ಚಂಡೀಗಢ: ಮಹಿಳೆಯರ ಮೇಲೆ ಲೈಂ*ಗಿಕ ಕಿರುಕುಳ ನೀಡುವ ಲಂಪಟರಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಚಂಡೀಗಢ ಕೋರ್ಟ್ ಮಾಡಿದ್ದು, ಫ್ಲೈಯಿಂಗ್ ಕಿಸ್, ಕಣ್ಣು ಹೊಡೆವುದು ಕೂಡಾ ಲೈಂ*ಗಿಕ ಕಿರುಕುಳ ಎಂದು ಮಹತ್ವದ ತೀರ್ಮಾನ ನೀಡಿದೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ ನೋಡಿ
ಸಮಾಜದಲ್ಲಿ ಎಲ್ಲರೂ ಸಮಾನವಾಗಿ ಬದುಕಲು ಹಾಗೂ ಗೌರವಯುತ ಲಿಂಗಭೇದವಿಲ್ಲದೇ ಜೀವನ ನಡೆಸಲು ಸಂವಿಧಾನವು ಅವಕಾಶ ಕೊಟ್ಟಿದೆ. ಇದೀಗ ಚಂಡೀಗಢ ಕೋರ್ಟ್ ಮಹಿಳೆಯರ ಘನತೆಯ ವಿಚಾರವಾಗಿ ಮಹತ್ವದ ತೀರ್ಪು ನೀಡಿದೆ.
26
ಪ್ಲೈಯಿಂಗ್ ಕಿಸ್ ಕೊಡುವುದು ಲೈಂ*ಗಿಕ ಅಪರಾಧ
‘ಫ್ಲೈಯಿಂಗ್ ಕಿಸ್, ಕಣ್ಣು ಹೊಡೆಯುವುದು ಸಹ ಲೈಂ*ಗಿಕ ಕಿರುಕುಳವೆಂದೇ ಆಗುತ್ತದೆ. ಅದು ಮಹಿಳೆಯ ಘನತೆಗೆ ಧಕ್ಕೆ’ ಎಂದು ಚಂಡೀಗಢ ಕೋರ್ಟ್ ವ್ಯಕ್ತಿಯೋರ್ವನಿಗೆ 10,000 ರು. ದಂಡ ಹಾಕಿದೆ.
36
ಮಹಿಳೆ ಹೂಡಿದ್ದ ಪ್ರಕರಣ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ
2021ರಲ್ಲಿ ಮನೆಯ ಮುಂದೆ ಕಸ ಗುಡಿಸುವ ವೇಳೆ ವ್ಯಕ್ತಿಯೋರ್ವ 500 ರು. ನೋಟು ಬಿಸಾಡಿ, ಫ್ಲೈಯಿಂಗ್ ಕಿಸ್ ಕೊಟ್ಟ ಬಗ್ಗೆ ಮಹಿಳೆ ಹೂಡಿದ್ದ ಪ್ರಕರಣ ವಿಚಾರಣೆ ನಡೆಸಿದ ಇಲ್ಲಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಲೈಂ*ಗಿಕ ಕಿರುಕುಳ ಎನ್ನುವುದು ಕೇವಲ ಸ್ಪರ್ಶದಿಂದಲೇ ಆಗಬೇಕೆಂದಿಲ್ಲ
‘ನೋಟು ಬಿಸಾಡುವುದು, ಅಸಭ್ಯ ಚಿಹ್ನೆಗಳನ್ನು ತೋರುವುದು, ಫ್ಲೈಯಿಂಗ್ ಕಿಸ್ ಕೊಡುವುದೂ ಸಹ ಕಿರುಕುಳವೆಂದೇ ಪರಿಗಣಿಸಲಾಗುತ್ತದೆ ಎಂದಿದೆ. ಲೈಂ*ಗಿಕ ಕಿರುಕುಳ ಎನ್ನುವುದು ಕೇವಲ ಸ್ಪರ್ಶದಿಂದಲೇ ಆಗಬೇಕೆಂದಿಲ್ಲ ಎಂದಿದೆ.
56
10,000 ರು. ದಂಡ
ದೋಷಿಯಂದ 20,000 ರು. ಪ್ರೊಬೇಷನ್ ಬಾಂಡ್ (ಶೂರಿಟಿ ಬಾಂಡ್) ಪಡೆದು, 10,000 ರು. ದಂಡ ಹಾಕಿದೆ. ಈ ಮೂಲಕ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸುವವರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಿದೆ.
66
ಮಹಿಳೆಯರನ್ನು ದಿಟ್ಟಿಸಿ ನೋಡುವುದು ಕೂಡಾ ಶಿಕ್ಷಾರ್ಹ ಅಪರಾಧ
ಇನ್ನು ಮಹಿಳೆಯರನ್ನು ಹಾಗೂ ಯುವತಿಯರನ್ನು ಪುರುಷರು ದಿಟ್ಟಿಸಿ ನೋಡುವುದು ಕೂಡಾ ಅಪರಾಧ ಎಂದು ಈಗಾಗಲೇ ಕೋರ್ಟ್ ಹಲವು ತೀರ್ಪುಗಳ ಮೂಲಕ ಸ್ಪಷ್ಟಪಡಿಸಿದೆ. ಹೀಗಾಗಿ ಪುರುಷರು ಸಾಕಷ್ಟು ಎಚ್ಚರಿಕೆಯಿಂದ ಇರುವುದು ಬೆಸ್ಟ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