ಜಗಮೋಹನ್ ರೆಡ್ಡಿ ದೇಶದ ಶ್ರೀಮಂತ ಮುಖ್ಯಮಂತ್ರಿ, ನಮ್ಮ ಸಿಎಂ ಬೊಮ್ಮಾಯಿ ಅವರ ಆಸ್ತಿ ಎಷ್ಟು?
First Published Dec 14, 2022, 2:10 PM ISTಈ ವರ್ಷ ಏಳು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆದಿದೆ. ಇದರಲ್ಲಿ ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ, ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಗುಜರಾತ್ ಸೇರಿವೆ. ಪಂಜಾಬ್, ಹಿಮಾಚಲ ಪ್ರದೇಶ ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲಿ ಹಳೆಯ ಮುಖ್ಯಮಂತ್ರಿಗಳೇ ಅಧಿಕಾರದಲ್ಲಿದ್ದಾರೆ. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷವು ಕಾಂಗ್ರೆಸ್ ಅನ್ನು ಸೋಲಿಸುವ ಮೂಲಕ ಅಧಿಕಾರವನ್ನು ಪಡೆದರೆ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಸೋಲಿಸಿತು. ಪ್ರಸ್ತುತ, ಜಮ್ಮು ಮತ್ತು ಕಾಶ್ಮೀರವನ್ನು ಹೊರತುಪಡಿಸಿ, ದೇಶದ ಇತರ ಎಲ್ಲಾ ರಾಜ್ಯಗಳು ಮುಖ್ಯಮಂತ್ರಿಗಳನ್ನು ಹೊಂದಿವೆ. ಈ ಮುಖ್ಯಮಂತ್ರಿಗಳ ಆಸ್ತಿಗಳ ಲೆಕ್ಕಾಚಾರ ಇಲ್ಲಿದೆ. ಇದರಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಆರ್ ಜಗನ್ಮೋಹನ್ ರೆಡ್ಡಿ 510 ಕೋಟಿ ಆಸ್ತಿಯೊಂದಿಗೆ ಶ್ರೀಮಂತರೆನಿಸಿದರೆ, ಬರೀ 16.72 ಲಕ್ಷ ಆಸ್ತಿಯೊಂದಿಗೆ ಮಮತಾ ಬ್ಯಾನರ್ಜಿ ಕಡೆಯ ಸ್ಥಾನದಲ್ಲಿದ್ದಾರೆ. ನಮ್ಮ ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ಈ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದ್ದಾರೆ.