ಟ್ರಾಕ್ಟರ್ ಮಗುಚಿ ಬಿದ್ದು ಪ್ರತಿಭಟನಾ ನಿರತ ರೈತ ಸಾವು; ನಿಯಂತ್ರಣ ತಪ್ಪಿದ ರ‍್ಯಾಲಿ!

First Published Jan 26, 2021, 4:47 PM IST

ರೈತ ಸಂಘಟನೆಗಳ ಟ್ರಾಕ್ಟರ್ ರ‍್ಯಾಲಿ ನಿಯಂತ್ರಣ ತಪ್ಪಿದೆ. ಪೊಲೀಸ್ ಬ್ಯಾರಿಕೇಡ್ ಮುರಿದು, ಸಾರಿಗೆ ವಾಹನಗಳ ಜಖಂ ಮಾಡಿರುವ ಪ್ರತಿಭಟನಾ ನಿರತ ರೈತ ಸಂಘಟನೆಗಳು, ಪೊಲೀಸರ ಮೇಲೆ ದಾಳಿಗೆ ಮುಂದಾಗಿದೆ. ಹಿಂಸಾರೂಪ ಪಡೆದಿರುವ ಟ್ರಾಕ್ಟರ್ ರ‍್ಯಾಲಿಯಲ್ಲಿ ಓರ್ವ ರೈತ ಸಾವನ್ನಪ್ಪಿದ್ದಾನೆ. ಇದು ಮತ್ತೊಂದು ಹೋರಾಟಕ್ಕೆ ದಾರಿಮಾಡಿಕೊಟ್ಟಿದೆ.

ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ರೈತ ಸಂಘಟನೆಗಳ ಟ್ರಾಕ್ಟರ್ ರ‍್ಯಾಲಿ ಹಿಂಸಾರೂಪ ಪಡೆದುಕೊಂಡಿದೆ. ಬ್ಯಾರಿಕೇಡ್‌ಗಳನ್ನು ಟ್ರಾಕ್ಟರ್ ಮೂಲಕ ಸರಿಸಿ ಇದೀಗ ಪೊಲೀಸರ ಮೇಲೆ ಟ್ರಾಕ್ಟರ್ ಹತ್ತಿಸಲು ಮುಂದಾಗಿದ್ದಾರೆ.
undefined
ಉಗ್ರ ಸ್ವರೂಪ ಪಡೆದಿರುವ ಟ್ರಾಕ್ಟರ್ ರ‍್ಯಾಲಿ ಇದೀಗ ದೆಹಲಿ ಹೃದಯಭಾಗಕ್ಕೆ ತಲುಪತ್ತಿದೆ. ಈ ವೇಳೆ ವೇಗವಾಗಿ ಟ್ರಾಕ್ಟರ್ ಚಲಾಯಿಸಿ, ಅತ್ತಿಂದಿತ್ತ ಟ್ರಾಕ್ಟರ್ ಮೂಲಕ ಪೊಲೀಸರ ಚದುರಿಸುವ ಪ್ರಯತ್ನದಲ್ಲಿದ್ದ ರೈತ ಸಾವನ್ನಪ್ಪಿದ್ದಾನೆ.
undefined
ಪೊಲೀಸರನ್ನು ಚದುರಿಸಲು ವೇಗವಾಗಿ ಅತ್ತ ಇತ್ತ ತಿರುಗಿಸುತ್ತಾ ಮುಂದಕ್ಕೆ ಸಾಗಿದ ರೈತನೋರ್ವ ಟ್ರಾಕ್ಟರ್ ಮಗುಚಿ ಬಿದ್ದು ಸಾವನ್ನಪ್ಪಿದ್ದಾರೆ. ಇದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
undefined
ಟ್ರಾಕ್ಟರ್ ಮುಗಚಿ ಬಿದ್ದ ಕಾರಣ ರೈತ ಟ್ರಾಕ್ಟರ್‌ನಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾನೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಆದರೆ ಪೊಲೀಸರ ವಿರುದ್ಧ ಪ್ರತಿಭಟನಾ ನಿರತ ರೈತರ ಆರೋಪಿಸಿದ್ದಾರೆ.
undefined
ಪೊಲೀಸರು, ರೈತರ ಮೇಲೆ ದಾಳಿ ಮಾಡಿದ್ದಾರೆ. ಪೊಲೀಸರಿಂದಲೇ ರೈತ ಸಾವನ್ನಪ್ಪಿದ್ದಾನೆ. ಟ್ರಾಕ್ಟರ್ ಮುಗುಚಿ ಬಿದ್ದಿಲ್ಲ ಎಂದು ರೈತ ಸಂಘಟನೆಗಳು ಹೇಳಿವೆ.
undefined
ಸಾವನ್ನಪ್ಪಿದ ರೈತನ ಶವವನ್ನು ಧ್ವಜದಿಂದ ಸುತ್ತುವರೆದೆ ಶವದ ಮುಂದೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀಸರ ರೈತರನ ಸಾವಿಗೆ ಕಾರಣ ಎಂದು ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಕೆಂಪು ಕೋಟೆಗೆ ಮುತ್ತಿಗೆ ಹಾಕಿ ಸಿಖ್ ಧ್ವಜ ಹಾರಿಸಿದ್ದಾರೆ
undefined
ಕೇಂದ್ರ ದೆಹಲಿ ಮಿಂಟೋ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಉದ್ರಿಕ್ತ ರೈತರ ಪ್ರತಿಭಟನೆಯಿಂದ ಹಲವು ವಾಹನಗಳು ಜಖಂಗೊಂಡಿವೆ. ಪೊಲೀಸರ ವಾಹನಗಳು, ಸಾರಿಗೆ ವಾಹನ ಸೇರಿದಂತೆ ಖಾಸಗಿ ವಾಹನಗಳನ್ನು ರೈತರು ಪುಡಿ ಮಾಡಿದ್ದಾರೆ.
undefined
ರೈತರ ಪ್ರತಿಭಟನಾ ರ‍್ಯಾಲಿಯಿಂದ ಸಂಪೂರ್ಣ ದೆಹಲಿ ಟ್ರಾಫಿಕ್ ಜಾಮ್‌ನಿಂದ ಮುಳುುಗಿದೆ. ರೈತ ಪ್ರತಿಭಟನೆ ಉಗ್ರ ಸ್ವರೂಪ ಪಡೆದಿರುವ ಕಾರಣ ಜನರು ಆತಂಕಗೊಂಡಿದ್ದಾರೆ.
undefined
click me!