ಬೆದರಿದ ಚೀನಾದಿಂದ ಕುತಂತ್ರ; ಗಲ್ವಾನ್ ಘರ್ಷಣೆ ವಿಡಿಯೋ ಬಿಡುಗಡೆ ಮಾಡಿ ಪೇಚಿಗೆ ಸಿಲುಕಿದ PLA!

First Published | Feb 20, 2021, 3:52 PM IST

ಪ್ಯಾಂಗಾಂಗ್ ಸರೋವರ ದಂಡೆಯಿಂದ ಚೀನಾ ಸೇನೆ ವಾಪಸ್, ಗಲ್ವಾನ್ ಘರ್ಷಣೆಯಲ್ಲಿ ಏನೂ ಆಗಿಲ್ಲ ಎಂದಿದ್ದ ಚೀನಾ ಇದೀಗ ಯೋಧರು ಸಾವನ್ನಪ್ಪಿರುವುದನ್ನು ಒಪ್ಪಿಕೊಳ್ಳೋ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿನ್ನಡೆ ಅನುಭವಿಸಿದೆ. ಇದರ ಬೆನ್ನಲ್ಲೇ ಚೀನಾ ಮತ್ತೊಂದು ಕುತಂತ್ರ ಮಾಡಿದೆ. ಗಲ್ವಾನ್ ಘರ್ಷಣೆ ವಿಡಿಯೋ ಬಹಿರಂಗ ಮಾಡಿ, ಭಾರತವೇ ಚೀನಾ ನೆಲಕ್ಕೆ ಕಾಲಿಟ್ಟಿದೆ ಎಂದು ಬಿಂಬಿಸಲು ಬಿಡುಗಡೆ ಮಾಡಿದ ವಿಡಿಯೋದಿಂದ ಚೀನಾ ಸೇನೆ ಪೇಚಿಗೆ ಸಿಲುಕಿದೆ. ಈ ಕುರಿತ ವಿವರ ಇಲ್ಲಿದೆ.

ಚೀನಾ ಸರ್ಕಾರ ಹಾಗೂ ಸೇನೆಗೆ ಒಂದರ ಮೇಲೊಂದರಂತೆ ಹಿನ್ನಡೆಯಾಗುತ್ತಿದೆ. ಚೀನಾ ಸೇನೆಯನ್ನು ಮಾತುಕತೆ ಮೂಲಕ ಹಿಂತಿರುಗುವಂತೆ ಮಾಡುವಲ್ಲಿ ಭಾರತ ಯಶಸ್ವಿಯಾಗಿದೆ. ಇತ್ತ ಗಲ್ವಾನ್ ಕಣಿವೆ ಘರ್ಷಣೆಯಲ್ಲಿ ಯಾವುದೇ ನಷ್ಟ ಸಂಭವಿಸಿಲ್ಲ ಎಂದಿದ್ದ ಚೀನಾ ಇದೀಗ ಐವರು ಸೈನಿಕರು ಸಾವನ್ನಪ್ಪಿರುವುದನ್ನು ಒಪ್ಪಿಕೊಂಡಿದೆ. ಈ ಬೆಳವಣಿಗೆಳು ಚೀನಾ ಸೇನೆಯನ್ನು ಮತ್ತಷ್ಟು ಕೆರಳಿಸಿದೆ. ಹೀಗಾಗಿ ಚೀನಾ ಸೇನೆ ಗಲ್ವಾನ್ ಘರ್ಷಣೆ ವಿಡಿಯೋ ಬಿಡುಗಡೆ ಮಾಡಿದೆ.
undefined
ಈ ವಿಡಿಯೋ ಮೂಲಕ ಚೀನಾ ಸೇನೆ, ಭಾರತ ಸೇನೆ ಚೀನಾ ನೆಲಕ್ಕೆ ಕಾಲಿಟ್ಟು ಗಡಿ ನಿಯಮ ಉಲ್ಲಂಘಿಸಿದೆ. ಚೀನಾ ಪ್ರದೇಶದೊಳಕ್ಕೆ ನುಗ್ಗಿದ ಭಾರತೀಯ ಸೇನೆಯನ್ನು ಚೀನಾ ಸೇನೆ ತಡೆದಿದೆ. ಇಷ್ಟೇ ಅಲ್ಲ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಯತ್ನಿಸಿದೆ ಎಂದು ಬಿಂಬಿಸಲು ಚೀನಾ ಸೇನೆ ಪ್ರಯತ್ನ ಪಟ್ಟಿದೆ.
undefined

