ಯೂಟ್ಯೂಬ್‌ ಇತಿಹಾಸದಲ್ಲಿಯೇ ಗರಿಷ್ಠ ವೀಕ್ಷಣೆ ಕಂಡ Top-10 ಲೈವ್‌ ಸ್ಟ್ರೀಮ್‌, ಇಲ್ಲಿಯೂ ಇಸ್ರೋ ದಾಖಲೆ!

First Published | Aug 24, 2023, 8:52 PM IST

ಚಂದ್ರಯಾನ-3 ಮೂಲಕ ಇಡೀ ದೇಶವೆ ಹೆಮ್ಮೆ ಪಡುವಂತೆ ಮಾಡಿರುವ ಇಸ್ರೋ, ಸೋಶಿಯಲ್‌ ಮೀಡಿಯಾದಲ್ಲಿಯೂ ದಾಖಲೆ ಬರೆದಿದೆ. ಇಸ್ರೋದ ಚಂದ್ರಯಾನ-3 ವಿಕ್ರಮ್‌ ಲ್ಯಾಂಡಿಂಗ್‌, ಯೂಟ್ಯೂಬ್‌ ಇತಿಹಾಸದಲ್ಲಿ ದಾಖಲೆ ಬರೆದಿದೆ. ಯೂಟ್ಯೂಬ್‌ ಇತಿಹಾಸದಲ್ಲಿಯೇ ಗರಿಷ್ಠ ವೀಕ್ಷಣೆ ಕಂಡ ಟಾಪ್‌ 10 ಲೈವ್‌ ಸ್ಟ್ರೀಮ್‌ಗಳ ಲಿಸ್ಟ್‌ ಇಲ್ಲಿದೆ.
 

10. ಬ್ರೆಜಿಲ್‌ನಲ್ಲಿ ನಡೆಯುವ ಪ್ರತಿಷ್ಠಿತ ಫುಟ್‌ಬಾಲ್‌ ಟೂರ್ನಿ ಕಾರಿಯೋಕಾ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌. 2023ರ ಈ ಫೈನಲ್‌ ಪಂದ್ಯ 3.25 ಮಿಲಿಯನ್‌ ಜನ ವೀಕ್ಷಣೆ ಮಾಡಿದ್ದರು

09. ಬ್ರೆಜಿಲ್‌ನ ಎರಡು ಕಟ್ಟಾ ಎದುರಾಳಿ ಕ್ಲಬ್‌ಗಳಾದ ಫ್ಲುಮಿನೆನ್ಸ್ ವಿರುದ್ಧ ಫ್ಲೆಮೆಂಗೊ ನಡುವಿನ ಪಂದ್ಯ ಈ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. 2023ರಲ್ಲಿ ಈ ಎರಡು ತಂಡಗಳ ನಡುವಿನ ಮುಖಾಮುಖಿಯನ್ನು 3.53 ಮಿಲಿಯನ್‌ ಮಂದಿ ವೀಕ್ಷಣೆ ಮಾಡಿದ್ದರು.

Tap to resize

08. ಹಾಲಿವುಡ್‌ನ ಸುಪ್ರಸಿದ್ಧ ಜೋಡಿಯಾಗಿದ್ದ ಜಾನಿ ಡೆಪ್‌ ಹಾಗೂ ಆಂಬೆರ್‌ ಹೆರ್ಡ್‌ ನಡುವೆ ನಡೆದ ಕಾನೂನು ಸಮರದ ಲೈವ್‌ ಸ್ಟ್ರೀಮಿಂಗ್‌ಅನ್ನು ವಿಶ್ವದಲ್ಲಿ 3.55 ಮಿಲಿಯನ್‌ ಮಂದಿ ವೀಕ್ಷಿಸಿದ್ದರು.

