ಭಾರತೀಯ ರೈಲ್ವೇ ಹೊಸ ವರ್ಷದ ಮೊದಲ ದಿನ ಅಂದರೆ ಜನವರಿ 1, 2025ರಂದು ಹೊಸ ಟೈಮ್‌ಟೇಬಲ್ ಪ್ರಕಟಿಲಿದೆ. ಇದು 44ನೇ ಆವೃತ್ತಿಯ ಟೈನ್ಸ್ ಎಟ್ ಎ ಗ್ಲಾನ್ಸ್(TAG) ಆಗಿದೆ. ಸದ್ಯ ಇರುವ ಟೈಮ್ ಟೇಬಲ್ ಡಿಸೆಂಬರ್ 31, 2024ರ ವರೆಗೆ ಅನ್ವಯವಾಗಲಿದೆ. ರೈಲ್ವೇ ಆಧುನೀಕರಣದಿಂದ ಹೊಸ ಟೈಮ್‌ಟೇಬಲ್‌ನಲ್ಲಿ ಕೆಲ ಮಹತ್ವದ ಬದಲಾವಣೆಗಳು ಆಗಲಿವೆ.
10 मुंबई सेंट्रल से नई दिल्लीमुंबई सेंट्रल से नई दिल्ली के लिए पहली ट्रेन कल यानी 12 मई को दौड़ेगी। जबकि वापसी में दिल्ली से मुंबई सेंट्रले के लिए पहली ट्रेन 13 मई को चलेगी। इस रूट पर रेलवे ने डेली ट्रेन संचालन का निर्णय लिया है। इस दौरान वडोदरा, रतलाम, और कोटा में ट्रेनों का स्टॉपेज निर्धारित किया गया है।
2025ರಲ್ಲಿ ಭಾರತೀಯ ರೈಲ್ವೇ ಮತ್ತಷ್ಟು ಆಧುನೀಕರಣಗೊಳ್ಳುತ್ತಿದೆ. ಜೊತೆಗೆ ಪ್ರಯಾಣಿಕರ ಅನುಕೂಲ, ಅವಶ್ಯಕತೆ, ಬೇಡಿಕೆ ತಕ್ಕಂತೆ ಹೊಸ ರೈಲು, ಹೆಚ್ಚುವರಿ ರೈಲುಗಳು ಸೇವೆ ನೀಡಲಿದೆ. ಈ ಪೈಕಿ ನಮೋ ಭಾರತ್ ರ್ಯಾಪಿಡ್ ರೈಲು(ವಂದೇ ಮೆಟ್ರೋ), ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು, ಇದರ ಜೊತೆಗೆ ವಂದೇ ಭಾರತ್ ರೈಲು, ವಂದೇ ಭಾರತ್ ಸ್ಲೀಪರ್ ರೈಲು ಸೇರಿದಂತೆ ಹಲವು ಹೊಸ ರೈಲುಗಳು ಸೇರ್ಪಡೆಯಾಗುತ್ತಿದೆ.
ರೈಲ್ವೇ ಸಚಿವಾಲಯದ ಭಾರತೀಯ ರೈಲ್ವೇ ಟೈಮ್ ಟೇಬಲ್(TAG) ಪ್ರತಿ ವರ್ಷ ಜೂನ್ ತಿಂಗಳ 30 ರಂದು ಪ್ರಕಟಿಸುತ್ತದೆ. ಜುಲೈ 1 ರಿಂದ ಅನ್ವಯವಾಗುತ್ತಿತ್ತು. ಆದರೆ ಈ ಬಾರಿ ಜನವರಿ 1 ರಂದು ಪ್ರಕಟಿಸುತ್ತಿದೆ. ಪ್ರಮುಖವಾಗಿ ರೈಲ್ವೇ ಆಧುನೀಕರಣ ಹಾಗೂ ಹೊಸ ರೈಲು ಸೇರ್ಪಡೆಯಿಂದ ಈ ಬದಲಾವಣೆ ಮಾಡಲಾಗಿದೆ.
