೀಗಾಗಿ ಅತ್ತೆ ಇಬ್ಬರೂ ಸೊಸೆಯಂದಿರನ್ನೂ ಹೊಲದತ್ತ ಕರೆದೊಯ್ದಿದ್ದಾರೆ. ಹೀಗಿರುವಾಗ ಒಬ್ಬಳು ಸೊಸೆ ತಾನು ತಂದಿದ್ದ ನೀರನ್ನು ಅಲ್ಲೇ ಚೆಲ್ಲಿಕೊಂಡಿದ್ದಾಳೆ ಹಾಗೂ ಅತ್ತೆ ಬಳಿ ಇನ್ನೂ ಸ್ವಲ್ಪ ನೀರು ತರುವಂತೆ ಹೇಳಿ ಕಳುಹಿಸಿಕೊಟ್ಟಿದ್ದಾಳೆ. ಆದರೆ ಅತ್ತೆ ನೀರು ತಂದು ಬರುವಷ್ಟರಲ್ಲಿ ಇಬ್ಬರೂ ಸೊಸೆಯಂದಿರು ನಾಪತ್ತೆಯಾಗಿದ್ದಾರೆ. ಹೀಗಿರುವಾಗ ತನ್ನ ಸೊಸೆಯರಿಗೆ ಏನಾದರೂ ಕೆಡುಕುಂಟಾಗಿರಬಹುದೆಂದು ಅವರು ಗಾಬರಿಗೀಡಾಗಿದ್ದಾರೆ.
Tap to resize

ಇತ್ತ ಕುಟುಂಬ ಸದಸ್ಯರು ಸೊಸೆಯರು ನಾಪತ್ತೆಯಾಗಿದ್ದಾರೆಂದು ಊರಿನವರಿಗೆ ತಿಳಿಸುತ್ತಿದ್ದಂತೆಯೇ ಗ್ರಾಮಸ್ಥರೆಲ್ಲಾ ಇಬ್ಬರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಹೀಗಿದ್ದರೂ ಯಾವುದೇ ಸುಳಿವು ಕೂಡಾ ಸಿಕ್ಕಿಲ್ಲ. ಹೀಗಾಗಿ ಇಬ್ಬರೂ ಯೋಜನೆ ರೂಪಿಸಿಕೊಂಡೇ ಒಡಿ ಹೋಗಿದ್ದಾರೆಂಬುವುದು ಖಚಿತವಾಗಿದೆ.
ಇಬ್ಬರೂ ಮೊದಲೇ ಅಲ್ಲಿಂದ ಪರಾರಿಯಾಗಲು ಪ್ಲಾನ್ ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ಹಳ್ಳಿಯ ಹೊರ ಭಾಗದಲ್ಲಿ ಅವರಿಗಾಗಿ ವಾಹನವೊಂದು ತಯಾರಾಗಿತ್ತೆನ್ನಲಾಗಿದೆ. ಇನ್ನು ಇಬ್ಬರ ವಿಳಾಸವೂ ನಕಲಿ ಆಗಿರಬಹುದೆಂದು ಅನುಮಾನಿಸಲಾಗಿದೆ. ಸೋನಭದ್ರ ಕೇವಲ ಹುಡುಗರ ಮನೆಯವರನ್ನು ನಂಬಿಸಲು ನಿಡಿದ್ದ ವಿಳಾಸವಿರಬಹುದೆನ್ನಲಾಗಿದೆ.
ಸದ್ಯ ಯುವಕರು ಹಾಗೂ ಅವರ ಕುಟುಂಬ ಚಿಂತೆಯಲ್ಲಿದೆ. ತಂದೆ ತನ್ನ ಮಕ್ಕಳಿಗೆ ಮದುವೆಗೆಂದು ಒಂದು ಲಕ್ಷ ರೂಪಾಯಿ ನೀಡಿದ್ದರು. ಆದರೆ ಮದುವೆಯಾದ ಮೂರೇ ಗಂಟೆಯೊಳಗೆ ಸೊಸೆಯಂದಿರೇ ನಾಪತ್ತೆಯಾಗಿದ್ದಾರೆ

Latest Videos

click me!