ಪ್ರವಾಸಿಗರ ನೆಚ್ಚಿನ ತಾಣದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಟಿಕೆಟ್ ದರ ಕೇವಲ 30 ರೂ!

First Published | Nov 12, 2024, 3:31 PM IST

ಇದು ಪ್ರವಾಸಿಗರ ನೆಚ್ಚಿನ ತಾಣ. ಬೇರೆ ರಾಜ್ಯಗಳಿಂದ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಇದೀಗ  10 ವಂದೇ ಭಾರತ್ ರೈಲು ಸೇವೆ ಆರಂಭಗೊಳ್ಳುತ್ತಿದೆ. ವಿಶೇಷ ಅಂದರೆ ಟಿಕೆಟ್ ದರ ಕೇವಲ 30 ರೂಪಾಯಿ ಮಾತ್ರ.
 

Vande Bharat Train

ಭಾರತದ ಹಲವು ನಗರ, ಜಿಲ್ಲೆ, ಪಟ್ಟಣಗಳಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಪರ್ಕ ಲಭ್ಯವಾಗುತ್ತಿದೆ.  ಕೇಂದ್ರ ಸರ್ಕಾರ ಹೊಸ ಹೊಸ ವಂದೆ ಭಾರತ್ ರೈಲು ಸಂಪರ್ಕವನ್ನು ಹಲವು ರಾಜ್ಯಗಳಿಗೆ ನೀಡುತ್ತಿದೆ. ಇದೀಗ ವಂದೇ ಭಾರತ್ ರೈಲಿಗೆ ಹಲವು ರಾಜ್ಯಗಳಿಂದ ಹೆಚ್ಚಿನ ಬೇಡಿಕೆ ಬರುತ್ತಿದೆ.  ಕರ್ನಾಟಕ ಕೂಡ ವಂದೇ ಭಾರತ್ ರೈಲು ಸೇವೆಯನ್ನು ಸಮಪರ್ಕವಾಗಿ ಬಳಸಿಕೊಳ್ಳುತ್ತಿದೆ. ಇದೀಗ ಕೇಂದ್ರ ಸರ್ಕಾರ ಬೇರೆ ಬೇರೆ ರಾಜ್ಯಗಳಿಂದ ಆಗಮಿಸುವ ಪ್ರವಾಸಿಗರಿಗಾಗಿ ಹೊಸ ವಂದೇ ಭಾರತ್ ರೈಲಿಗೆ ಚಾಲನೆ ನೀಡಲು ಸಜ್ಜಾಗಿದೆ. ವಿಶೇಷ ಅಂದರೆ ಟಿಕೆಟ್ ದರ 30 ರೂಪಾಯಿ.
 

ಕೇಂದ್ರ ಸರ್ಕಾರದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶೀಘ್ರದಲ್ಲೇ ಕೇರಳದ ಹಲವು ಪ್ರವಾಸಿ ತಾಣ, ಪವಿತ್ರ ದೇವಸ್ಥಾನ ಸೇರಿದಂತೆ ಹಲವು ತಾಣಗಳನ್ನು ಸಂಪರ್ಕಿಸುತ್ತಿದೆ. ಬರೋಬ್ಬರಿ 10 ವಂದೇ ಭಾರತ್ ರೈಲು ಕೇರಳದಲ್ಲಿ ಸಂಚಾರ ಆರಂಭಿಸಲು ಸಜ್ಜಾಗಿದೆ. ಈ ವಂದೇ ಭಾರತ್ ರೈಲಿನ ಟಿಕೆಟ್ ದರ 30 ರೂಪಾಯಿ ಮಾತ್ರ.

