ಸರಸದಲ್ಲಿದ್ದಾಗಲೇ ಹೆಂಡ್ತಿಯನ್ನ ಹಿಡಿದ ಗಂಡ; ಚಿನ್ನ, ರನ್ನ ಅಂತಿದ್ದವ್ಳ ಅಸಲಿಯತ್ತು ಬಯಲು

Published : Mar 16, 2026, 02:10 PM IST

ಪ್ರಿಯಕರನೊಂದಿಗೆ ಲಾಡ್ಜ್‌ನಲ್ಲಿದ್ದ ಪತ್ನಿಯನ್ನು ಪತಿಯೇ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾನೆ. ಈ ಹಿಂದೆ ಪತಿಯ ವಿರುದ್ಧವೇ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದ ಪತ್ನಿ, ಪ್ರಿಯಕರನ ಜೊತೆ ಹೊಸ ಜೀವನ ನಡೆಸಲು ಯೋಜಿಸಿದ್ದಳು. ಪೊಲೀಸರ ಸಹಾಯದಿಂದ ಪತಿ ಈ ಅಕ್ರಮ ಸಂಬಂಧವನ್ನು ಬಯಲಿಗೆಳೆದಿದ್ದಾನೆ.

PREV
15
ಪ್ರಿಯಕರನೊಂದಿಗೆ ಸರಸ

ಲಾಡ್ಜ್‌ ಕೋಣೆಯಲ್ಲಿ ಪ್ರಿಯಕರನೊಂದಿಗೆ ಸರಸದಲ್ಲಿದ್ದಾಗಲೇ ಪತ್ನಿಯನ್ನು ರೆಡ್ ಹ್ಯಾಂಡ್‌ ಆಗಿ ಪತಿ ಹಿಡಿದಿದ್ದಾನೆ. ಅಕ್ರಮ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಪತಿ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಿದ್ದಾಳೆ. ಹೋಟೆಲ್‌ನಲ್ಲಿರುವಾಗಲೇ ಹಿಡಿದಾಗ ಮಖ ಮುಚ್ಕೊಂಡು ಹೊರಗೆ ಬಂದಿದ್ದಾಳೆ. ಪೊಲೀಸರ ಜೊತೆಯಲ್ಲಿ ಹೋಟೆಲ್ ಮೇಲೆ ದಾಳಿ ನಡೆಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

25
ಪ್ರೀತಿಸಿ ಮದುವೆಯಾದ್ರೂ ಅಕ್ರಮ ಸಂಬಂಧ

ಮೂರುವರೆ ವರ್ಷಗಳ ಹಿಂದೆ ಬುಲಂದ್‌ಶಹರ್ ಜಿಲ್ಲೆಯ ಗಲಾವಟಿ ನಿವಾಸಿ ಆಕಾಶ್ ಕುಮಾರ್ ಮದುವೆ ಮಹಿಮಾರಾಣಿ ಜೊತೆಯಲ್ಲಿ ನಡೆದಿತ್ತು. ಆಕಾಶ್‌ನನ್ನು ಪ್ರೀತಿಸಿ ಮದುವೆಯಾದ್ರೂ ನಿಖಿಲ್ ಎಂಬಾತನೊಂದಿಗೆ ಮಹಿಮಾರಾಣಿ ಅಕ್ರಮ ಸಂಬಂಧ ಹೊಂದಿದ್ದಳು. ಈ ಹಿಂದೆ ಅನುಮಾನದಿಂದ ಪ್ರಶ್ನೆ ಮಾಡಿದಾಗ ಗಂಡ ಆಕಾಶ್ ಮೇಲೆ ಆಣೆ ಪ್ರಮಾಣ ಮಾಡಿದ್ದಳು. ತಿಂಗಳ ಹಿಂದಯಷ್ಟೇ ಗಂಡನ ವಿರುದ್ದ ವರದಕ್ಷಿಣೆ ಆರೋಪ ಮಾಡಿದ್ದಳು.

35
ಗಂಡ ಆಕಾಶ್ ಕುಮಾರ್ ಹೇಳಿದ್ದೇನು?

