ಮಂದಿರದಲ್ಲಿ ತಲೆ ಬಾಗುವುದರಿಂದ ಶತ್ರುಗಳನ್ನು ನಡುಗಿಸುವವರೆಗೆ: Bipin Rawat ಅಪರೂಪದ ಫೋಟೋಸ್!

First Published Dec 8, 2021, 8:22 PM IST

ತಮಿಳುನಾಡಿನ ಕೂನೂರಿನಲ್ಲಿ Mi-17V5 ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸಾವನ್ನಪ್ಪಿದ್ದಾರೆ. ಅವರು ಸೂಲೂರು ವಾಯುನೆಲೆಯಿಂದ ವೆಲ್ಲಿಂಗ್ಟನ್‌ಗೆ ಹೋಗುತ್ತಿದ್ದರು. ಅವರ ಜೊತೆಗೆ ಅವರ ಪತ್ನಿ ಮಧುಲಿಕಾ ರಾವತ್ ಕೂಡ ಇದ್ದರು. ಈ ಭೀಕರ ಅಪಘಾತದಲ್ಲಿ ಅವರೂ ಸಾವನ್ನಪ್ಪಿದ್ದಾರೆ. ಜನರಲ್ ಬಿಪಿನ್ ರಾವತ್ ಅವರು 2019 ರಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಹುದ್ದೆಯನ್ನು ಅಲಂಕರಿಸಿದ ಭಾರತೀಯ ಸಶಸ್ತ್ರ ಪಡೆಗಳ ಮೊದಲ ಅಧಿಕಾರಿಯಾಗಿದ್ದಾರೆ. ಜನರಲ್ ಬಿಪಿನ್ ರಾವತ್ ಅವರು ಭಾರತೀಯ ಸೇನಾ ಮುಖ್ಯಸ್ಥರಾಗಿ ನಿವೃತ್ತರಾಗುವ ಒಂದು ದಿನದ ಮೊದಲು ಸಿಡಿಎಸ್ ಎಂದು ಹೆಸರಿಸಲಾಯಿತು. ಅವರು ಗೂರ್ಖಾ ರೆಜಿಮೆಂಟ್‌ನ ಅಧಿಕಾರಿಯಾಗಿದ್ದರು. ಜನರಲ್ ರಾವತ್ ಅವರು ಸೇನಾ ಮುಖ್ಯಸ್ಥರಾದ ಗೂರ್ಖಾ ರೆಜಿಮೆಂಟ್‌ನ ನಾಲ್ಕನೇ ಅಧಿಕಾರಿ ಎಂಬುವುದು ಉಲ್ಲೇಖನೀಯ.

ತಿರುಪತಿ ದೇವಸ್ಥಾನದಲ್ಲಿ ಕುಟುಂಬ ಸಮೇತ ಸಿಡಿಎಸ್ ಬಿಪಿನ್ ರಾವತ್. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿತ್ತು. ಅವರು ದೇವಸ್ಥಾನದ ಮೇಲೆ ತಲೆಬಾಗಿ ನಮಸ್ಕರಿಸುತ್ತಿರುವುದು ಚಿತ್ರದಲ್ಲಿ ಕಂಡುಬರುತ್ತದೆ.

ಅರುಣಾಚಲ ಪ್ರದೇಶದ ಗವರ್ನರ್ ಬ್ರಿಗೇಡಿಯರ್ ಬಿಡಿ ಮಿಶ್ರಾ (ನಿವೃತ್ತ) ಅವರೊಂದಿಗೆ ಸಿಡಿಎಸ್ ಬಿಪಿನ್ ರಾವತ್ ಅವರ ಛಾಯಾಚಿತ್ರ. ಈ ಚಿತ್ರವು ರಾವತ್ ತನ್ನ ಜೀವನವನ್ನು ಹೇಗೆ ಅಲಂಕರಿಸಿಕೊಂಡು ಬದುಕುತ್ತಿದ್ದನೆಂದು ಹೇಳುತ್ತದೆ.

ಕಾರ್ಗಿಲ್‌ನಲ್ಲಿ ನಡೆದ ಕಾರ್ಗಿಲ್ ವಿಜಯ್ ದಿವಸ್ ಆಚರಣೆ ಸಂದರ್ಭದಲ್ಲಿ ಕಿಯಾರಾ ಅಡ್ವಾಣಿ, ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ದೇಶದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್.
 

ನವದೆಹಲಿಯಲ್ಲಿ ಟೋಕಿಯೊ ಒಲಿಂಪಿಕ್ ಚಿನ್ನದ ವಿಜೇತ ನೀರಜ್ ಚೋಪ್ರಾ ಅವರೊಂದಿಗೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್. ನೀರಜ್ ತಂದೆ ತಾಯಿಯೂ ಇದ್ದಾರೆ.


ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನವದೆಹಲಿಯ ಸೌತ್ ಬ್ಲಾಕ್‌ನಲ್ಲಿ ರಕ್ಷಣಾ ಸೇವೆಗಳಿಗೆ (DFPDS) 2021 ರ ಆರ್ಥಿಕ ಅಧಿಕಾರಗಳ ನಿಯೋಗವನ್ನು ಬಿಡುಗಡೆ ಮಾಡಿದರು. ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಮತ್ತು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕರಂಬಿರ್ ಸಿಂಗ್ ಉಪಸ್ಥಿತರಿದ್ದರು.
 

ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರು ರಷ್ಯಾದ ಒರೆನ್‌ಬರ್ಗ್‌ನಲ್ಲಿ ರಷ್ಯಾದ ಒಕ್ಕೂಟದ ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್ ಮುಖ್ಯಸ್ಥ ಆರ್ಮಿ ಜನರಲ್ ವ್ಯಾಲೆರಿ ಗೆರಾಸಿಮೊವ್ ಅವರೊಂದಿಗೆ ಸಭೆ ನಡೆಸಿದ್ದರು

ವಾಷಿಂಗ್ಟನ್‌ನ ಜಂಟಿ ಬೇಸ್ ಲೆವಿಸ್-ಮ್ಯಾಕ್‌ಕಾರ್ಡ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ USA ಸೇನೆಯ ಸಿಬ್ಬಂದಿಗಳೊಂದಿಗೆ ಭಾರತದ ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್.

ನಾಗ್ಪುರದಲ್ಲಿ ಸೋಲಾರ್ ಗ್ರೂಪ್ ಆಫ್ ಕಂಪನಿಗಳು ತಯಾರಿಸಿದ ಶಸ್ತ್ರಸಜ್ಜಿತ ಡ್ರೋನ್‌ನ ಮಾದರಿಯ ಪ್ರದರ್ಶನದಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್.


ನವದೆಹಲಿಯ DRDO ಭವನದಲ್ಲಿ ವಿಪತ್ತು ನಿರ್ವಹಣೆ ಕುರಿತು PANEX-21 ವ್ಯಾಯಾಮದ ಸಂದರ್ಭದಲ್ಲಿ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್, CDS ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ.
 

ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರು ಸಿಖ್ಖರ ಪವಿತ್ರ ಕ್ಷೇತ್ರವಾದ ಶ್ರೀ ಹರ್ಮಂದಿರ್ ಸಾಹಿಬ್‌ಗೆ ಪೂಜೆ ಸಲ್ಲಿಸಲು ತೆರಳಿದ್ದರು. ಈ ಸಂದರ್ಭದಲ್ಲಿ ಪತ್ನಿ ಮಧುಲಿಕಾ ರಾವತ್ ಜೊತೆಗಿದ್ದರು. 

click me!