5000 ಕೋಟಿ ರು. ವೆಚ್ಚ: ದೇಶದ ಅತಿ ಉದ್ದದ ಸೇತುವೆಗೆ ಪ್ರಧಾನಿ ಮೋದಿ ಶಂಕು

First Published | Feb 19, 2021, 9:53 AM IST

ಅಸ್ಸಾಂನಲ್ಲಿ ದೇಶದಲ್ಲೇ ಅತಿ ಉದ್ದದ ಸೇತುವೆಗೆ ಪ್ರಧಾನಿ ಮೋದಿ ಶಂಕು | 19 ಕಿ.ಮೀ ಉದ್ದ, 5000 ಕೋಟಿ ರು. ವೆಚ್ಚ

ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ, ಇಲ್ಲಿನ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸುವ ದೇಶದ ಅತಿ ಉದ್ದದ ಧುಬ್ರಿ-ಫುಲ್ಬಾರಿ ಸೇತುವೆ ನಿರ್ಮಾಣ ಕಾಮಗಾರಿಗೆ ಪ್ರಧಾನಿ ಮೋದಿ ಗುರುವಾರ ಶಂಕುಸ್ಥಾಪನೆ ನೆರವೇರಿಸಿದರು.
ಧುಬ್ರಿಯಿಂದ ಫುಲ್ಬಾರಿಗೆ ಸಂಪರ್ಕಿಸುವ ಸುಮಾರು 19 ಕಿ.ಮೀಟರ್‌ ಉದ್ದದ, ನಾಲ್ಕು ಲೇನ್‌ಗಳ ಈ ಸೇತುವೆಯು ಅಸ್ಸಾಂ ಮತ್ತು ಮೇಘಾಲಯದ ನಡುವಣ 203 ಕಿ.ಮೀ ಸುದೀರ್ಘ ಹಾದಿಯನ್ನು ಬರೀ 19 ಕಿ.ಮೀಟರ್‌ಗೆ ತಗ್ಗಿಸಲಿದೆ.
Tap to resize

ಈ ಮೂಲಕ 6 ಗಂಟೆ ಪ್ರಯಾಣ ಅವಧಿ ಕಡಿತಗೊಳ್ಳಲಿದೆ.
ಸುಮಾರು 5000 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಸೇತುವೆ ಕಾಮಗಾರಿಯು 2028ಕ್ಕೆ ಮುಕ್ತಾಯಗೊಳ್ಳಲಿದೆ.
ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ (ಜಿಕಾ) ಸೇತುವೆ ನಿರ್ಮಾಣಕ್ಕಾಗಿ ಸಾಲವನ್ನು ಅನುಮೋದಿಸಿದೆ.
ರಾಷ್ಟ್ರೀಯ ಹೆದ್ದಾರಿಗಳು ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮ ಲಿಮಿಟೆಡ್ ರಾಷ್ಟ್ರೀಯ ಹೆದ್ದಾರಿ 127 ಬಿ ಯಲ್ಲಿ ಯೋಜನೆಯನ್ನು ನಿರ್ವಹಿಸಲಿದೆ.

Latest Videos

click me!