ಪ್ರಾಕೃತಿಕ ವಿಕೋಪಗಳಿಂದಾಗಿ ವಿವಾಹ ಅಥವಾ ಇತರೆ ಕಾರ್ಯಕ್ರಮಗಳು ಒಮ್ಮೊಮ್ಮೆ ಮುಂದೆ ಹೋಗುವುದು ಸಹಜ
ಕೇರಳದ ಜೋಡಿಯೊಂದಕ್ಕೆ ಪ್ರಾಕೃತಿಕ ವಿಕೋಪಗಳು ಪದೇ ಪದೇ ವಿಘ್ನ ತರುತ್ತಿದ್ದು, ಮೂರನೇ ಬಾರಿಗೆ ಮದುವೆ ಮುಂದೆ ಹೋಗುವಂತೆ ಮಾಡಿದೆ.
ಕೇರಳದ ಕಲ್ಲಿಕೋಟೆಯ ಬಾಲ್ಯದ ಗೆಳೆಯರಾದ ಪ್ರೇಮಚಂದ್ರನ್ (26) ಮತ್ತು ಸಂದ್ರಾ (23) ಮದುವೆ ಮೊದಲು 2018ರ ಮೇ.20ಕ್ಕೆ ನಿಗದಿಯಾಗಿತ್ತು.
ಆಗ ಕಲ್ಲಿಕೋಟೆ ಮತ್ತು ಮಲಪ್ಪುರಂ ಜಿಲ್ಲೆಯಲ್ಲಿ ನಿಫಾ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮದುವೆ ಮುಂದೂಡಲಾಗಿತ್ತು.
ಬಳಿಕ 2019 ಓಣಂ ರಜಾ ದಿನದಂದು ಮದುವೆ ನಿಗದಿ ಆಗಿತ್ತು.
ಆದರೆ, ಆಗಸ್ಟ್ನಲ್ಲಿ ಭೀಕರ ಪ್ರವಾಹ ಉಂಟಾಗಿದ್ದರಿಂದ ಮದುವೆ ಸಮಾರಂಭ ಆಯೋಜಿಸಲು ಸಾಧ್ಯವಾಗಿರಲಿಲ್ಲ.
ಇದೀಗ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಭೆ ಸಮಾರಂಭಗಳಿಗೆ ನಿರ್ಬಂಧ ವಿಧಿಸಿರುವ ಕಾರಣದಿಂದ ಮಾ.20ರಂದು ಮದುವೆ ನಿಗದಿ ಆಗಿದ್ದ ಮದುವೆಯನ್ನೂ ಮುಂದೂಡಲಾಗಿದೆ.
ಹೀಗಾಗಿ ಈ ಜೋಡಿಯ ಮದುವೆ ಈಗ ಸೆಫ್ಟೆಂಬರ್ಗೆ ಮುಂದೂಡಿಕೆ ಆಗಿದೆ.