ಕೇರಳದಲ್ಲಿ ಬೋಟ್‌ ಮಗುಚಿ 22 ಮಂದಿ ದುರ್ಮರಣ: ಭಾರತೀಯ ನೌಕಾಪಡೆಯಿಂದ ರಕ್ಷಣಾ ಕಾರ್ಯ; ಅಪ್ಡೇಟ್ಸ್‌ ಇಲ್ಲಿದೆ..

First Published | May 8, 2023, 3:20 PM IST

ಕೇರಳದ ಮಲಪ್ಪುರಂ ಜಿಲ್ಲೆಯ ತಾನೂರ್ ಬಳಿಯ ಒಟ್ಟುಂಬರಂನಲ್ಲಿ ಭಾನುವಾರ ರಾತ್ರಿ 40 ಪ್ರವಾಸಿಗರೊಂದಿಗೆ ಪ್ರವಾಸಿ ದೋಣಿ ಮುಳುಗಿದ ಘಟನೆ ವರದಿಯಾಗಿದೆ. ಈ ಅವಘಡದಲ್ಲಿ ಹೌಸ್‌ಬೋಟ್‌ನಲ್ಲಿದ್ದ ಮಕ್ಕಳು ಸೇರಿ 22 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಅಲ್ಲದೆ, ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿದ್ದು ಹಲವರನ್ನು ಮೇಲೆತ್ತಲಾಗುತ್ತಿದೆ. ಈ ಹಿನ್ನೆಲೆ ಭಾರತೀಯ ನೌಕಾ ಪಡೆ ಸಹ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ . 

ಘಟನೆ ನಡೆದ ಸ್ಥಳದಲ್ಲಿ ಪ್ರಾಥಮಿಕ ವೈಮಾನಿಕ ಸಮೀಕ್ಷೆ ನಡೆಸಲಾಯಿತು. ಎನ್‌ಡಿಆರ್‌ಎಫ್ ಮತ್ತು ಸ್ಥಳೀಯ ಡೈವಿಂಗ್ ತಂಡದೊಂದಿಗೆ ಸಂಪರ್ಕವನ್ನು ಸ್ಥಾಪಿಸಲಾಗಿದೆ. ಶೋಧ ಕಾರ್ಯಾಚರಣೆ ನಡೆಯುತ್ತಿರುವ ಹಿನ್ನೆಲೆ ನಾಗರಿಕ ಆಡಳಿತಕ್ಕೆ ಸಹಾಯ ಮಾಡಲು ನೌಕಾಪಡೆಯ ಹೆಲಿಕಾಪ್ಟರ್‌ಗಳ ಬಹು ವಿಧಗಳನ್ನು ಪ್ಲ್ಯಾನ್‌ ಮಾಡಲಾಗಿದೆ.

ಸಂಜೆ 5 ಗಂಟೆ ಬಳಿಕ ಇಂಥ ಪ್ರವಾಸಿ ಬೋಟ್‌ಗಳ ಸಂಚಾರಕ್ಕೆ ನಿಷೇಧವಿದ್ದರೂ 2 ಅಂತಸ್ತು ಹೊಂದಿರುವ, ಕೇವಲ 2 ಬಾಗಿಲು ಹೊಂದಿರುವ ಹೌಸ್‌ಬೋಟ್‌ ಕಾರ್ಯಾಚರಣೆ ನಡೆಸುತ್ತಿತ್ತು. ಬೋಟ್‌ನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ತುಂಬಿದ್ದ ಕಾರಣ ಸಂಜೆ 6.30ರ ವೇಳೆಗೆ ಏಕಾಏಕಿ ಬೋಟ್‌ ಮಗುಚಿಕೊಂಡು ದುರ್ಘಟನೆ ಸಂಭವಿಸಿದೆ.

Latest Videos

click me!