ಖಾಕಿ ಧರಿಸಿದ ಲೇಡಿ ಪೊಲೀಸ್ ಪಠಿಸಿದ್ರು ಮಂತ್ರ: ಸಪ್ತಪದಿ ತುಳಿದ ವಧು-ವರ!

First Published May 3, 2020, 6:09 PM IST

ಲಾಕ್‌ಡೌನ್ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಯೋಧರಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಲವರು ಹಗಲು ಕರ್ತವ್ಯ ನಿರ್ವಹಿಸಿದರೆ, ಇನ್ನುಳಿದವರು ರಾತ್ರಿ ಪಾಳಿಯಲಲಿ ಎಚ್ಚರವಾಗಿದ್ದು ಜನರನ್ನು ರಕ್ಷಿಸುತ್ತಿದ್ದಾರೆ. ಕೊರೋನಾ ವಿರುದ್ಧದ ಈ ಸಮರದಲ್ಲಿ ಪೊಲೀಸರು ಎಚ್ಚರಿಕೆಯಿಂದ ಕರ್ತವ್ಯ ನಿಭಾಯಿಸುವುದರೊಂದಿಗೆ ಮಾನವೀಯ ಕೆಲಸಗಳ ಮೂಲಕ ಜನರ ಪ್ರೀತಿ ಗಳಿಸುತ್ತಿದ್ದಾರೆ. ಇದೀಗ ಖಾಕಿ ಧರಿಸಿದ ಮಹಿಳಾ ಪೊಲೀಸ್ ಅಧಿಕಾರಿಯೇ ಮದುವೆ ಮಾಡಿಸುವ ಪಂಡಿತರಂತೆ ಮಂತ್ರ ಪಠಿಸಿದ್ದಾರೆ. ಈ ಮೂಲಕ ವಧು ವರರಿಗೆ ಮದುವೆ ಮಾಡಿಸಿದ್ದಾರೆ.

