ಕೋಲ್ಕತ್ತಾ(ಏ. 09) ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಕಾವು. ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಡ್ ಶೋ ನಡೆಸಿದ್ದು ಬಿಜೆಪಿ ಪರ ಮತಯಾಚನೆ ಮಾಡಿದ್ದಾರೆ. ಪಂಚರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಮಧ್ಯಗ್ರಾಮ್ ನಲ್ಲಿ ಹಮ್ಮಿಕೊಂಡಿದ್ದ ಅಮಿತ್ ಶಾ ರೋಡ್ ಶೋಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮಂಗಳವಾರ ತಮಿಳುನಾಡು, ಪುದುಚೇರಿ ಹಾಗೂ ಕೇರಳದಲ್ಲಿ ಒಂದನೇ ಹಂತ ಹಾಗೂ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ 3ನೇ ಹಂತದ ಮತದಾನ ನಡೆದಿದೆ. ಪಶ್ಚಿಮ ಬಂಗಾಳ ಹೊರತುಪಡಿಸಿ ಉಳಿದ 4 ರಾಜ್ಯಗಳಲ್ಲಿ ಚುನಾವಣೆ ಮುಕ್ತಾಯಗೊಂಡಿದೆ. ಮೇ.2 ರಂದು ಫಲಿತಾಂಶ ಪ್ರಕಟವಾಗಲಿದ್ದು ಇದು ದಿಕ್ಸೂಚಿ ಎಂದೆ ಹೇಳಲಾಗಿದೆ. ಅನೇಕ ಬದಲಾವಣೆಗಳ ನಂತರ ದೇಶದಲ್ಲಿ ಚುನಾವಣೆ ನಡೆಯುತ್ತಿದೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಪ್ರಧಾನಿ ಮೋದಿ ನಡುವಿನ ಹೋರಾಟ ಎಂದೇ ಬಣ್ಣಿಸಲಾಗಿದೆ. ಬಿಜೆಪಿ ವಿಜಯದೊಂದಿಗೆ ಬಂಗಾಳದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಲಿದೆ ಎಂದು ಮೋದಿ ಸಾರಿ ಸಾರಿ ಹೇಳಿದ್ದಾರೆ. ಮುಸ್ಲಿಮರ ಮತ ಬ್ಯಾಂಕ್ ಮಮತಾ ಕೈತಪ್ಪಿದೆ ಎಂಬುವ ಮಾತುಗಳು ಕೇಳಿಬಂದಿದ್ದವು. ಸುಮಾರು ಆರು ತಿಂಗಳಿನಿಂದಲೇ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಕಾವು ಮನೆಮಾಡಿತ್ತು. ಅಮಿತ್ ಶಾ ರೋಡ್ ಶೋನಲ್ಲಿ ಜನಸ್ತೋಮವೇ ನೆರೆದಿದ್ದು ಇವೆಲ್ಲ ಮತಗಳಾಗಿ ಬದಲಾಗುತ್ತವೆಯೇ ಎಂದು ನೋಡಬೇಕಿದೆ. ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಹಲವು ಕಡೆ ಸ್ಥಳೀಯ ಪಕ್ಷಗಳೊಂದಿಗೆ ದೋಸ್ತಿ ಮಾಡಿಕೊಂಡು ಸ್ಪರ್ಧಿಸಿದೆ. ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಟಿಎಂಸಿ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಕಂಡುಬಂದಿದೆ. ಚುನಾವಣೆಗೈ ಮುನ್ನ ಟಿಎಂಸಿಯ ದೊಡ್ಡ ದೊಡ್ಡ ನಾಐಕರು ಪಕ್ಷ ತೊರೆದು ಬಿಜೆಪಿಯ ಕೈ ಹಿಡಿದಿದ್ದರು. ಅಮಿತ್ ಶಾ ರೋಡ್ ಶೋ 5 state elections Union Home minister amit shah roadshow in west Bengal Photos ಬಂಗಾಳದಲ್ಲಿ ಅಮಿತ್ ಶಾ ರೋಡ್ ಶೋ.. ಜನಸ್ತೋಮ