Latest Videos


ಕೇರಳದ ಹಲವು ಮಾರ್ಗಗಳಲ್ಲಿ ಹೊಸ ವಂದೇ ಭಾರತ್ ರೈಲು ಸಂಚರಿಸಲಿದೆ. ಈ ರೈಲು ತಮಿಳನಾಡು ವರೆಗೆ ಸೇವೆ ನೀಡಲಿದೆ. ಕೇರಳ ಶ್ರೀಮಂತ ಸಂಸ್ಕೃತಿ, ಸುಂದರ ತಾಣಗಳನ್ನು ವಂದೇ ಭಾರತ್ ಮೂಲಕ ಅನ್ವೇಷಿಲು ಈ ಕೈಗೆಟುಕುವ ದರದ ಸಂಪರ್ಕ ಸೇವೆ ನೆರವಾಗಲಿದೆ. 130 ಕಿ.ಮಿ ವೇಗದ ಅತ್ಯುತತಮ ದರ್ಜೆಯ ರೈಲು ಪ್ರವಾಸಿಗರು ಹಾಗೂ ಸ್ಥಳೀಯರಿಗೆ ನೆರವಾಗಿಲಿದೆ.
 

ಗುರುವಾಯುರ್ ಶ್ರೀಕಷ್ಣ ದೇವಸ್ಥಾನ, ತಿರುನೇಲವಲ್ಲಿ ದೇವಸ್ಥಾನ, ಕೊಲ್ಲಂ, ತ್ರಿಶೂರು ಸೇರಿದಂತೆ ಹಲವು ಮಾರ್ಗದಲ್ಲಿ ಈ ವಂದೇ ಭಾರತ್ ರೈಲು ಸಂಚರಿಸಲಿದೆ. ಬ್ಯಾಕ್ ವಾಟರ್, ಕಾಡು, ಪರ್ವತ ಶ್ರೇಣಿ, ಕಡಲ ತೀರ, ಝರಿ ಸೇರಿದಂತೆ ಹಲವು ಪ್ರವಾಸಿ ತಾಣಗಳ ಮೂಲಕ ಹೊಸ ವಂದೇ ಭಾರತ್ ರೈಲು ಸಾಗಲಿದೆ.

ಈ ಪೈಕಿ ಕೊಲ್ಲಂ ಶೆನ್‌ಕೊಟ್ಟೈ ರೈಲು ಮಾರ್ಗ ಐತಿಹಾಸಿಕ ಮಾರ್ಗವಾಗಿದೆ. ದಟ್ಟ ಕಾಡು, ಬೆಟ್ಟ ಗುಡ್ಡಗಳ ಸುಂದರ ದೃಶ್ಯ, ತೇನ್ಮಲ ಜಲಾಶಯ, ಪಾಲಾರುವಿ ವಾಟರ್‌ಫಾಲ್, ರೋಸಮಲಾ ಗ್ರಾಮ ಸೇರಿದಂತೆ ಹಲವು ಪ್ರಸಿದ್ಧ ತಾಣಗಳ ಮೂಲಕ ಹಾದು ಹೋಗಲಿದೆ. ಅತೀ ಕಡಿಮೆ ದರದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಮೂಲಕ ಪ್ರಯಾಣಿಸಲು ಸಾಧ್ಯವಿದೆ.

ಇನ್ನು ತಿಂಗಳ ಪಾಸ್ ಸೇರಿದಂತೆ ಹಲವು ಸೌಲಭ್ಯಗಳನ್ನು ಭಾರತೀಯ ರೈಲ್ವೇ ಇಲಾಖೆ ನೀಡುತ್ತಿದೆ. ಪ್ರಯಾಣಿಕರಿಗೆ ಉತ್ತಮ ಹಾಗೂ ಆರಾಮದಾಯಕ ಪ್ರಯಾಣ ನೀಡಲಿದೆ. ಜೊತೆಗೆ ಹೆಚ್ಚಿನ ಸಮಯ ವ್ಯರ್ಥವಿಲ್ಲದೆ ಉದ್ದೇಶಿತ ಸ್ಥಳ ತಲುಪಲು ಸಾಧ್ಯವಿದೆ. ಇದರಿಂದ ಕಡಿಮೆ ಸಮಯದಲ್ಲಿ ಹಲವು ತಾಣಗಳನ್ನು ಸಂದರ್ಶಿಸಲು ಸಾಧ್ಯವಿದೆ.
 

click me!