ದೇಶದ ಆ ಒಂದು ನಗರದಲ್ಲಿ ಮಧ್ಯರಾತ್ರಿ ಹಾರಿದ ತ್ರಿವರ್ಣ ಧ್ವಜ, ಪಟಾಕಿ ಸಿಡಿಸಿ ಸಂಭ್ರಮ!

First Published | Aug 15, 2021, 12:34 PM IST

ಇಂದು ಇಡೀ ದೇಶ 75 ನೇ ಸ್ವಾತಂತ್ರ್ಯ ದಿನ ಆಚರಿಸುತ್ತಿದೆ. ಪ್ರತಿ ನಗರದ ಪ್ರತಿಯೊಂದು ಬೀದಿಯಲ್ಲೂ ತ್ರಿವರ್ಣ ಧ್ವಜ ಬಾನೆತ್ತರಕ್ಕೆ ಹಾರಾಡುತ್ತಿದೆ. ಆದರೆ ಇವೆಲ್ಲದರ ನಡುವೆ ಕಾನ್ಪುರದಲ್ಲಿ ಮಾತ್ರ ಮಧ್ಯರಾತ್ರಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿ ಗೌರವ ಸಲ್ಲಿಸಲಾಗಿದೆ. ಆದರೆ ಹೀಗೆ ನಡೆದಿದ್ದು, ಇದು ಮೊದಲಲ್ಲ. ಪ್ರತಿ ವರ್ಷ ಆಗಸ್ಟ್ 14 ರ ಮಧ್ಯರಾತ್ರಿ ಇಲ್ಲಿ ಧ್ವಜಾರೋಹಣ ಮಾಡಲಾಗುತ್ತದೆ.

ವಾಸ್ತವವಾಗಿ, ಕಾನ್ಪುರ ನಗರದ ಮೆಸ್ಟನ್ ರಸ್ತೆಯಲ್ಲಿರುವ ದೇವಸ್ಥಾನದ ಬಳಿ ಮಧ್ಯರಾತ್ರಿಯೇ ಧ್ವಜಾರೋಹಣ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಗಿದೆ. ಈ ಮೊದಲಿನಿಂದಲೂ ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರು ಪ್ರತಿ ವರ್ಷ ಮಧ್ಯರಾತ್ರಿ ಸ್ವಾತಂತ್ರ್ಯವನ್ನು ಆಚರಿಸಲು ಸೇರುತ್ತಾರೆ. ಈ ಬಾರಿಯೂ ನಗರದ ಜನರು ಉತ್ಸಾಹದಿಂದ ಭಾಗವಹಿಸಿದ್ದಾರೆ.
 

ಸ್ಥಳೀಯ ನಿವಾಸಿ ಶಂಕರ್ ದತ್ ಮಿಶ್ರಾ ಈ ಬಗ್ಗೆ ಮಾತನಾಡುತ್ತಾ, "ನಾವು ಇಂದು ನಮ್ಮ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ. ನಾವು 75 ವರ್ಷಗಳಿಂದ ಮಧ್ಯರಾತ್ರಿ ತ್ರಿವರ್ಣ ಧ್ವಜ ಹಾರಿಸುವ ಸಂಪ್ರದಾಯವನ್ನು ಅನುಸರಿಸುತ್ತಿದ್ದೇವೆ. ಈ ವೇಳೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ನಾವು ಸ್ಮರಿಸುತ್ತೇವೆ.


1947 ರಲ್ಲಿ ಆಗಸ್ಟ್ 14 ಮತ್ತು ಆಗಸ್ಟ್ 15 ರ ಮಧ್ಯರಾತ್ರಿ ಇಲ್ಲಿ 12 ಗಂಟೆಗೆ ಮೊಟ್ಟ ಮೊದಲು ಧ್ವಜ ಮೊದಲು ಹಾರಿಸಲಾಯಿತು ಎಂಬುವುದು ಉಲ್ಲೇಖನೀಯ. ಬ್ರಿಟಿಷರು ಭಾರತ ಬಿಟ್ಟು ಹೋದಾಗಿನಿಂದ, ಇಲ್ಲಿಯವರೆಗೆ ಈ ರೀತಿಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಸಂಪ್ರದಾಯ ಇಲ್ಲಿ ನಡೆದು ಬಂದಿದೆ.
 

ಕಾನ್ಪುರ ಮತ್ತು ಯುಪಿಯ ಕ್ರಾಂತಿಕಾರಿಗಳು ಸ್ವಾತಂತ್ರ್ಯಕ್ಕಾಗಿ ತಮ್ಮ ಚಟುವಟಿಕೆಗಳನ್ನು ಕೈಗೊಳ್ಳಲು ಇಲ್ಲಿಯೇ ಯೋಜನೆ ರೂಪಿಸುತ್ತಿದ್ದರು ಎಂದು ಹೇಳಲಾಗಿದೆ. ಅದಕ್ಕಾಗಿಯೇ ಕಾನ್ಪುರದವರು ಮೊದಲು ಇಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಸ್ವಾತಂತ್ರ್ಯ ಆಚರಿಸಲು ನಿರ್ಧರಿಸಿದ್ದರು. ಆ ಸಮಯದಲ್ಲಿ ಸ್ವಾತಂತ್ರ್ಯವನ್ನು ಆಚರಿಸಲು ಬೆಳ್ಳಿ ಕಮಾನುಗಳನ್ನು ಮಾಡಲಾಗುತ್ತಿತ್ತು ಮತ್ತು ಅದರ ತಂತಿಗಳನ್ನು ಆಭರಣಗಳಿಂದ ಮಾಡಲಾಗಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ.

Latest Videos

click me!