ಇನ್ಶುರೆನ್ಸ್ ಕಂಪನಿಗಳು ಬ್ಲಾಕ್‌ ಲಿಸ್ಟ್‌ನಲ್ಲಿಟ್ಟ 7 ಡೇಂಜರಸ್‌ ಡಾಗ್‌ ಬ್ರಿಡ್‌ಗಳಿವು

First Published | Oct 23, 2024, 2:15 PM IST

ಕೆಲವು ನಾಯಿಗಳು ಬಹಳ ಅಪಾಯಕಾರಿ. ಅವುಗಳು ಬಾಯಿಗೆ ಸಿಕ್ಕರೆ ಸಾವೇ ಗತಿ, ಇಂತಹ ಕೆಲ ಅಪಾಯಕಾರಿ ಶ್ವಾನಗಳನ್ನು ಸಾಕುವುದಕ್ಕೆ ಸರ್ಕಾರವೇ ನಿಷೇಧ ಹೇರಿದೆ. ಹೀಗಿರುವಾಗ ಏನಾದರೂ ಅಪಾಯವಾದರೆ ಪರಿಹಾರ ನೀಡುವ ವಿಮಾ ಕಂಪನಿಗಳು ಕೂಡ ಕೆಲ ಅಪಾಯಕಾರಿ ಶ್ವಾನಗಳನ್ನು ಬ್ಲಾಕ್‌ಲಿಸ್ಟ್‌ನಲ್ಲಿಟ್ಟಿವೆ. ಹೀಗೆ ವಿಮಾ ಕಂಪನಿಯೂ ನಿಷೇಧಿಸಲ್ಪಟ್ಟಿರುವ ಡೇಂಜರಸ್‌ ಶ್ವಾನಗಳ ಬಗ್ಗೆ ಇಲ್ಲಿದೆ ಮಾಹಿತಿ.

ಪಿಟ್ ಬುಲ್
ಪಿಟ್ ಬುಲ್‌ಗಳು ತಮ್ಮ ಆಕ್ರಮಣಕಾರಿ ನಡವಳಿಕೆಗೆ ಹೆಸರಾಗಿದ್ದು, ವಿಮಾ ಕಂಪನಿಗಳು ನಿಯಮಿತವಾಗಿ ಅವುಗಳನ್ನು ಕಪ್ಪುಪಟ್ಟಿಗೆ ಸೇರಿಸಿವೆ. ಈ ಗುಂಪಿನಲ್ಲಿ ಅಮೇರಿಕನ್ ಸ್ಟಾಫರ್ಡ್‌ಶೈರ್ ಟೆರಿಯರ್‌ಗಳು, ಅಮೇರಿಕನ್ ಪಿಟ್ ಬುಲ್ ಟೆರಿಯರ್‌ಗಳು ಮತ್ತು ಸ್ಟಾಫರ್ಡ್‌ಶೈರ್ ಬುಲ್ ಟೆರಿಯರ್‌ಗಳು ಕೂಡ ಇವೆ.

ರಾಟ್‌ವೀಲರ್‌
ತಮ್ಮ ಶಕ್ತಿ ಮತ್ತು ರಕ್ಷಣಾತ್ಮಕ ಪ್ರವೃತ್ತಿಗೆ ಹೆಸರುವಾಸಿಯಾದ ರಾಟ್‌ವೀಲರ್‌ಗಳು, ಆಕ್ರಮಣಶೀಲತೆ ಮತ್ತು ಎದುರಾಳಿಗೆ ಗಮನಾರ್ಹವಾದ ಗಾಯವನ್ನು ಮಾಡುವ ಅವುಗಳ ಸಾಮರ್ಥ್ಯದ ಬಗ್ಗೆ ಚಿಂತೆಗಳಿಂದಾಗಿ ಅವುಗಳು ಕಚ್ಚಿ ಏನಾದರೂ ಅನಾಹುತಗಳಾದಲ್ಲಿ ನಿಮಗೆ ಪರಿಹಾರ ಸಿಗುವುದಿಲ್ಲ,

Tap to resize

ಡೋಬರ್‌ಮನ್ ಪಿನ್ಷರ್‌
ಡೋಬರ್‌ಮನ್‌ಗಳು ಬಲಿಷ್ಠ ಕಾವಲು ನಾಯಿಗಳೆಂದು ಹೆಸರುವಾಸಿಯಾಗಿವೆ ಮತ್ತು ಅವುಗಳ ಗಾತ್ರ ಮತ್ತು ರಕ್ಷಣಾತ್ಮಕ ಪ್ರವೃತ್ತಿಗಳು ಅವುಗಳನ್ನು ಹೆಚ್ಚಿನ ಅಪಾಯಕಾರಿ ತಳಿಯನ್ನಾಗಿ ಮಾಡಿದ್ದು, ನಿಮ್ಮ ಬಳಿ ಈ ತಳಿಯ ಶ್ವಾನ ಇದ್ದರೆ ಎಚ್ಚರ

