ಅಂದಿನಿಂದ ದೇಶಾದ್ಯಂತ ಶೌಚಾಲಯಗಳ ಸ್ವಚ್ಛತೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಯಿತು. ರೈಲುಗಳಲ್ಲಿ ನೀರು ಸರಬರಾಜು ಸುಧಾರಿಸಲಾಯಿತು. ಕ್ರಮೇಣ, ಬಯೋ-ಶೌಚಾಲಯಗಳು, ಸ್ವಯಂಚಾಲಿತ ಫ್ಲಶಿಂಗ್ ವ್ಯವಸ್ಥೆಗಳು ಬಂದವು. ಆ ಪ್ರಯಾಣಿಕ ಬರೆದ ಪತ್ರ ಇನ್ನೂ ಭದ್ರವಾಗಿದೆ. ಆ ಪತ್ರವನ್ನು ನವದೆಹಲಿಯ ರೈಲ್ವೆ ವಸ್ತುಸಂಗ್ರಹಾಲಯದಲ್ಲಿ ಇಂದಿಗೂ ಇರಿಸಲಾಗಿದೆ. ಒಬ್ಬ ವ್ಯಕ್ತಿಯ ಆಲೋಚನೆ, ಒಂದು ಪತ್ರ ಸಮಾಜದಲ್ಲಿ ಎಷ್ಟು ದೊಡ್ಡ ಬದಲಾವಣೆ ತರಬಲ್ಲದು ಎಂಬುದಕ್ಕೆ ಇದು ಒಂದು ಉದಾಹರಣೆ.