ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳುತ್ತಿರುವ ದೇಶದ ಮೊದಲ ಮಹಿಳಾ ಪೈಲೆಟ್ ಭಾವನಾ ಕಾಂತ್!

First Published Jan 18, 2021, 8:35 PM IST

ಭಾವನಾ ಕಾಂತ್..ಭಾರತದ ಮಹಿಳಾ ಫೈಟರ್ ಜೆಟ್ ಪೈಲೆಟ್. ಈಗಾಗಲೇ ಹಲವು ದಾಖಲೆ ಬರೆದಿರುವ ಭಾವನಾ ಕಾಂತ್, ಇದೀಗ ಮತ್ತೊಂದು ಇತಿಹಾಸ ನಿರ್ಮಿಸಲು ಸಜ್ಜಾಗಿದ್ದಾರೆ. ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ದಿನಾಚರಣೆ ಪರೇಡ್‌ನಲ್ಲಿ ಭಾವನಾ ಕಾಂತ್, ಮಿಗ್ 21 ಫೈಟರ್ ಜೆಟ್ ಮೂಲಕ ಸಾಹಸ ಪ್ರದರ್ಶಿಸಲಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಫೈಟರ್ ಜೆಟ್ ವಿಮಾನ ಹಾರಿಸಲು ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳೆ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತೀಯ ವಾಯುಸೇನೆಯ ಭಾವನಾ ಕಾಂತ್ ಇದೀಗ ಮತ್ತೊಂದು ಸಾಧನೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಭಾರತದ ಗಣರಾಜ್ಯೋತ್ಸವ ಪರೇಡ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಾಲ್ಗೊಳ್ಳುತ್ತಿರುವ ಫೈಟರ್ ಜೆಟ್ ಮಹಿಳಾ ಪೈಲೆಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
undefined
ಬಾಲ್ಯದಿಂದ ಗಣರಾಜ್ಯೋತ್ಸವ ಪರೇಡ್‌ನ್ನು ಟಿವಿಯಲ್ಲಿ ನೋಡುತ್ತಿದ್ದೆ. ಇದೀಗ ಅದೇ ಪರೇಡ್‌ನಲ್ಲಿ ನಾನು ಪಾಲ್ಗೊಳ್ಳುತ್ತಿದ್ದೇನೆ ಅನ್ನೋದೇ ಹೆಮ್ಮೆಯ ವಿಚಾರ ಎಂದು ಭಾವನಾ ಕಾಂತ್ ಸಂತಸ ಹಂಚಿಕೊಂಡಿದ್ದಾರೆ. ಬೈಕನೆರ್ ನಲ್ ವಾಯುನೆಲೆಯಲ್ಲಿ ಮಿಗ್-21 ಫೈಟರ್ ಜೆಟ್ ಏರ್‌ಕ್ರಾಫ್ಟ್ ಪೈಲೆಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಭಾವನಾ ಕಾಂತ್, ಇದೀಗ ಹೊಸ ಇತಿಹಾಸ ರಚಿಸಲು ಸಜ್ಜಾಗಿದ್ದಾರೆ.
undefined
ಮಿಗ್ 21 ಮಾತ್ರವಲ್ಲ, ರಾಫೆಲ್, ಸುಖೋಯ್ ಸೇರಿದಂತೆ ಇತರ ಫೈಟರ್ ಏರ್‌ಕ್ರಾಫ್ಟ್ ಹಾರಿಸಲು ಉತ್ಸುಕನಾಗಿದ್ದೇನೆ ಎಂದು ಭಾವನಾ ಕಾಂತ್ ಹೇಳಿದ್ದಾರೆ. ಭಾವನಾ ಕಾಂತ್ 2017ರಲ್ಲಿ ವಾಯುಪಡೆಯ ಯುದ್ಧವಿಮಾನ ಸ್ಕ್ವಾಡ್ರಾನ್ ವಿಭಾಗಕ್ಕೆ ಸೇರಿಕೊಂಡಿದ್ದರು. 2018ರಲ್ಲಿ ಏಕಾಂಗಿಯಾಗಿ ಯುದ್ಧ ವಿಮಾನ ಹಾರಿಸಿದ ಮೊದಲ ಮಹಿಳಾ ಪೈಲೆಟ್ ಎನಿಸಿಕೊಂಡಿದ್ದರು.
undefined
2016ರಲ್ಲಿ ಭಾರತೀಯ ವಾಯುಸೇನೆಯಲ್ಲಿ ಮೈಮಾನಿಕ ಅಧಿಕಾರಿಯಾಗಿ ನೇಮಕಗೊಂಡಿದ್ದರು. ಇದೀಗ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಫೈಟರ್ ಜೆಟ್ ಮೂಲಕ ಕಾಣಿಸಿಕೊಳ್ಳಲಿದ್ದಾರೆ.
undefined
ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮತ್ತೊಂದು ವಿಶೇಷತೆ ಇದೆ. ಇತ್ತೀಚೆಗೆ ವಾಯುಪಡೆ ಸೇರಿಕೊಂಡಿರುವ ರಾಫೆಲ್ ಯುದ್ದ ವಿಮಾನ ಕೂಡ ಪರೇಡ್‌ನನಲ್ಲಿ ಭಾಗಿಯಾಗುತ್ತಿದೆ. ವರ್ಟಿಕಲ್ ಚಾರ್ಲಿ ಫಾರ್ಮೇಶನ್ ಸಾಹಸ ಪ್ರದರ್ಶಿಸಲಿದೆ.
undefined
2016ರಲ್ಲಿ ಕೇಂದ್ರ ಸರ್ಕಾರ ಬರೋಬ್ಬರಿ 59,000 ಕೋಟಿ ರೂಪಾಯಿ ನೀಡಿ 36 ರಫೇಲ್ ಯುದ್ದ ವಿಮಾನ ಖರೀದಿಗೆ ಫ್ರಾನ್ಸ್ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಇದರಲ್ಲಿ 8 ರಫೇಲ್ ಯುದ್ಧವಿಮಾನ ಈಗಾಗಲೇ ಭಾರತದ ಹರ್ಯಾಣದಲ್ಲಿರುವ ಅಂಬಾಲ ವಾಯುನೆಲೆ ಸೇರಿಕೊಂಡಿದೆ.
undefined
ಈ ತಿಂಗಳ ಅಂತ್ಯದಲ್ಲಿ ಫ್ರಾನ್ಸ್‌ 3 ರಾಫೇಲ್ ಯುದ್ಧವಿಮಾನಗಳನ್ನು ಹಸ್ತಾಂತರಿಸಲಿದೆ. ಈ ಮೂಲಕ ಭಾರತದಲ್ಲಿನ ರಾಫೇಲ್ ಯುದ್ಧ ವಿಮಾನಗಳ ಸಂಖ್ಯೆ 11ಕ್ಕೇರಲಿದೆ.
undefined
ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ವಾಯುಸೇನೆಯ 42 ಏರ್‌ಕ್ರಾಫ್ಟ್ ಸಾಹಸ ಪ್ರದರ್ಶನ ಮಾಡಲಿದೆ. ಇದರಲ್ಲಿ 17 ಹೆಲಿಕಾಪ್ಟರ್‌ಗಳು ಸೇರಿವೆ.
undefined
click me!