ಈ ವಿಶಿಷ್ಟ ಮದುವೆ ಮಧ್ಯಪ್ರದೇಶದ ನರಸಿಂಹಪುರ ಜಿಲ್ಲೆಯ ಜೋಂತೇಶ್ವರ ಹಳ್ಳಿಯಲ್ಲಿ ನಡೆದಿದೆ. ವಧು ವರರ ಕುಟುಂಬ ಸದಸ್ಯರಿಗೆ ಕೊರೋನಾ ಲಾಕ್‌ಡೌನ್ ನಡುವೆ ಮದುವೆ ಮಾಡಿಸಲು ಪಂಡಿತರು ಸಿಗದಾಗ ಜೋಂತೇಶ್ವರ ಪೊಲೀಸ್ ಠಾಣೆಯ ಮಹಿಳಾ ಎಸ್‌ಐ ಅಂಜಲಿ ಅಗ್ನಿಹೋತ್ರಿ ಗೂಗಲ್ ಸಹಾಯದಿಂದ ಮಂತ್ರ ಪಠಿಸಿ ಈ ಮದುವೆ ಮಾಡಿಸಿದ್ದಾರೆ.
undefined
ನರಸಿಂಹಪುರ ಜಿಲ್ಲೆಯ ಶ್ರೀನಗರದ ನಿವಾಸಿ ಲಕ್ಷ್ಮಣ ಚೌಧರಿಯ ಮದುವೆ, ಇದೇ ಇಲ್ಲೆಯ ಇಟ್ವಾರಾ ಬಾಜಾರ್ ನಿವಾಸಿ ರಿತು ಚೌಧರಿಯೊಂದಿಗೆ ನಿಶ್ಚಯವಾಗಿತ್ತು. ಆಡಳಿತದ ಅನುಮತಿ ಪಡೆದ ಬಳಿಕ ಜೋಂತೇಶ್ವರ ಪಾರ್ವತಿ ಮಂದಿರದಲ್ಲಿ ಈ ಮದುವೆ ಸಮಾರಂಭ ಏರ್ಪಡಿಸಲಾಗಿತ್ತು.
undefined
ಈ ಮದುವೆಯಲ್ಲಿ ಎರಡೂ ಕುಟುಂಬದ ಎಂಟು ಮಂದಿ ಭಾಗವಿಸಿದ್ದರು. ಆದರೆ ಮದುವೆ ಕಾರ್ಯ ಸಂಪೂರ್ಣಗೊಳಿಸಲು ಹಾಗೂ ಮಂತ್ರ ಪಠಿಸಲು ಪಂಡಿತರೇ ಇರಲಿಲ್ಲ. ಹೀಗಾಗಿ ಮದುವೆ ಶಾಸ್ತ್ರವೇ ಆರಂಭವಾಗಿರಲಿಲ್ಲ. ಇದೇ ವೇಳೆ ಕರ್ತವ್ಯದಲ್ಲಿದ್ದ ಎಸ್‌ಐ ಅಂಜಲಿ ಮಂದಿರಕ್ಕೆ ತಲುಪಿದ್ದಾರೆ. ಅಲ್ಲಿ ವಧು ವರರ ಕುಟುಂಬ ಸದಸ್ಯರನ್ನು ಕಂಡು ಏನಾಯಿತೆಂದು ಕೇಳಿದ್ದಾರೆ. ಕುಟುಂಬ ಸದಸ್ಯರು ವಾಸ್ತವ ತಿಳಿಸಿದ್ದಾರೆ ಹಾಗೂ ಸಹಾಯ ಮಾಡುವಂತೆ ಕೋರಿದ್ದಾರೆ.
undefined
ಕುಟುಂಬ ಸದಸ್ಯರ ನೆರವು ಮಾಡಲು ಮುಂದಾದ ಎಸ್‌ಐ ಹವನ ಕುಂಡದ ಬದಲು ತುಪ್ಪದ ದೀಪ ಹಚ್ಚಿ, ಮಂತ್ರ ಪಠಿಸಿ ವಧು ವರರಿಗೆ ಸಪ್ತಪದಿ ಮಾಡಿಸಿದ್ದಾರೆ. ಅಲ್ಲದೇ ವಧು ವರರು ಪರಸ್ಪರ ನಿಭಾಯಿಸಬೇಕಾದ ಹಾಗೂ ಕೊಡಬೇಕಾದ ಮಾತುಗಳು ಹಾಗೂ ಅದರ ಅರ್ಥ ಮತ್ತು ಕಾನೂನಿನ ಮಾಹಿತಿಯನ್ನೂ ನೀಡಿದ್ದಾರೆ.
undefined
ಅಲ್ಲದೇ ಲಾಕ್‌ಡೌನ್‌ನಿಂದ ಮದುವೆಗೆ ಬೇಕಾದ ಅನೇಕ ಸಾಮಗ್ರಿಗಳನ್ನು ವಧು ವರರ ಕುಟುಂಬ ಸದಸ್ಯರು ತಂದಿರಲಿಲ್ಲ. ಇದನ್ನು ಖುದ್ದು ಎಸ್‌ಐ ಪೊಲೀಸ್ ಪೇದೆ ಸಹಾಯದಿಂದ ತರಿಸಿಕೊಂಡಿದ್ದಾರೆ. ಬಳಿಕ ತಮ್ಮ ಮೊಬೈಲ್‌ನಲ್ಲಿ ಗೂಗಲ್ ಸಹಾಯದಿಂದ ಮದುವೆಯ ಎಲ್ಲಾ ಶಾಸ್ತ್ರಗಳನ್ನು ನೊಡಿಕೊಂಡಿದ್ದಾರೆ ಹಾಗೂ ಮಂತ್ರ ಪಠಿಸಿ ಮದುವೆ ಕಾರ್ಯ ನೆರವೇರಿಸಿದ್ದಾರೆ.
undefined
ಸಬ್‌ ಇನ್ಸ್‌ಪೆಕ್ಟರ್ ಅಂಜಲಿ ಅಗ್ನಿಓತ್ರಿ ಈ ಸಂಬಂಧ ಪ್ರತಿಜ್ರಿಯಿಸಿದ್ದು, ನಾನು ಕರ್ತವ್ಯದ ಮೇಲೆ ತೆರಳಿದ್ದೆ. ಹೀಗಿರುವಾಗ ಮಂದಿರದಲ್ಲಿ ವಧು ವರ ಸೇರಿದಂತೆ ಎಂಟು ಮಂದಿ ಕುಟೂಮಬ ಸದಸ್ಯರನ್ನು ನೊಡಿದೆ. ಅವರ ಬಳಿ ಮದುವೆಯ ಅನುಮತಿ ಪತ್ರವಿತ್ತು. ಆದರೆ ಅಲ್ಲಿ ಮದುವೆ ಮಾಡಸಬೇಕಾದ ಪಂಡಿತರಿರಲಿಲ್ಲ. ಹೀಗಿರುವಾಗ ನಾನೊಬ್ಬ ಪಂಡಿತರ ಮನೆತನದವಳಾಗಿದ್ದರಿಂದ ಮಂತ್ರ ಪಠಿಸಿ ಮದುವೆ ನೆರವೇರಿಸುವಂತೆ ಕೇಳಿಕೊಂಡರು. ಅವರ ಮಾತು ನಿರಾಕರಿಸಲು ನನ್ನಿಂದ ಆಗಲಿಲ್ಲ. ಮದುವೆ ಂಆಡಿಸಿದೆ ಎಂದಿದ್ದಾರೆ.
undefined
ಈ ಮದುವೆಯಲ್ಲಿ ಎರಡೂ ಕುಟುಂಬ ಸದಸ್ಯರು ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದು, ಮಾಸ್ಕ್ ಕೂಡಾ ಧರಿಸಿದ್ದಾರೆ. ಅಲ್ಲದೇ ಹತ್ತು ನಿಮಿಷಕ್ಕೊಮ್ಮೆ ಸ್ಯಾನಿಟೈಸರ್‌ ಮೂಲಕ ಕೈ ಸ್ವಚ್ಛಗೊಳಿಸಿದ್ದಾರೆ.
undefined
click me!