'ಪಲ್ಟಿ ಮಾಡಿ'  ಜನರಿಗೆ ಮೋದಿ ಕರೆ,  ಬದಲಾಗಲಿದೆ ಬಂಗಾಳ

First Published | Apr 6, 2021, 7:04 PM IST

ಕೋಲ್ಕತ್ತಾ (ಏ 06) ಪಶ್ಚಿಮ ಬಂಗಾಳದಲ್ಲಿ ಮೋದಿ ಅಲೆ ನಿರ್ಮಾಣವಾಗಿದೆ.   ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ವಿಧಾನಸಭಾ ಚುನಾವಣಾ ಮತದಾನದ  ನಡೆಯಲಿದ್ದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ. ಜತೆಗೆ ಒಂದು ಸ್ಲೋಗನ್ ಸಹ ಪರಿಚಯ ಮಾಡಿದ್ದಾರೆ.

ಕೂಚ್ ಬೆಹರ್ ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೀದಿ ವಿರುದ್ಧ ಹರಿಹಾಯ್ದರು.
ನಂದಿಗ್ರಾಮ ಚುನಾವಣಾ ಫಲಿತಾಂಶದ ನಂತರ ರಮಮತಾ ಬ್ಯಾನರ್ಜಿ ರಾಜಕಾರಣ ಅಂತ್ಯವಾಗಲಿದೆ ಎಂದರು.
Tap to resize

ಚಲೋ ಪಲ್ಟಿ' (ಬದಲಾವಣೆ ಆರಂಭಿಸಿ) ಎಂದು ಜನರಲ್ಲಿ ಕೇಳಿಕೊಂಡರು.
ಟೀ ಎಸ್ಟೇಟ್ ಕೆಲಸಗಾರರು, ಕಾರ್ಮಿಕರ ಕಲ್ಯಾಣ ಬಂಗಾಳದಿಂದ ದೂರವಾಗಿದೆ ಎಂದು ಆರೋಪಿಸಿದರು.
ಮಮತಾ ರಾಜಕಾರಣವನ್ನು ಫುಟ್ ಬಾಲ್ ಎಂದು ಅಂದುಕೊಂಡಿದ್ದಾರೆ. ಅದಕ್ಕೆ ಜನರೆ ಉತ್ತರ ನೀಡಲಿದ್ದಾರೆ.
ಪಶ್ಚಿಮ ಬಂಗಾಳದ 2ನೇ ಹಂತದ ಮತದಾನದಲ್ಲಿ ಶೇ.80ರಷ್ಟು ಮತದಾನ ನಡೆದಿರುವ ಬಗ್ಗೆ ಮಮತಾ ಬ್ಯಾನರ್ಜಿ ಅವರಿಗೆ ಸಂತೋಷವಿಲ್ಲ. ಮತದಾರರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಮನಸ್ಥಿತಿಯೂ ಅವರಲ್ಲಿ ಇಲ್ಲ.
ವಾರಣಾಸಿಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಒಂದು ಸಾರಿ ಹೇಳುತ್ತೀರಿ.. ಅಂದರೆ ನಿಮಗೆ ಈಗಾಗಲೇ ಸೋಲಿನ ಸುಳಿವು ಸಿಕ್ಕಿದೆಯೇ ಎಂದು ಪ್ರಶ್ನೆ ಮಾಡಿದರು.
ಮೂರನೇ ಹಂತದಲ್ಲಿ 31 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.
ಹೂಗ್ಲಿ ಜಿಲ್ಲೆಯ 8, ಹೌರಾ ಜಿಲ್ಲೆಯ 9 ಹಾಗೂ ದಕ್ಷಿಣದ 24 ಪರಗಣ ಜಿಲ್ಲೆಯ 16 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಸಲಾಗಿದೆ.
ಈ ಹಂತದಲ್ಲಿ 205 ಅಭ್ಯರ್ಥಿಗಳು ಕಣದಲ್ಲಿದ್ದು, 13 ಮಹಿಳಾ ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಎರಡು ಹಂತದ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ.
ಮಾರ್ಚ್ 27ರಂದು ಮೊದಲ ಹಂತದ ಚುನಾವಣೆ, ಏಪ್ರಿಲ್ 1ರಂದು ಎರಡನೇ ಹಂತದ ಚುನಾವಣೆ ನಡೆದಿದೆ.
ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಮತ್ತು ಏಪ್ರಿಲ್ 29ರಂದು ಮತದಾನ ನಡೆಯಲಿದೆ.
ಚುನಾವಣೆಯ ಅಂತಿಮ ಫಲಿತಾಂಶ ಮೇ 2ರಂದು ಹೊರ ಬೀಳಲಿದೆ.
ಪಂಚರಾಜ್ಯ ಚುನಾವಣೆ ದೇಶದ ರಾಜಕಾರಣದ ದಿಕ್ಸೂಚಿಯಾಗಿ ಬದಲಾಗಲಿದೆಯಾ ಎಂಬುದನ್ನು ಕಾಲವೇ ನಿರ್ಧರಿಸಲಿದೆ.

Latest Videos

click me!