07. ಆಪಲ್‌ ಕಂಪನಿ 2022ರಲ್ಲಿ ತನ್ನ ಐಪೋನ್‌ 14 ಅನಾವರಣ ಕಾರ್ಯಕ್ರಮವನ್ನು ಲೈವ್‌ ಸ್ಟ್ರೀಮ್‌ ಮಾಡಿತ್ತು. ಇದನ್ನು ವಿಶ್ವದಾದ್ಯಂತ 3.69 ಮಿಲಿಯನ್‌ ಮಂದಿ ವೀಕ್ಷಣೆ ಮಾಡಿದ್ದರು.

06. ಕೊರಿಯಾದ ಕೆ-ಪಾಪ್‌ ಸೆನ್ಸೇಷನ್‌ ಬಿಟಿಎಸ್‌ ಬಟರ್‌ 2021 ಕಾರ್ಯಕ್ರಮ ಕೂಡ ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ವಿಶ್ವದಲ್ಲಿ 3.75 ಮಿಲಿಯನ್‌ ಮಂದಿ ವೀಕ್ಷಣೆ ಮಾಡಿದ್ದರು.

05. ಸ್ಪೇಸ್‌ ಟ್ರಾವೆಲ್‌ ಹಾಗೂ ಪರಿಶೋಧನೆಗಾಗಿ 2020ರಲ್ಲಿ ಸ್ಪೇಸ್‌ ಎಕ್ಸ್‌ ತನ್ನ ಯಾತ್ರಿಗಳ ಡೆಮೋಅನ್ನು ಲೈವ್‌ ಸ್ಟ್ರೀಮ್‌ ಮಾಡಿತ್ತು. ಇದನ್ನು 4.08 ಮಿಲಿಯನ್‌ ಮಂದಿ ವೀಕ್ಷಣೆ ಮಾಡಿದ್ದರು.

04. ಬ್ರೆಜಿಲ್‌ನ ವಾಸ್ಕೋ ಮತ್ತು ಫ್ಲಾಮಿಂಗೋ ನಡುವೆ 2023ರಲ್ಲಿ ನಡೆದ ಕ್ಲಬ್‌ ಮುಖಾಮುಖಿ ಕೂಡ ಕುತೂಹಲ ಕೆರಳಿಸಿತ್ತು.ಇದನ್ನು 4.8 ಮಿಲಿಯನ್‌ ಮಂದಿ ವೀಕ್ಷಣೆ ಮಾಡಿದ್ದರು.

03. ಬ್ರೆಜಿಲ್‌ ಹಾಗೂ ಕ್ರೊವೇಷಿಯಾ ನಡುವೆ ನಡೆದ 2022ರ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಮುಖಾಮುಖಿ ಕೂಡ ಗಮನಸೆಳೆದಿತ್ತು. ಇದನ್ನು5.2 ಮಿಲಿಯನ್‌ ಮಂದಿ ವೀಕ್ಷಣೆ ಮಾಡಿದ್ದರು.

02. ಬ್ರೆಜಿಲ್‌ ಹಾಗೂ ದಕ್ಷಿಣ ಕೊರಿಯಾ ನಡುವೆ ನಡೆದ 2022ರ ಫಿಫಾ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯ 2ನೇ ಸ್ಥಾನದಲ್ಲಿದೆ. 16ರ ಘಟ್ಟದ ಈ ಪಂದ್ಯವನ್ನು 6.15 ಮಿಲಿಯನ್‌ ಮಂದಿ ವೀಕ್ಷಣೆ ಮಾಡಿದ್ದರು.

01.ಇಸ್ರೋದ ಚಂದ್ರಯಾನ-3 ಲ್ಯಾಂಡಿಂಗ್‌ನ ಲೈವ್‌ ಸ್ಟ್ರೀಮ್‌ಅನ್ನು ವಿಶ್ವದಾಖೆಯ 8.06 ಮಿಲಿಯನ್‌ ಮಂದಿ ವೀಕ್ಷಣೆ ಮಾಡಿದ್ದಾರೆ. ಚಂದ್ರನ ಮೇಲೆ ಮಾತ್ರವಲ್ಲ ಯೂಟ್ಯೂಬ್‌ನಲ್ಲೂ ಇಸ್ರೋ ದಾಖಲೆ ಮಾಡಿದೆ.

Latest Videos

click me!