ಜರ್ಮನ್ ಶೆಫರ್ಡ್‌ಗಳು
ಈ ತಳಿಯು ಕೆಲಸ ಮಾಡುವ ನಾಯಿ ಜೊತೆಗೆ ಮನೆಯ ಸಾಕುಪ್ರಾಣಿಗಳಾಗಿ ಜನಪ್ರಿಯವಾಗಿದ್ದರೂ, ಅದರ ಗಾತ್ರ, ಶಕ್ತಿ ಮತ್ತು ರಕ್ಷಣಾತ್ಮಕ ನಡವಳಿಕೆಯಿಂದಾಗಿ ಇದನ್ನು ಸಾಂದರ್ಭಿಕವಾಗಿ ನಿಷೇಧಿಸಲಾಗಿದೆ.

ಚೌ ಚೌ!
ಅವು ತಮ್ಮ ಗಮನ ಸೆಳೆಯುವ ಸಿಂಹದಂತಹ ಕೇಸರ ಮತ್ತು ಸ್ವತಂತ್ರ ನಡವಳಿಕೆಯಿಂದ ಹೆಸರುವಾಸಿಯಾಗಿವೆ. ಆದರೂ ಅವುಗಲ ನಡವಳಿಕೆ ಹೇಗೆ ಎಂದು ಊಹಿಸಲು ಸಾಧ್ಯವಾಗದೇ ಇರುವ ಕಾರಣಕ್ಕೆ ಅವುಗಳ ಮಾಲೀಕರಿಗೂ ವಿಮಾ ಸಂಸ್ಥೆಗಳು ಪರಿಹಾರದ ರಕ್ಷಣೆ ನೀಡಲು ನಿರಾಕರಿಸಿವೆ. 

ಬೆಲ್ಜಿಯನ್ ಮ್ಯಾಲಿನೋಯಿಸ್
ಬೆಲ್ಜಿಯನ್ ಮ್ಯಾಲಿನೋಯಿಸ್‌ಗಳು ಪೊಲೀಸ್ ಮತ್ತು ಮಿಲಿಟರಿ ಪಡೆಗಳಲ್ಲಿನ ತಮ್ಮ ಸೇವೆಗೆ ಹೆಸರುವಾಸಿಯಾದ ಬುದ್ಧಿವಂತ ಮತ್ತು ಸಕ್ರಿಯ ನಾಯಿ ತಳಿ ಇದು. ಆದರೂ, ಅವರ ರಕ್ಷಣಾತ್ಮಕ ಮತ್ತು ಆಗಾಗ್ಗೆ ಹಿಂಸಾತ್ಮಕ ನಡವಳಿಕೆಯಿಂದ ಇವುಗಳನ್ನು ಕೂಡ ವಿಮಾ ಕಂಪನಿ ಪರಿಹಾರದಿಂದ ದೂರ ಇಟ್ಟಿದೆ.

ಕೇನ್ ಕೊರ್ಸೊ
ಕೇನ್ ಕೊರ್ಸೊಗಳು ಸಧೃಡವಾದ ಕಾವಲು ನಾಯಿಗಳಾಗಿದ್ದು,  ಅವುಗಳ ಶಕ್ತಿ ಮತ್ತು ಪ್ರಾದೇಶಿಕ ನಡವಳಿಕೆಯು ವಿಮಾ ಕಂಪನಿಗಳು ಈ ನಾಯಿಗಳನ್ನು ಹೊಂದಿರುವ ಮನೆಗಳಿಗೆ ವಿಮೆ ಮಾಡಲು ನಿರಾಕರಿಸುತ್ತದೆ.

ಈ ತಳಿಗಳ ಜೊತೆಗೆ.. ಗ್ರೇಟ್ ಡೇನ್ಸ್, ಅಕಿತಾಸ್ ಮತ್ತು ಸೈಬೀರಿಯನ್ ಹಸ್ಕೀಸ್‌ನಂತಹ ಇತರ ನಾಯಿ ತಳಿಗಳನ್ನು ಕೆಲವು ವಿಮಾ ಕಂಪನಿಗಳು ಕಪ್ಪುಪಟ್ಟಿಗೆ ಸೇರಿಸಿವೆ.ಹೀಗಾಗಿ ನಿಮ್ಮಲ್ಲಿ ಈ ತಳಿಗಳ ಯಾವುದಾದರು ಶ್ವಾನಗಳಿದ್ದರೆ ಈ ವಿಚಾರ ನಿಮ್ಮಗಮನದಲ್ಲಿರಲಿ. ಅವುಗಳು ಬೇರೆಯವರನ್ನು ಕಚ್ಚಿದ್ದಲ್ಲಿ ನೀವೇ ಕೈಯಿಂದ ಪರಿಹಾರ ಕೊಡಬೇಕಾಗಿ ಬರುವುದು.

Latest Videos

click me!