260 ಜನರನ್ನು ಬಲಿ ಪಡೆದ ಏರ್ ಇಂಡಿಯಾ ವಿಮಾನ ದುರಂತವು ತಾಂತ್ರಿಕ ದೋಷದಿಂದಲ್ಲ, ಬದಲಾಗಿ ಉದ್ದೇಶಪೂರ್ವಕ ಕೃತ್ಯವಾಗಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಇಟಾಲಿಯನ್ ಪತ್ರಿಕೆಯೊಂದು ಈ ವರದಿ ಮಾಡಿದ್ದು, ಪೈಲಟ್‌ಗಳ ನಡುವಿನ ಸಂಭಾಷಣೆಯು ಈ ಅನುಮಾನವನ್ನು ಮತ್ತಷ್ಟು ದಟ್ಟವಾಗಿಸಿದೆ.
260 ಜನರನ್ನು ಬಲಿ ಪಡೆದ ಏರ್ ಇಂಡಿಯಾ ವಿಮಾನ ದುರಂತದ ಅಸಲಿ ಕಾರಣ ಹೊರಬಂದಿದೆ. ಏರ್ ಇಂಡಿಯಾ ವಿಮಾನ ಪತನ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಅಚ್ಚರಿ ವಿಷಯವನ್ನು ರಿವೀಲ್ ಮಾಡಿದ್ದಾರೆ. ಇಟಾಲಿಯನ್ ದಿನಪತ್ರಿಕೆ ಕೊರಿಯೆರ್ ಡೆಲ್ಲಾ ಸೆರಾ (Italian daily Corriere della Sera) ಈ ಸಂಬಂಧ ವರದಿ ಮಾಡಿದೆ. ಆದ್ರೆ ಈವರೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಅಧಿಕೃತ ವರದಿ ಬಿಡುಗಡೆ ಮಾಡಿಲ್ಲ.
25
ಉದ್ದೇಶಪೂರ್ವಕ ಕೃತ್ಯ!
ಏರ್ ಇಂಡಿಯಾ ವಿಮಾನ ಪತನ ತಾಂತ್ರಿಕ ದೋಷದಿಂದ ಉಂಟಾಗಿಲ್ಲ. ಬದಲಾಗಿ ಇದೊಂದು ಉದ್ದೇಶಪೂರ್ವಕ ಕೃತ್ಯ (intentional act) ಎಂದು ತನಿಖಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ನವದೆಹಲಿ ಮತ್ತು ವಾಷಿಂಗ್ಟನ್ ನಡುವಿನ ಚರ್ಚೆಗಳನ್ನು ಉಲ್ಲೇಖಿಸಿ ಸೆರಾ ಈ ವರದಿಯನ್ನು ಪ್ರಕಟಿಸಿದೆ. ಭಾರತ ಸರ್ಕಾರದ ಅಧಿಕೃತ ಹೇಳಿಕೆ ಮುಂಚೆಯೇ ಅಂತಿಮ ನಿರ್ಧಾರಕ್ಕೆ ಬರೋದು ಕಷ್ಟ ಎಂದು ಇಂಡಿಯಾ ಟುಡೇ ವರದಿ ಪ್ರಕಟಿಸಿದೆ.
35
ಅಂತಿಮ ವರದಿ ಸಿದ್ಧತೆ
ಜೂನ್-2025ರಲ್ಲಿ ಅಹಮದಾಬಾದ್ ಏರ್‌ಪೋರ್ಟ್‌ನಿಂದ ಟೇಕಾಫ್ ಆದ ಏರ್ ಇಂಡಿಯಾ ವಿಮಾನ ಕೆಲವೇ ಸೆಕೆಂಡ್‌ಗಳಲ್ಲಿ ಪತನಗೊಂಡಿತ್ತು. ಇಂಜಿನ್‌ಗೆ ಇಂಧನ ಪೂರೈಕೆ ಸ್ಥಗಿತಗೊಂಡಿದ್ದರಿಂದ ವಿಮಾನ ಪತನವಾಗಿತ್ತೇ ಹೊರತು ಯಾವುದೇ ತಾಂತ್ರಿಕ ಕಾರಣಗಳಲ್ಲ ಎಂದು ಭಾರತದ ತನಿಖಾಧಿಕಾರಿಗಳು ಅಭಿಪ್ರಾಯಪಟ್ಟಿದ್ದರು. ಭಾರತೀಯ ತನಿಖಾಧಿಕಾರಿಗಳು ತಮ್ಮ ಅಂತಿಮ ವರದಿಯನ್ನು ಸಿದ್ಧಪಡಿಸುತ್ತಿದ್ದಾರೆ. ಈ ತನಿಖೆಗೆ ಅಮೆರಿಕದ ತಜ್ಞರು ಸಹಾಯ ಮಾಡುತ್ತಿದ್ದಾರೆ.
ಏರ್ ಇಂಡಿಯಾ ನಿರ್ವಹಿಸುವ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನ ವೈದ್ಯಕೀಯ ವಿದ್ಯಾರ್ಥಿಗಳ ಹಾಸ್ಟೆಲ್ ಮೇಲೆ ಪತನಗೊಂಡಿತ್ತು. ಪ್ರಯಾಣಿಕರು ಮತ್ತು ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗಳು ಸೇರಿದಂತೆ 260 ಜನರು ಮೃತರಾಗಿದ್ದರು. ವಿಮಾನದಲ್ಲಿ ಓರ್ವ ಪ್ರಯಾಣಿಕ ಮಾತ್ರ ಪವಾಡ ಸದೃಡವಾಗಿ ಬದುಕುಳಿದಿದ್ದರು.
ಈ ಪತನ ಸಂಬಂಧ ಜುಲೈ-2025ರಲ್ಲಿ ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಪ್ರಾಥಮಿಕ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಕಾಕ್‌ಪಿಟ್‌ನಲ್ಲಿ ಪೈಲಟ್‌ಗಳ ಸಂಭಾಷಣೆಯನ್ನು ಈ ವರದಿ ಒಳಗೊಂಡಿತ್ತು. ಓರ್ವ ಪೈಲಟ್, ಯಾಖೆ ಇಂಧನ ಸ್ಥಗಿತಗೊಳಿಸಿದ್ದೀರಿ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರ, ನಾನು ಹಾಗೆ ಮಾಡಿಲ್ಲ ಎಂದು ಬಂದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