ಬಟ್ಟೆ ಮೇಲೆ ಬಿದ್ದ ಕೋಳಿ ಸಾರಿನಿಂದ ಮದ್ವೆ ಮನೆಯಲ್ಲಿ ಜಗಳ ಶುರು, ಓರ್ವ ಸಾವು 6 ಮಂದಿಗೆ ಗಾಯ

Published : May 11, 2026, 01:18 PM IST

ಮದುವೆ ಮನೆಯಲ್ಲಿ ಊಟ ಬಡಿಸುವಾಗ ಕೋಳಿ ಸಾರು ಸ್ವಲ್ಪ ಬಟ್ಟೆ ಮೇಲೆ ಚೆಲ್ಲಿದೆ. ಇಷ್ಟೇ ನೋಡಿ ವಾಗ್ವಾದ ಆರಂಭಗೊಂಡ ಜಗಳವೇ ನಡೆದು ಹೋಗಿದೆ. ಘಟನೆಯಲ್ಲಿ ಓರ್ವ ಮೃತಪಟ್ಟರೆ, 6 ಮಂದಿ ಗಾಯಗೊಂಡಿದ್ದಾರೆ. 

PREV
15
ಕೋಳಿ ಸಾರಿನಿಂದ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

ಮದುವೆ ಸಮಾರಂಭದಲ್ಲಿ ಎಷ್ಟೇ ಕಾಳಜಿ ವಹಿಸಿದರೂ ಒಂದಲ್ಲ ಒಂದು ಘಟನೆಗಳು ಇಡೀ ಸಂಭ್ರಮವನ್ನೇ ಹಾಳು ಮಾಡುತ್ತದೆ. ಮಟನ್ ಸಿಗಲಿಲ್ಲ ಎಂದು ಜಗಳ, ಗೌರವ ಕೊಡಲಿಲ್ಲ ಎಂದು ಜಗಳ ಹೀಗೆ ಜಗಳಕ್ಕೆ ಹಲವು ಕಾರಣ. ಇದೀಗ ಮದುವೆ ಮನೆಯ ಸಮಾರಂಭ ಒಂದರಲ್ಲಿ ಊಟಕ್ಕೆ ಕುಳಿತ ಅತಿಥಿಗಳ ಪೈಕಿ ಒಬ್ಬರ ಮೇಲೆ ಕೋಳಿ ಸಾರು ಸ್ವಲ್ಪ ಚೆಲ್ಲಿದೆ. ಇದರಿಂದ ರಾದ್ದಾಂತವೇ ನಡೆದು ಹೋಗಿದೆ. ಜಗಳದಲ್ಲಿ ಒಂದು ಜೀವ ಬಲಿಯಾಗಿ, 6 ಮಂದಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ.

25
ಮದುವೆ ದಿಬ್ಬಣ, ಚಿಕನ್ ಸಾರು

ಮದುವೆ ಮಂಟಪಕ್ಕೆ ವರ ದಿಬ್ಬಣದ ಮೂಲಕ ಸಾಗಿದ್ದ. ವರನ ಗೆಳೆಯರು ಹಾಗೂ ಪಟಾಲಂ ಬ್ಯಾಂಡ್ ವಾದ್ಯಗಳ ಮೂಲಕ ಮದುವೆ ಮಂಟಪಕ್ಕೆ ಆಗಮಿಸಿದ್ದರು. ಇತ್ತ ಮಂಟಪದ ಬಳಿ ಅದ್ಧೂರಿ ಭೋಜನ ಆಯೋಜನೆ ಮಾಡಲಾಗಿತ್ತು. ಮಂಟಪದ ಬಳಿಕ ಚಿಕನ್ ಸಾರು, ಕಬಾಬ್ ಸೇರಿದಂತೆ ಆಹಾರಕ್ಕಾಗಿ ಜನ ಮುಗಿಬಿದ್ದಿದ್ದಾರೆ.

35
ಯುವಕ ಗಂಭೀರವಾಗಿ ಗಾಯಗೊಂಡು ಸಾವು

ನೂಕು ನುಗ್ಗಲು ಕಾರಣ ಇದರ ನಡುವೆ ಯುವಕನೊಬ್ಬನ ಬಟ್ಟೆ ಮೇಲೆ ಚಿಕನ್ ಸಾರು ಚೆಲ್ಲಿದೆ. ಈ ವಿಚಾರಕ್ಕೆ ವಾಗ್ವಾದ ಶುರುವಾಗಿದೆ. ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ಜಟಾಪಟಿಯಲ್ಲಿ ಎರಡು ಗುಂಪುಗಳು ಸಿಕ್ಕ ಸಿಕ್ಕ ವಸ್ತುಗಳಿಂದ ದಾಳಿ ಮಾಡಿದ್ದಾರೆ. ಘಟನೆಯಲ್ಲಿ ವರನ ಕಡೆಯಿಂದ ಮದುವೆಗೆ ಆಗಮಿಸಿದ್ದ 26ರ ಹರೆಯದ ಸುಮಿತ್ ಕುಮಾರ್ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ನಡೆದಿದೆ.

45
ಮದುವೆ ದುರಂತದಲ್ಲಿ ಅಂತ್ಯ

ಎರಡು ಗುಂಪುಗಳ ಮಾರಾಮಾರಿ ನಿಲ್ಲಿಸಲು ಬಂದ ಹಲವರು ಗಾಯಗೊಂಡಿದ್ದಾರೆ. ಘಟನೆಯಲ್ಲಿ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದ್ಧೂರಿಯಾಗಿ ನಡೆಯಬೇಕಿದ್ದ ಮದುವೆ ಸಮಾರಂಭ ದುರಂತದಲ್ಲಿ ಅಂತ್ಯಗೊಂಡಿದೆ.

55
ಪೊಲೀಸ್ ಅಮಾನತು

ಮದುವೆ ದಿಬ್ಬಣ ಹಾಗೂ ಮದವೆ ಮನೆ ಬಳಿ ಪೊಲೀಸ್ ಇನ್ ಚಾರ್ಜ್ ನಿರ್ಲಕ್ಷ್ಯವಹಿಸಿದ್ದಾರೆ ಅನ್ನೋ ಆರೋಪದಡಿ ಅಮಾನತುಗೊಂಡಿದ್ದಾರೆ. ಪೊಲೀಸ್ ನಿರ್ಲಕ್ಷ್ಯದಿಂದ ಈ ಮಾರಾಮಾರಿ ನಡೆದಿದೆ ಎಂದು ಆರೋಪಗಳು ಕೇಳಿಬಂದಿದೆ. ಘಟನೆ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ.

ಪೊಲೀಸ್ ಅಮಾನತು

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories