PUC ಓದಿದ ಕ್ರಿಮಿನಲ್ ಸ್ವಪ್ನಾ ದೂತಾವಾಸ ಕಚೇರಿಯಲ್ಲಿ ಆಫೀಸರ್ ಆಗಿದ್ದೇಗೆ..? ಸ್ಮಗ್ಲಿಂಗ್ ಸುಂದರಿಯ ಸೀಕ್ರೆಟ್

First Published | Jul 12, 2020, 2:35 PM IST

ಪಿಯುಸಿ ತನಕ ಮಾತ್ರ ಓದಿರುವ ಕೇರಳದ ಬಹುಕೋಟಿ ಚಿನ್ನ ಸ್ಮಗ್ಲಿಂಗ್ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನ ಸುರೇಶ್ ದೂತಾವಾಸ ಕಚೇರಿಯಲ್ಲಿ ಕೆಲಸಕ್ಕೆ ಸೇರಿದ್ದು ಹೇಗೆ..? ಕ್ರಿಮಿನಲ್ ಹಿನ್ನೆಲೆ ಇರೋ ಸ್ವಪ್ನಾಗೆ ಕೇರಳ ಸಿಎಂ ಜೊತೆ ಕ್ಲೋಸ್ ಲಿಂಕ್..!

ಕೇರಳದ ಬಹುಕೋಟಿ ಚಿನ್ನ ಸ್ಮಗ್ಲಿಂಗ್ ಪ್ರಕರಣದ ಪ್ರಮುಖ ಆರೋಪಿಸ್ವಪ್ನ ಸುರೇಶ್ ರನ್ನುಎನ್ ಐಎ ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
undefined
ರಾಜತಾಂತ್ರಿಕ ರಕ್ಷಣೆ ಹೊಂದಿರುವ ''ಡಿಪ್ಲೊಮ್ಯಾಟಿಕ್‌ ಬ್ಯಾಗೇಜ್‌'' ನಲ್ಲಿದ್ದ 30 ಕೆಜಿ ಚಿನ್ನವನ್ನು ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶ ಪಡಿಸಿಕೊಂಡಿದ್ದರು. ಸುಮಾರು 15 ಕೋಟಿ ರೂಪಾಯಿ ಮೌಲ್ಯದ ಈ ಚಿನ್ನ ಅಕ್ರಮ ಸಾಗಣೆಯ ಆರೋಪಿ ಸರ್ಕಾರಿ ಸಿಬ್ಬಂದಿ ಸ್ವಪ್ನ ಸುರೇಶ್ ಎಂದು ಹೇಳಲಾಗಿತ್ತು.
undefined

Latest Videos


ಮಗಳೂ ಗೌರಿ, ಮಗ ಅನಿರುದ್ಧ, ಹಾಗೂ ಸಂದೀಪ್‌ ಜೊತೆ ದೇಶ ಬಿಡಲು ಸಿದ್ಧತೆ ನಡೆಸಿದ ಸ್ವಪ್ನಾ ಕ್ರಿಮಿನಲ್ ಹಿನ್ನೆಲೆ ಮತ್ತು ಸಿಎಂ ಜೊತೆಗಿನ ನಂಟು ಸದ್ಯ ಕೇರಳದಲ್ಲಿ ರಾಜಕೀಯ ಸಂಚಲನ ಮೂಡಿಸಿದೆ.
undefined
ಸರಿತ್, ಸ್ವಪ್ನ ಪ್ರಭ ಸುರೇಶ್, ಫೈಜಲ್ ಫರೀದ್ ಮತ್ತು ಸಂದೀಪ್ ನಾಯರ್ ವಿರುದ್ಧ ಪ್ರಕರಣ ದಾಖಲಾಗಿತ್ತು.ಕೇರಳ ಸರ್ಕಾರದ ಮಾಹಿತಿ ಇಲಾಖೆಯಲ್ಲಿ ಇಂಜಿನಿಯರ್ ಆಗಿಸ್ವಪ್ನ ಸುರೇಶ್ ಕೆಲಸ ಮಾಡುತ್ತಿದ್ದರು.
undefined
ಯುಎಇ ರಾಯಭಾರ ಕಚೇರಿಯ ಮಾಜಿ ಸಾರ್ವಜನಿಕ ಸಂಪರ್ಕಾಧಿಕಾರಿ ಸರಿತ್ ಕುಮಾರ್ ಬಂಧನ ಮಾಡಿದಾಗ ಅನೇಕರ ಹೆಸರುಗಳು ಹೊರಗೆ ಬಂದಿದ್ದವು.ಈಗಾಗಲೇ ಕೇರಳಾದಲ್ಲಿ ಸರಿತ್ ಕುಮಾರ್ ಬಂಧಿಸಿದ್ದ ಎನ್ ಐಎ ಹೆಚ್ಚಿನ ತನಿಖೆ ನಡೆಸಲಿದೆ.
undefined
ಪಿಯುಸಿ ಮಾತ್ರ ಓದಿರುವ ಸ್ವಪ್ನಾ ಕೈಯಲ್ಲಿ ಫೇಕ್ ಡಿಗ್ರಿ ಸರ್ಟಿಫಿಕೇಟ್ ಇರುವುದರಿಂದಲೇ ಆಕೆ ದೂತಾವಾಸ ಕಚೇರಿಯಲ್ಲಿ ಕೆಲಸಕ್ಕೆ ಸೇರಿದ್ದರು.
undefined
ಸಿಎಂ ಕಾರ್ಯದರ್ಶಿ ಐಎಎಸ್ ಎಂ ಶಿವಶಂಕರ್ ಜೊತೆ ಅತ್ಯಂತ ನಿಕಟ ಸಂಬಂಧ ಹೊಂದಿರುವ ಸ್ವಪ್ನಾಗೆ ಸಿಎಂ ಜೊತೆಗೂ ನಂಟಿತ್ತು. ಸಿಎಂ ಕಾರ್ಯದರ್ಶಿಯೂ ಸ್ವಪ್ನಾ ಮನೆಗೆ ಸದಾ ಬರುತ್ತಿದ್ದ ವ್ಯಕ್ತಿಯಾಗಿದ್ದರು.ಒಂದಷ್ಟು ತನಿಖೆಗಳಿಂದ ತಪಿಸಲು ಸ್ವಪ್ನಾಗೆ ಇದೇ ಅಧಿಕಾರಿ ತಮ್ಮ ಅಧಿಕಾರ ಬಳಸಿಕೊಂಡು ನೆರವಾಗಿದ್ದರು.
undefined
click me!