ಇವತ್ತು ಅಲಿಗಢನಲ್ಲಿರುವ ಸೋದರಿ ಬಳಿ ಬಂದಿದ್ದೆ. ನಗರದಲ್ಲಿ ಸುತ್ತಾಡುವಾಗ ನಿಖಿಲ್ ಜೊತೆ ಪತ್ನಿ ಮಹಿಮಾರಾಣಿ ಕಾಣಿಸಿಕೊಂಡಳು. ಅವರಿಬ್ಬರಿಗೂ ತಿಳಿಯದಂತೆ ನಾನು ಹಿಂಬಾಲಿಸಿಕೊಂಡು ಬಂದೆ. ಇಬ್ಬರು ಹೋಟೆಲ್‌ಗೆ ಬಂದು ಆಧಾರ್ ಕಾರ್ಡ್ ನೀಡಿ ಕೋಣೆಯೊಂದನ್ನು ಪಡೆದುಕೊಂಡರು. ನಾನು ಕೂಡಲೇ 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ವಿಷಯ ತಿಳಿಸಿದ ಎಂದು ಅಕಾಶ್ ಕುಮಾರ್ ಹೇಳಿದ್ದಾರೆ.

45
ನಿಖಿಲ್ ಜೊತೆ ಹೊಸ ಜೀವನಕ್ಕೆ ಪ್ಲಾನ್

ಮುಂದುವರಿದು ಮಾತನಾಡಿರುವ ಆಕಾಶ್ ಕುಮಾರ್, ಇಬ್ಬರು ಕೋಣೆ ಸಂಖ್ಯೆ 303ರೊಳಗೆ ಹೋದರು. ಹೋಟೆಲ್‌ಗೆ ಬಂದ ಪೊಲೀಸರಿಗೆ ವಿಷಯ ತಿಳಿಸಿದಾಗ ಅವರು ಮತ್ತೋರ್ವ ಹಿರಿಯ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಿದರು. ನಂತರ ನಾವೆಲ್ಲರೂ ಕೋಣೆಗೆ ಹೋದಾಗ ಇಬ್ಬರು ಹೊರಗೆ ಬಂದರು. ನಿಖಿಲ್ ಬಟ್ಟೆ ಹಾಕಿಕೊಂಡು ಬಂದಿದ್ದಾನೆ. ನನ್ನ ವಿರುದ್ಧ ಸುಳ್ಳು ಆರೋಪ ಹೊರಿಸಿ ನಿಖಿಲ್ ಜೊತೆ ಹೊಸ ಜೀವನ ಕಟ್ಟಿಕೊಳ್ಳಲು ಪತ್ನಿ ಪ್ಲಾನ್ ಮಾಡಿದ್ದಳು ಎಂಬ ವಿಚಾರವನ್ನು ಆಕಾಶ್ ಕುಮಾರ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಹಾಯ್, ಹೆಲೋ ಅಂತಾಳೆ, ಲಾಡ್ಜ್‌ಗೆ ಕರೀತಾಳೆ; ಸ್ನಾನ ಮಾಡಿ ಅಂತ ಬಟ್ಟೆ ಬಿಚ್ಚಿಸ್ತಾಳೆ!

55
ಚಿನ್ನ ರನ್ನ ಅಂತೇಳಿದ್ಳು

ಮನೆಯಲ್ಲಿದ್ದಾಗಲೂ ನಿಖಿಲ್ ಜೊತೆಗಿನ ಸಂಬಂಧದ ಬಗ್ಗೆ ಅನುಮಾನ ವ್ಯಕ್ತಪಡಿಸಿದಾಗ ನನ್ನ ಮೇಲೆ ಆಣೆ ಪ್ರಮಾಣ ಮಾಡಿದ್ದಳು. ನೀನೇ ನನ್ನ ಚಿನ್ನ ರನ್ನ ಅಂತೇಳಿ ಯಾವುದೇ ಅಕ್ರಮ ಸಂಬಂಧವಿಲ್ಲ ಎಂದಿದ್ದಳು. ಮದುವೆಯಲ್ಲಿ 5 ಲಕ್ಷ ವರದಕ್ಷಿಣೆ ನೀಡಿ 15 ಲಕ್ಷ ವೆಚ್ಚದಲ್ಲಿ ಮದುವೆ ಮಾಡಿಕೊಡಲಾಗಿದೆ ಎಂದು ಆರೋಪಿಸಿದ್ದಾಳೆ. ನನಗೆ ಯಾವುದೇ ಹಣವನ್ನೂ ನೀಡಿಲ್ಲ. ನಮ್ಮಿಬ್ಬರದ್ದು ಲವ್ ಮ್ಯಾರೇಜ್ ಎಂದು ಆಕಾಶ್ ಹೇಳಿದ್ದಾರೆ.

ಇದನ್ನೂ ಓದಿ: Mandya: ಹೋಟೆಲ್‌ ಟಾಯ್ಲೆಟ್‌ನಲ್ಲಿ ಮೊಬೈಲಿಟ್ಟು ವಿಡಿಯೋ ರೆಕಾರ್ಡಿಂಗ್: ಸಪ್ಲೈಯರ್ ಬಂಧನ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories