ಜನಪ್ರಿಯ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕಮಲ್ ಕೌರ್ ಅಲಿಯಾಸ್ ಕಾಂಚನ್ ತಿವಾರಿ ಅವರ ಶವ ಬಠಿಂಡಾದಲ್ಲಿ ಕಾರಿನೊಳಗೆ ಪತ್ತೆಯಾಗಿದೆ. ಕಮಲ್ ಕೌರ್ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿವೆ.
ಪಂಜಾಬಿನ ಪ್ರಸಿದ್ಧ ಸಾಮಾಜಿಕ ಮಾಧ್ಯಮ ಪ್ರಭಾವಿ ಕಮಲ್ ಕೌರ್ ಅಲಿಯಾಸ್ ಕಾಂಚನ್ ತಿವಾರಿ ಅವರ ಶವ ಬುಧವಾರ ಬಠಿಂಡಾದಲ್ಲಿ ಕಾರಿನೊಳಗೆ ಪತ್ತೆಯಾಗಿದೆ. ಗುರುವಾರ ಅವರ ಮರಣ ಮತ್ತು ಗುರುತನ್ನು ದೃಢಪಡಿಸಲಾಗಿದೆ.
25
ಎಲ್ಲಿ ಪತ್ತೆಯಾಯಿತು ಕಮಲ್ ಕೌರ್ ಶವ?
ವೈದ್ಯಕೀಯ ವಿಶ್ವವಿದ್ಯಾಲಯದ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಕಮಲ್ ಕೌರ್ ಅಲಿಯಾಸ್ ಕಾಂಚನ್ ತಿವಾರಿ ಅವರ ಶವ ಪತ್ತೆಯಾಗಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
35
ಕಮಲ್ ಕೌರ್ ಯಾರು?
ಕಮಲ್ ಕೌರ್ ಸೋಶಿಯಲ್ ಮೀಡಿಯಾದಲ್ಲಿ 3.86 ಲಕ್ಷಕ್ಕೂ ಹೆಚ್ಚು ಪಾಲೋವರ್ಸ್‌ಗಳನ್ನು ಹೊಂದಿದ್ದರು. ಚರ್ಚಾಸ್ಪದ ವಿಷಯಗಳ ಬಗ್ಗೆ ಕಮಲ್ ಕೌರ್ ರೀಲ್‌ಗಳನ್ನು ಮಾಡುತ್ತಿದ್ದರು. ವಿವಾದಾತ್ಮಕ ವಿಷಯದ ಕಾರಣ ಬೆದರಿಕೆಗಳು ಬಂದಿದ್ದವು.