ನಗರ ಆಯ್ತು ಇದೀಗ ಡ್ರ್ಯಾಗನ್ ಫ್ರೂಟ್ ಹೆಸರು ಬದಲಿಸಿದ ಗುಜರಾತ್ ಸರ್ಕಾರ!

First Published Jan 20, 2021, 3:28 PM IST

ಉತ್ತರ ಪ್ರದೇಶ ಸರ್ಕಾರ ನಗರ ಪಟ್ಟಣದ ಹೆಸರು ಬದಲಿಸಿ ಭಾರಿ ಸಂಚಲನ ಸೃಷ್ಟಿಸಿತ್ತು. ಇದೀಗ ಗುಜರಾತ್ ಸರ್ಕಾರ ಡ್ರ್ಯಾಗನ್ ಫ್ರೂಟ್ ಹೆಸರನ್ನೇ ಬದಲಿಸಿದೆ. ಹೊಸ ಹೆಸರು ಹಾಗೂ ಅದಕ್ಕೆ ಬಂದಿರುವ ಪ್ರತಿಕ್ರಿಯೆ ಇನ್ನೂ ಅದ್ಬುತವಾಗಿದೆ.
 

ಭಾರತದಲ್ಲಿ ನಗರ ಪಟ್ಟಣ, ರಸ್ತೆಗಳ ಹೆಸರು ಬದಲಾವಣೆ ಟ್ರೆಂಡ್ ಸದ್ಯಕ್ಕೆ ಕಡಿಮೆಯಾಗಿದೆ. ಇದೀಗ ಹಣ್ಣುಗಳ ಹೆಸರು ಬದಲಿಸುವ ಟ್ರೆಂಡ್ ಆರಂಭಗೊಂಡಿದೆ. ಮೂಲ ಹೆಸರು ಕಳೆದುಕೊಂಡು ಇದೀಗ ಹೊಸ ಹೆಸರಿಗೆ ಗುರಿಯಾಗಿರುವುದು ಡ್ರ್ಯಾಗನ್ ಫ್ರೂಟ್. ಗುಜರಾತ್ ಸರ್ಕಾರ ಇದೀಗ ಡ್ರ್ಯಾಗನ್ ಫ್ರೂಟ್ ಹೆಸರು ಬದಲಿಸಿದೆ.
undefined
ಗುಜರಾತ್‌ನಲ್ಲಿ ಇನ್ನುಮುಂದೆ ಡ್ರ್ಯಾಗನ್ ಫ್ರೂಟ್ ಎಂದರೆ ನಿಮಗೆ ಸಿಗುವುದಿಲ್ಲ. ಕಾರಣ ಡ್ರ್ಯಾಗಾನ್ ಫ್ರೂಟ್ ಹೆಸರು ಇದೀಗ ಕಮಲಂ ಆಗಿ ಬದಲಾಗಿದೆ. ಅಷ್ಟಕ್ಕೂ ಈ ರೀತಿ ಹೆಸರು ಬದಲಿಸಿದ್ದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ.
undefined
ಅರೆ ಗುಜರಾತ್‌ನ ಬಿಜೆಪಿ ಸರ್ಕಾರ ತನ್ನ ಪಕ್ಷದ ಚಿಹ್ನೆಯನ್ನೇ ಡ್ರ್ಯಾಗನ್ ಫ್ರೂಟ್‌ಗೆ ಇಟ್ಟಿದೆ ಎಂದುಕೊಂಡರೆ ತಪ್ಪು. ಇದು ಬಿಜೆಪಿ ಪಕ್ಷದ ಚಿಹ್ನೆಯಿಂದ ಹುಟ್ಟಿಕೊಂಡ ಹೆಸರಲ್ಲ.
undefined
ಡ್ರ್ಯಾಗನ್ ಫ್ರೂಟ್‌ಗೆ ಕಮಲಂ ಎಂಬ ಹೆಸರಿಡಲು ಗುಜರಾತ್ ಸರ್ಕಾರ ಕಾರಣ ನೀಡಿದೆ. ಡ್ರ್ಯಾಗನ್ ಫ್ರೂಟ್ ಹೊರಭಾಗದಲ್ಲಿ ಕಮಲದ ಎಸಳಿನ ರೀತಿ ಆಕಾರವಿದೆ. ಇನ್ನು ನೇರ ಹಿಡಿದರೆ ಇದು ಕಮಲದ ಆಕೃತಿಯನ್ನು ಹೋಲುತ್ತದೆ. ಹೀಗಾಗಿ ಇದಕ್ಕೆ ಕಮಲಂ ಎಂಬ ಹೆಸರಿಟ್ಟಿದ್ದೇವೆ ಎಂದು ವಿಜಯ್ ರೂಪಾನಿ ಹೇಳಿದ್ದಾರೆ.
undefined
ಕಮಲ ಹೆಸರಿನ ಸಂಸ್ಕೃತ ರೂಪ ಕಮಲಂ. ಹೀಗಾಗಿ ಸಂಸ್ಕೃತ ಹೆಸರನ್ನಿಡಲಾಗಿದೆ. ಹಾಗಾದರೆ ಡ್ರ್ಯಾಗನ್ ಹೆಸರು ಬದಲಾಯಿಸುವ ಅಗತ್ಯವೇನಿತ್ತು ಅನ್ನೋದಕ್ಕೂ ಗುಜರಾತ್ ಸರ್ಕಾರದ ಬಳಿ ಉತ್ತರವಿದೆ.
undefined
ಡ್ರ್ಯಾಗನ್ ಹೆಸರು ಚೀನಾದಲ್ಲಿ ಬಳಕೆಯಾಗುವ ಹೆಸರು. ಚೀನಾ ದೇಶಕ್ಕೆ ಕರೆಯುವ ಇನ್ನೊಂದು ಹೆಸರು ಡ್ರ್ಯಾಗನ್ ರಾಷ್ಟ್ರ. ಹೀಗಾಗಿ ಗುಜರಾತ್‌ನಲ್ಲಿ ಬೆಳೆಯುವ ಹಣ್ಣಗಿ ಚೀನಾ ಹೆಸರೇಕೆ ಅನ್ನೋದು ಗುಜರಾತ್ ವಾದ.
undefined
ಗುಜರಾತ್‌ನಲ್ಲಿ ಡ್ರ್ಯಾಗನ್ ಫ್ರೂಟ್‌ಗೆ ಹೆಚ್ಚಿನ ಬೇಡಿಕೆ ಇದೆ. ಇಷ್ಟೇ ಅಲ್ಲ ಗುಜರಾತ್‌ನಲ್ಲಿ ಹೆಚ್ಚಾಗಿ ಡ್ರ್ಯಾಗನ್ ಫ್ರೂಟ್ ಬೆಳೆಯಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ನಿರ್ಧಾರವನ್ನು ವ್ಯಂಗ್ಯವಾಡಿದ್ದಾರೆ.
undefined
click me!