ಐಷಾರಾಮಿ ಜೀವನ ನಡೆಸುವ ಸಲುವಾಗಿ 26ಕ್ಕೂ ಅಧಿಕ ಮನೆಗಳ್ಳತನ ಮಾಡಿದ್ದ ಐಟಿ ಉದ್ಯೋಗಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಾಫ್ಟ್‌ವೇರ್ ಇಂಜಿನೀಯರ್ ಆಗಿದ್ದ ಆರೋಪಿ, ಕದ್ದ ಹಣದಿಂದ ಬಿಎಂಡಬ್ಲ್ಯು ಕಾರ್ ಖರೀದಿಸಿ, ವಿದೇಶ ಪ್ರವಾಸ ಮಾಡುತ್ತಿದ್ದನು.
ಐಷಾರಾಮಿ ಜೀವನ ನಡೆಸುವ ಸಲುವಾಗಿ ಕಳ್ಳತನಕ್ಕೆ ಇಳಿದಿದ್ದ ಐಟಿ ಉದ್ಯೋಗಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಶಾಖಪಟ್ಟಣದಲ್ಲಿ ನಡೆದ 26ಕ್ಕೂ ಅಧಿಕ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಟೆಕ್ಕಿಯನ್ನು ಬಂಧಿಸಲಾಗಿದೆ. ಆಂಧ್ರಪ್ರದೇಶದಲ್ಲಿಯೂ 60ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ವರದಿಯಾಗಿದೆ.
25
ಬಿಎಂಡಬ್ಲ್ಯು ಕಾರ್‌ಗಾಗಿಯೇ ಕಳ್ಳತನ
ಅಚ್ಚಿ ಮಹೇಶ್ ರೆಡ್ಡಿ ಅಲಿಯಾಸ್ ಸನ್ನಿ (27) ಬಂಧಿತ ಟೆಕ್ಕಿ. ಹೈದರಾಬಾದ್‌ನಲ್ಲಿ ಸಾಫ್ಟ್‌ವೇರ್ ಇಂಜಿನೀಯರ್‌ನಾಗಿ ಕೆಲಸ ಮಾಡಿಕೊಂಡಿದ್ದ ಅಚ್ಚಿ ಮಹೇಶ್ ರೆಡ್ಡಿಗೆ ಐಷಾರಾಮಿ ಜೀವನಶೈಲಿ ನಡೆಸುವ ಆಸೆ ಇತ್ತು. ತನಗೆ ಬರುತ್ತಿದ್ದ ಸಂಬಳದಲ್ಲಿ ಕನಸುಗಳು ಈಡೇರದ ಹಿನ್ನೆಲೆ ಕಳ್ಳತನಕ್ಕೆ ಇಳಿದಿದ್ದನು. ಬಿಎಂಡಬ್ಲ್ಯು ಕಾರ್‌ಗಾಗಿಯೇ ಅಚ್ಚಿ ಕಳ್ಳತನ ಮಾಡ್ತಿದ್ದ ಎಂದು ವಿಶಾಖಪಟ್ಟಣ ಪೊಲೀಸರು ಮಾಹಿತಿ ನೀಡಿದ್ದಾರೆ.
35
ಹೈದರಾಬಾದ್‌ನ ಐಟಿ ಕಂಪನಿಯಲ್ಲಿ ಕೆಲಸ
ಸ್ನಾತಕೋತ್ತರ ಪದವೀಧರನಾಗಿರುವ ಆರೋಪಿ ಟೆಕ್ಕಿ ಕಾಕಿನಾಡ ಜಿಲ್ಲೆಯ ಮೂಲದವನಾಗಿದ್ದು, ವೈಜಾಗ್ ನಗರದ ಮಾಧವಧಾರ ಪ್ರದೇಶದ ಪಾರ್ಕ್ ಸ್ಟ್ರೀಟ್‌ನ ನಿವಾಸಿಯಾಗಿದ್ದಾನೆ. ಹೈದರಾಬಾದ್‌ನ ಐಟಿ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನೀಯರ್‌ನಾಗಿಯೂ ಕೆಲಸ ಮಾಡಿಕೊಂಡಿದ್ದನು. ಕದ್ದ ಹಣದಿಂದಲೇ ಆರೋಪಿ ಐಷಾರಾಮಿ ಬಿಎಂಡಬ್ಲ್ಯು ಕಾರ್ ಬಳಸುತ್ತಿದ್ದನು. ಆಗಾಗ್ಗೆ ವಿದೇಶ ಪ್ರವಾಸಗಳಿಗೆ ಹೋಗುತ್ತಿದ್ದನು.
ಬಂಧಿತ ಅಚ್ಚಿ ಮಹೇಶ್ ರೆಡ್ಡಿ ವಿರುದ್ಧ ಸದ್ಯ ಒಟ್ಟು 26 ಪ್ರಕರಣಗಳು ದಾಖಲಾಗಿವೆ. 1,084.94 ಗ್ರಾಂ ಚಿನ್ನ, 6,333.5 ಗ್ರಾಂ ಬೆಳ್ಳಿ ಮತ್ತು ₹40,500 ನಗದು ಕಳ್ಳತನ ಪ್ರಕರಣಗಳಲ್ಲಿ ಅಚ್ಚಿ ಹೆಸರು ಸೇರಿದೆ. ಸದ್ಯ ಬಂಧಿತನಿಂದ 699 ಗ್ರಾಂ ಚಿನ್ನಾಭರಣ ಮತ್ತು 3.805 ಕೆಜಿ ಬೆಳ್ಳಿ ಆಭರಣ, ₹15.63 ಲಕ್ಷ ಮೌಲ್ಯದ ಎಲ್ಲಾ ಆಸ್ತಿ ಮತ್ತು ಬಿಎಂಡಬ್ಲ್ಯು ಕಾರ್ ವಶಪಡಿಸಿಕೊಳ್ಳಲಾಗಿದೆ.
ಮನೆ ಕಳ್ಳತನ ವೇಳೆ ಆರೋಪಿ ಟೆಕ್ಕಿ, ಮಾಸ್ಕ್, ಕ್ಯಾಪ್ ಮತ್ತು ಕೈಗವಸುಗಳನ್ನು ಧರಿಸುತ್ತಿದ್ದನು. ಸುತ್ತಿಗೆ, ಸ್ಕ್ರೂಡ್ರೈವರ್, ಕಟಿಂಗ್ ಪ್ಲಯರ್ ಮತ್ತು ಡ್ರಿಲ್ಲಿಂಗ್ ಯಂತ್ರ ಬಳಸಿ ಮನೆ ಬಾಗಿಲುಗಳನ್ನು ಒಡೆಯುತ್ತಿದ್ದನು. 14ನೇ ವಯಸ್ಸಿನಲ್ಲಿಯೇ ಕಳ್ಳತನ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಈತ ಬಾಲಾಪರಾಧಿಯಾಗಿ ರಾಜಮಂಡ್ರಿ ಜೈಲಿನಲ್ಲಿ 14 ತಿಂಗಳು ಶಿಕ್ಷೆ ಅನುಭವಿಸಿದ್ದನು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