ಮುಂಬೈ (ಆ. 17) ಪೊಲೀಸ್ ಶ್ವಾನಗಳ ಕೆಲಸವನ್ನು ಹೊಸದಾಗಿ ಹೇಳಬೇಕಾದ್ದು ಏನು ಇಲ್ಲ. ಅದೆಷ್ಟೊ ಕ್ಲಿಷ್ಟಕರ ಪ್ರಕರಣ ಪತ್ತೆ ಮಾಡಿದ ಸಾಧನೆ ಅವುಗಳದ್ದು. ಮಹಾರಾಷ್ಟ್ರ ಪೊಲೀಸರಿಗೆ ಸುಮಾರು 365 ಪ್ರಕರಣ ಪತ್ತೆಗೆ ಕಾರಣವಾಗಿದ್ದ ಶ್ವಾನ ತನ್ನ ಸೇವೆ ಮುಗಿಸಿದೆ. ಮಹಾರಾಷ್ಟ್ರ ಪೊಲೀಸ್ ಪಡೆಯಲ್ಲಿದ್ದ 'ರಾಕಿ' ಭಾನುವಾರ ಮೃತಪಟ್ಟಿದ್ದು ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಸಕಲ ಸರ್ಕಾರಿ ಗೌರವಗಳೊಂದಿಗೆ ರಾಕಿಯನ್ನು ಕಳುಹಿಸಿಕೊಟ್ಟಿದ್ದಾರೆ. ಬಹಳ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಕಪ್ಪು ಬಣ್ಣದ ಶ್ವಾನ ಮಹಾರಾಷ್ಟ್ರ ಪೊಲೀಸ್ ಇಲಾಖೆಯಲ್ಲಿ ವಿಶೆಷ ಸ್ಥಾನ ಗಳಿಸಿಕೊಂಡಿತ್ತು. ತನ್ನ ಖದರ್ ಲುಕ್ ನಿಂದ ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ ಶ್ವಾನ ಇನ್ನು ನೆನಪು ಮಾತ್ರ. Rocky was a trusted and brave canine who served the authorities and the people of his country with honour. ಮಹಾರಾಷ್ಟ್ರ ಪೊಲೀಸ್ ಪಡೆಯ ನೆಚ್ಚಿನ ರಾಕಿ ನಿಧನ