Latest Videos


ಆದರೆ ವಿಡಿಯೋ ಬಿಡುಗಡೆ ಮಾಡೋ ಭರದಲ್ಲಿ ಚೀನಾ ಸೇನೆ ಘರ್ಷಣೆ ವಿಡಿಯೋ ಗಂಭೀರತ ತಿಳಿಸಲು ಒಂದು ತುಣುಕನ್ನು ಎಡಿಟ್ ಮಡೋದನ್ನೇ ಮರೆತಿದ್ದಾರೆ. ಈ ವಿಡಿಯೋ ತುಣುಕಿನಲ್ಲಿ ಚೀನಾ ಸೇನೆಯ ಕುತಂತ್ರ ಬಟಾ ಬಯಲಾಗಿದೆ.
undefined
ಈ ವಿಡಿಯೋ ತುಣುಕಿನಲ್ಲಿ ಚೀನಾ ಸೈನಿಕರು ಭಾರತ ಸೈನಿಕರತ್ತ ನುಗ್ಗಿ ಬರುತ್ತಿರುವ ದೃಶ್ಯವಿದೆ. ಭಾರಿ ಸಂಖ್ಯೆಯಲ್ಲಿ ನುಗ್ದಿ ಬಂದ ಚೀನಾ ಸೈನಿಕರನ್ನು ತಡೆಯಲು ಆರಂಭದಲ್ಲೇ ಕೆಲವೇ ಕೆಲವು ಭಾರತೀಯ ಸೈನಿಕರು ಸ್ಥಳದಲ್ಲಿದ್ದರು.
undefined
ಈ ವಿಡಿಯೋ ಚೀನಾ ಸೇನೆಯ ಕುತಂತ್ರ ಬಯಲು ಮಾಡಿದೆ. ಭಾರತವೇ ತನ್ನ ನೆಲದೊಳಕ್ಕೆ ಪ್ರವೇಶಿಸಿದೆ ಎಂದ ಚೀನಾ, ಭಾರತೀಯ ಸೈನಿಕರತ್ತ ನುಗ್ಗಿ ಬರುತ್ತಿರುವುದೇಕೆ? ತಮ್ಮ ನೆಲದಲ್ಲೇ ಠಿಕಾಣಿ ಹೂಡಿದ್ದರೆ, ಭಾರತ ಸೈನಿಕರತ್ತ ನುಗ್ಗಿ ಬರುವ ಅವಶ್ಯಕತೆ ಇರುತ್ತಿರಲಿಲ್ಲ.
undefined
ಗಲ್ವಾನ್ ಘರ್ಷಣೆಯಲ್ಲಿ ಯಾವುದೇ ನಷ್ಟ ಸಂಭವಿಸಿಲ್ಲ ಎಂದಿದ್ದ ಚೀನಾ ಸೇನೆ ಇದೀಗ ಐವರು ಸೈನಿಕರು ಹತ್ಯೆಯಾಗಿರುವುದನ್ನು ದೃಢಪಡಿಸಿದೆ. ಈ ಹಿನ್ನಡೆಯನ್ನು ತಪ್ಪಿಸಲು ಹಾಗೂ ದೇಶದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಘರ್ಷಣೆ ವಿಡಿಯೋ ಬಿಡುಗಡೆ ಮಾಡಿದೆ ಎನ್ನಲಾಗುತ್ತಿದೆ.
undefined
ಆದರೆ ಚೀನಾ ಕುತಂತ್ರ ಮತ್ತೆ ಬಟಾ ಬಯಲಾಗಿದೆ. ದೇಶದ ಗಡಿ ವಿಚಾರದಲ್ಲಿ ಭಾರತದ ನಿಲುವು ಸ್ಪಷ್ಟಗೊಂಡಿದೆ. ಇದೀಗ ವಿಡಿಯೋ ಬಿಡುಗಡೆ ಮಾಡಿದ ಚೀನಾ ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಮುಖಭಂಗಕ್ಕೆ ಒಳಗಾಗಿದೆ.
undefined
click me!