ಟೈನ್ಸ್ ಎಟ್ ಎ ಗ್ಲಾನ್ಸ್(TAG) ಪ್ರಮುಖವಾಗಿ ರೂಟ್ ಮ್ಯಾಪ್, ಸ್ಟೇಶನ್ ಇಂಡಿಕೇಶನ್, ರೈಲು ಮಾಹಿತಿ, ಪ್ರಮುಖ ನಿಲುಗಡೆ, ಸಮಯ, ರೈಲು ಹೆಸರು, ಸಂಖ್ಯೆ, ರಿಸರ್ವೇಶನ್, ತತ್ಕಾಲ್ ಸೇರಿದಂತೆ ಹಲವು ಉಪಯುಕ್ತ ಮಾಹಿತಿಗಳನ್ನು ನೀಡುತ್ತದೆ. ಈ ಮಾಹಿತಿ ಪ್ರಯಾಣಿಕರಿಗೆ ಸುಲಭ ಹಾಗೂ ಅಡೆ ತಡೆ ಇಲ್ಲದ ಪ್ರಯಾಣಕ್ಕೆ ನೆರವಾಗುತ್ತದೆ.
ಪ್ರಯಾಣಿಕರ ಉಪಯುಕ್ತ ಮಾರ್ಗದರ್ಶಿಯಾಗಿರುವ TAG ಇದೀಗ ಜನವರಿ 1, 2025ರಂದು ಪ್ರಕಟಗೊಳ್ಳುತ್ತಿದೆ. ಇದು ಪ್ರಿಂಟ್ ಹಾಗೂ ಡಿಜಿಟಲ್ ವರ್ಶನ್‌ನಲ್ಲಿ ಲಭ್ಯವಿದೆ. ಈ TAG ಭಾರತೀಯ ರೈಲ್ವೇಯ ರೈಲು ಹೊರಡು ಸಮಯ, ನಿಲುಗಡೆ, ತುಲುಪ ಸಮಯ ಸೇರಿದಂತೆ ಹಲವು ಮಾಹಿತಿಗಳನ್ನು ಪ್ರಯಾಣಿಕರಿಗೆ ನೀಡಲಿದೆ.
ಹೆಚ್ಚುವರಿ ರೈಲು, ಹೊಸ ರೈಲು, ವಿಶೇಷ ರೈಲು ಸೇರಿದಂತೆ ಎಲ್ಲಾ ರೈಲುಗಳು ಮಾಹಿತಿ ಇದರಲ್ಲಿ ಇರಲಿದೆ. 2024ರಲ್ಲಿ ರೈಲ್ವೇ ಸಚಿವಾಲಯ 70 ಹೊಸ ರೈಲು ಸೇವೆ ಹಾಗೂ 64 ವಂದೇ ಭಾರತ್ ರೈಲು ಸೇವೆ ಆರಂಭಿಸಿತ್ತು. ಇದರ ಜೊತೆಗೆ ರೈಲ್ವೇ ಆಧುನೀಕರಣಕ್ಕೆ ಒತ್ತು ನೀಡಿತ್ತು. ಈ ಬಾರಿ ಸ್ಲೀಪರ್ ವಂದೇ ಭಾರತ್ ಸೇರಿದಂತೆ ಹಲವು ಹೊಸ ಹಾಗೂ ಹೆಚ್ಚುವರಿ ಸೇವೆಗಳ ಮಾಹಿತಿಗಳು ಈ ಟೈಮ್ ಟೇಬಲ್‌ನಲ್ಲಿ ಇರಲಿದೆ.
ಕೆಲ ರೈಲುಗಳ ವೇಗ ಹೆಚ್ಚಿಸಲಾಗಿದೆ. ಹಲವು ಪ್ರಾಯೋಗಿಗ ಪರೀಕ್ಷೆಗಳ ಬಳಿಕ ರೈಲು ವೇಗ ಹೆಚ್ಚಿಸಲಾಗಿದೆ. ಹೀಗಾಗಿ ರೈಲು ಸಮಯದ ವೇಳಾಪಟ್ಟಿಯಲ್ಲೂ ಬದಲಾವಣೆಯಾಗಲಿದೆ. ಇದ ಜನವರಿ 1 ರಂದು ಪ್ರಕಟಗೊಳ್ಳಲಿರುವ ಹೊಸ ಟೈಮ್‌ಟೇಬಲ್‌ನಲ್ಲಿ ಉಲ್ಲೇಖಿಸಲಾಗುತ್ತದೆ. ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ವೇಗವನ್ನು 110 ಕಿ.ಮಿಯಿಂದ ಗಂಟೆಗೆ 130 ಕಿಮಿಗೆ ಹೆಚ್ಚಿಸಲಾಗಿದೆ.