ಪಶ್ಚಿಮ ಬಂಗಾಳ ಚುನಾವಣೆ ಸಮೀಪಿಸುತ್ತಿದ್ದಂತೆ ತೃಣಮೂಲ ಕಾಂಗ್ರೆಸ್ ನಾಯಕರು ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ. ಈಗಾಗಲೇ ಹಲವು ನಾಯಕರು ಬಿಜೆಪಿ ಸೇರಿಕೊಂಡಿದ್ದಾರೆ. ಇದೀಗ ಬಂಗಾಳದ ಸೂಪರ್ ಸ್ಟಾರ್, ನಟ ಯಶ್ ದೀಪ್‌ದಾಸ್ ಗುಪ್ತ ಬಿಜೆಪಿ ಸೇರಿಕೊಂಡಿದ್ದಾರೆ.
ನಟ ಯಶ್ ದಾಸ್‌ಗುಪ್ತ, ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಆತ್ಮೀಯ ಗೆಳೆಯನಾಗಿದ್ದು, ಇದೀಗ ನುಸ್ರತ್ ಕೂಡ ಬಿಜಿಪೆ ಸೇರಿಕೊಳ್ಳಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ.
ಈ ಕುರಿತು ಇದೇ ಮೊದಲ ಬಾರಿಗೆ ನುಸ್ರತ್ ಜಹಾನ್ ತನ್ನ ನಿಲುವು ಬಹಿರಂಗ ಪಡಿಸಿದ್ದಾರೆ. ಮಾಧ್ಯಮದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ನುಸ್ರತ್, ತಾನು ತೃಣಮೂಲ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಸೈನಿಕ ಎಂದಿದ್ದಾರೆ.
ಬಿಜೆಪಿ ಸೇರುವುದಿಲ್ಲ. ಈ ಕುರಿತ ಯಾವುದೇ ಮಾಹಿತಿ ಸತ್ಯಕ್ಕೆ ದೂರವಾಗಿದೆ. ನಾನು ತೃಣಮೂಲ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ. ಪಕ್ಷಕ್ಕಾಗಿ ದುಡಿಯುತ್ತೇನೆ ಎಂದಿದ್ದಾರೆ.
ನುಸ್ರತ್ ಜಹಾನ್ ಮೇಲೆ ಈ ಅನುಮಾನ ಮೂಡಲು ಕಾರಣವಿದೆ. ನುಸ್ರತ್ ಜಹಾನ್ ಆಹ್ವಾನದ ಮೇರೆ ಕೆಲ ಟಿಎಂಸಿ ರ್ಯಾಲಿಗಳಲ್ಲಿ ಯಶ್ ದಾಸ್‌ಗುಪ್ತ ಪಾಲ್ಗೊಂಡಿದ್ದರು.
ಇದೀಗ ಯಶ್ ದಾಸ್‌ಗುಪ್ತ ಬಿಜೆಪಿ ಸೇರಿದ ಬೆನ್ನಲ್ಲೇ ಟಿಎಂಸಿಯ ಕೆಲ ನಾಯಕರು, ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಹೀಗಾಗಿ ನುಸ್ರತ್ ಪಕ್ಷ ಬದಲಾಯಿಸುವ ಕುರಿತು ಹಲವು ಊಹಾಪೋಹಗಳು ಎದ್ದಿತ್ತು
ಪಶ್ಚಿಮ ಬಂಗಳಾ ವಿಧಾನ ಸಭೆ ಚುನಾವಣೆಗೆ ಬಿರುಸಿನ ಪ್ರಚಾರ ಕಾರ್ಯಗಳು ನಡೆಯುತ್ತಿದೆ. ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ನಡುವೆ ವಾಕ್ಸಮರ ನಡೆಯುತ್ತಿದೆ. ಇತ್ತ ಅಮಿತ್ ಶಾ ವಾರಕ್ಕೊಮ್ಮೆ ಬಂಗಾಳಕ್ಕೆ ಭೇಟಿ ನೀಡುತ್ತಿದ್ದಾರೆ.
ಬಿಜೆಪಿ ಘಟಾನುಘಟಿ ನಾಯಕರು ಬಿಜೆಪಿಯತ್ತ ಬಂಗಾಳದತ್ತ ಮುಖ ಮಾಡಿದ್ದಾರೆ. ಈ ಬಾರಿಯ ಬಂಗಾಳದಲ್ಲಿ ಕಮಲ ಹಾರಿಸಲು ರಣತಂತ್ರ ರೂಪಿಸಿದ್ದಾರೆ. ಇದರ ನಡುವೆ ತೃಣಮೂಲ ಕಾಂಗ್ರೆಸ್ ಕೂಡ ಭರ್ಜರಿ ರ್ಯಾಲಿ ಆಯೋಜಿಸುತ್ತಿದೆ.