ಸೇನೆಯಿಂದ ಜನಸಾಮಾನ್ಯರವರೆಗೆ, 75ನೇ ಸ್ವಾತಂತ್ರ್ಯ ದಿನದಂದು ಬಾನೆತ್ತರಕ್ಕೆ ಹಾರಿದ ತ್ರಿವರ್ಣ ಧ್ವಜ!

Published : Aug 15, 2021, 03:22 PM IST

ಇಂದು ಇಡೀ ದೇಶ 75ನೇ ಸ್ವಾತಂತ್ರ್ಯ ದಿನ ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದೆ. ಪ್ರತಿ ನಗರದ ಪ್ರತಿಯೊಂದು ಬೀದಿಯಲ್ಲೂ ತ್ರಿವರ್ಣ ಧ್ವಜ ಹಾರಿಸಲಾಯಿತು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪ್ರತಿಯೊಬ್ಬ ಭಾರತೀಯ ಸ್ವಾತಂತ್ರ್ಯದ ಸಂಭ್ರಮದಲ್ಲಿ ಮುಳುಗಿರುತ್ತಾರೆ. ಒಂದು ಕಡೆ, ಪ್ರಧಾನಿ ಮೋದಿ ಕೆಂಪು ಕೋಟೆಯಿಂದ ಧ್ವಜವನ್ನು ಹಾರಿಸಿದ್ದರೆ, ಇತ್ತ ನಮ್ಮ ಹೆಮ್ಮೆಯ ಸೇನೆಯ ಸೈನಿಕರು ದೇಶದ ಗಡಿಯಲ್ಲಿ ಧ್ವಜವನ್ನು ಹಾರಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ.  

PREV
16
ಸೇನೆಯಿಂದ ಜನಸಾಮಾನ್ಯರವರೆಗೆ, 75ನೇ ಸ್ವಾತಂತ್ರ್ಯ ದಿನದಂದು ಬಾನೆತ್ತರಕ್ಕೆ ಹಾರಿದ ತ್ರಿವರ್ಣ ಧ್ವಜ!

ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ 8 ನೇ ಬಾರಿಗೆ ಕೆಂಪು ಕೋಟೆಯಿಂದ ತ್ರಿವರ್ಣ ಧ್ವಜ ಹಾರಿಸಿದರೆ, ಐಟಿಬಿಪಿ ಸಿಬ್ಬಂದಿ ಲಡಾಖ್‌ನ ಪಂಗೊಂಗ್ ತ್ಸೋ ಸರೋವರದ ತೀರದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ.

26

ಐಟಿಬಿಪಿ ಜವಾನರು ದೇಶದ ಗಡಿ ಲಡಾಖ್‌ಯಲ್ಲಿ ತ್ರಿವರ್ಣ ಧ್ವಜ ಹೆಮ್ಮೆ ಹಾಗೂ ಗೌರವದಿಂದ ಹಾರಿಸಿದ್ದಾರೆ. ಅವರು ಮೊದಲು ತ್ರಿವರ್ಣ ಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದ್ದಾರೆ.

36

ಐಟಿಬಿಪಿ ಜವಾನರು ಭಾರತ-ಚೀನಾ ಗಡಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಬಳಿಕ ಪರೇಡ್‌ ನಡೆಸಿದ್ದಾರೆ. ದೇಶಭಕ್ತಿ ಗೀತೆಗಳೂ ಮೊಳಗಿವೆ. ಜೊತೆಗೆ ಬಂದೂಕು ಭುಜದ ಮೇಲಿಟ್ಟು, ತ್ರಿವರ್ಣ ಧ್ವಜ ಹಿಡಿದು ಪರೇಡ್‌ ಮಾಡಿದ್ದಾರೆ.
 

46

ಭಾರತ-ಟಿಬೆಟಿಯನ್ ಗಡಿಯಲ್ಲಿ, ಸೈನಿಕರು ಲಡಾಖ್ ನಲ್ಲಿ 14,000 ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ. ಈ ವೇಳೆ, ಭಾರತ ಮಾತೆಗೆ ಜೈ ಎಂಬ ಘೋಷಣೆಗಳನ್ನೂ ಕೂಗಿದ್ದಾರೆ.

56

ಈ ಚಿತ್ರವು ದೇಶದ ರಾಜಧಾನಿ ದೆಹಲಿಯ ಕೆಂಪು ಕೋಟೆಯದ್ದಾಗಿದ್ದು, 75 ನೇ ಸ್ವಾತಂತ್ರ್ಯ ದಿನದಂದು ಧ್ವಜಾರೋಹಣ ಮಾಡಿದ ನಂತರ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು.

66


ದೆಹಲಿಯಲ್ಲಿ ಸ್ವಾತಂತ್ರ್ಯ ದಿನದ ಸಂಭ್ರಮ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶದ ಮೂಲೆ ಮೂಲೆಯಲ್ಲಿ 75 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories