ಬಾಂಬ್ ದಾಳಿಯಲ್ಲಿ ಕೈ ಕಳೆದುಕೊಂಡರೂ ಬದುಕು ನಿಲ್ಲಿಸದ ಛಲಗಾತಿಗೆ ಪಿಎಂ ಅಕೌಂಟ್!

First Published | Feb 20, 2020, 3:43 PM IST

ಚಿಕ್ಕ ಪುಟ್ಟ ಕಷ್ಟಗಳು ಬಂದರೂ ಹೆದರಿ ಹಿಂದೋಡುವವರು ಈ ಚೆಲುವೆಯ ಜೀವನ ಕತೆಯನ್ನು ಕೇಳಲೇಬೇಕು. ವೈದ್ಯೆಯಾಗಬೇಕೆಂಬ ಕನಸು ಹೊತ್ತುಕೊಂಡಿದ್ದ ಈ ಮುದ್ದುಮೊಗದ ಸುಂದರಿ 13 ವರ್ಷದಲ್ಲೇ ತನ್ನೆರಡೂ ಕೈಗಳನ್ನು ಕಳೆದುಕೊಳ್ಳುತ್ತಾಳೆ. ಆದರೆ ಕೈಗಳಿಲ್ಲದಿದ್ದರೇನಂತೆ? ಬದುಕುವ, ಸಾಧಿಸಿ ತೋರಿಸುವ ಛಲವಿದೆ ಎಂದು ಮುನ್ನುಗ್ಗುವ ಈಕೆ ಇಂದು ಡಾ. ಮಾಳವಿಕಾ ಅಯ್ಯರ್ ಆಗಿದ್ದಾರೆ. ಅಂತರಾಷ್ಟ್ರೀಯ ದಿನದಂದು ಪಿಎರಂ ಮೋದಿ ತಮ್ಮ ಸೋಶಿಯಲ್ ಮೀಡಿಯಾ ಖಾತೆ ನಿರ್ವಹಣೆ 7 ಸಾಧಕಿಯರಿಗೆ ಬಿಟ್ಟು ಕೊಟ್ಟಿದ್ದು, ಇವರಲ್ಲಿ ಛಲಗಾತಿ ಮಾಳವಿಕಾ ಅಯ್ಯರ್ ಕೂಡಾ ಒಬ್ಬರು

ಕೇವಲ 13 ವರ್ಷ ವಯಸ್ಸಲ್ಲಿ ಗ್ರೆನೇಡ್ ಸ್ಫೋಟದಲ್ಲಿ ತನ್ನೆರಡೂ ಕೈಗಳನ್ನು ಕಳೆದುಕೊಂಡ ಮಾಳವಿಕಾ ಅಯ್ಯರ್ ಇಂದು ಪ್ರತಿಯೊಬ್ಬರಿಗೂ ಸ್ಫೂರ್ತಿ.
ಡಾ. ಮಾಳವಿಕಾ ಅಯ್ಯರ್ ಇಂದು ಪ್ರಸಿದ್ಧ ಇಂಟರ್‌ ನ್ಯಾಷನಲ್ ಸ್ಪೀಕರ್, ವಿಕಲ ಚೇತನರ ಹಕ್ಕುಗಳಿಗಾಗಿ ಹೋರಾಡುವ ಹೋರಾಟಗಾರ್ತಿ ಹಾಗೂ ಸೋಶಿಯಲ್ ವರ್ಕ್‌ನಲ್ಲಿ ಪಿಎಚ್‌ಡಿ ಗಳಿಸಿರುವುದರೊಂದಿಗೆ ಜೊತೆ ಫ್ಯಾಷನ್ ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ.
Tap to resize

30 ವರ್ಷದ ಮಾಳವಿಕ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲೂ ಹೇಗೆ ಎದೆಗುಂಡದೇ ಮುನ್ನಡೆಯುವುದು ಮತ್ತು ಅದನ್ನು ಉತ್ತಮವಾಗಿಸುವುದು ಎಂದು ತಿಳಿದಿದ್ದಾರೆ.
ಸದ್ಯ ಮಾಳವಿಕಾರ ಟ್ವೀಟ್ ಒಂದು ಭಾರೀ ವೈರಲ್ ಆಗಿದೆ.
ಮಂಗಳವಾರ ತನ್ನ ಜನ್ಮದಿನ ಆಚರಿಸಿಕೊಂಡ ಮಾಳವಿಕಾ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ್ದರು. ಇದರ ಒಂದು ಭಾಗವನ್ನು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ತಮ್ಮ ಟ್ವೀಟ್‌ನಲ್ಲಿ ಮಾಳವಿಕಾ ಸರ್ಜಿಕಲ್ ಎರರ್ಸ್ ಕುರಿತು ಬರೆದಿದ್ದಾರೆ. ಬಾಲ್ಯದಲ್ಲಿ ಗ್ರೆನೇಡ್ ಸಿಡಿದು ದುರಂತವಾದಾಗ ಅವರ ಜೀವ ಉಳಿಸುವ ಭರದಲ್ಲಿ ಡಾಕ್ಟರ್ಸ್ ಮಾಡಿದ್ದ ಸರ್ಜಿಕಲ್ ಎರರ್ಸ್ ಹೇಗೆ ತಮಗೆ ವರದಾನವಾಯ್ತು ಎಂಬುವುದನ್ನು ಅವರು ವಿವರಿಸಿದ್ದಾರೆ.
'ಸ್ಫೋಟದಿಂದ ನಾನು ಕೈಗಳನ್ನು ಕಳೆದುಕೊಂಡಾಗ ವೈದ್ಯರು ನನ್ನ ಜೀವ ಉಳಿಸಲು ಬಹಳಷ್ಟು ಯತ್ನಿಸಿದರು. ಹೀಗಿರುವಾಗ ಅವರು ನನ್ನ ಬಲಗೈ ಹಿಂಬದಿಗೊತ್ತಿ ಸ್ಟಿಚ್ ಮಾಡಿ ಸರ್ಜಿಕಲ್ ಎರರ್ಸ್ ಮಾಡಿದರು. ಆದರೆ ಇದು ನನಗೆ ವರದಾನವಾಯ್ತು. ಮೂಳೆಯೊಂದನ್ನು ಮಾಂಸದಿಂದ ಮುಚ್ಚದೇ ಹಾಗೇ ಉಳಿಸಿದ್ದುದರಿಂದ ಅದನ್ನೇ ಬೆರಳಿನಂತೆ ಉಪಯೋಗಿಸಿ ಪಿಎಚ್‌ಡಿ ಮುಗಿಸಿದ್ದೇನೆ' ಎಂದು ಮಾಳವಿಕಾ ಹೇಳಿದ್ದಾರೆ.
ವೈದ್ಯರು ಅಂದು ಎಸಗಿದ್ದ ತಪ್ಪಿನಿಂದ ಇಂದು ಮಾಳವಿಕಾಗೆ ಟೈಪ್ ಮಾಡಲು ಹಾಗೂ ಬರೆಯಲು ಸಾಧ್ಯವಾಗಿದೆ.
ಸದ್ಯ ತಮ್ಮದೇ ವೆಬ್‌ಸೈಟ್ ತೆರೆಯುವ ತಯಾರಿಯಲ್ಲಿದ್ದಾರೆ ಡಾ. ಮಾಳವಿಕಾ ಅಯ್ಯರ್
ಬಾಲ್ಯದಲ್ಲೇ ನಡೆದ ದುರಂತದಿಂದ ತಮ್ಮೆರಡೂ ಕೈಗಳನ್ನು ಕಳೆದುಕೊಂಡ ಮಾಳವಿಕಾ ಅಯ್ಯರ್ ಬಹಳಷ್ಟು ಕಷ್ಟಗಳನ್ನು ಎದುರಿಸಿದ್ದಾರೆ.
ಬಾಲ್ಯದಲ್ಲೇ ತಾನೊಬ್ಬ ವೈದ್ಯೆ ಆಗಬೇಕೆಂಬ ಕನಸು ಕಂಡಿದ್ದ ಮಾಳವಿಕಾಗೆ ಸ್ಫೋಟದಿಂದ ಕೈಕಳೆದುಕೊಂಡಿದ್ದು ಭಾರೀ ಆಘಾತ ಕೊಟ್ಟಿತ್ತು.
ಆದರೆ ಮಾಳವಿಕಾಗೆ ಆ ವೇಳೆ ಧೈರ್ಯ ತುಂಬಿದ್ದು ಆಕೆಯ ಕುಟುಂಬ ಸದಸ್ಯರು. ನಿನಗೆ ಹೇಗೆ ಬೇಕೋ ಹಾಗೆ ಬಾಳು, ನಾವು ನಿನ್ನೊಂದಿಗಿದ್ದೇವೆ ಎಂದಿದ್ದರು ಆಕೆಯ ತಂದೆ ತಾಯಿ.
ಹೆತ್ತವರ ಈ ಮಾತು ಮಾಳವಿಕಾರಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಮತ್ತೆ ಹುಟ್ಟುವಂತೆ ಮಾಡಿತು. ಆದರೆ ಅವರಂದುಕೊಂಡಂತೆ ವೈದ್ಯೆ ಆಗಲು ಸಾಧ್ಯವಾಗಲಿಲ್ಲ.
ಆದರೆ ಇದರಿಂದ ಎದೆಗುಂದದ ಮಾಳವಿಕಾ ಎಲ್ಲವನ್ನೆದುರಿಸಿ ಇಂದು ಪಿಎಚ್‌ಡಿ ಮುಗಿಸಿದ್ದಾರೆ. ಮೆಡಿಕಲ್ ಶಿಕ್ಷಣ ಪಡೆದು ವೈದ್ಯೆರಯಾಗಲು ಸಾಧ್ಯವಾಗದಿದ್ದರೂ, ಪಿಎಚ್‌ಡಿ ಮುಗಿಸಿ ಡಾಕ್ಟರ್ ಮಾಳವಿಕಾ ಅಯ್ಯರ್ ಆಗಿದ್ದಾರೆ.
ಕಷ್ಟಗಳು ಬಂದಾಗ ಕೈಚೆಲ್ಲಿ ಕುಳಿತರೆ ಏನೂ ಮಾಡಲಾಗದು, ಅವುಗಳನ್ನು ಎದುರಿಸಿ ಬದುಕಿ ತೋರಿಸುವುದು ಹೇಗೆ ಎಂಬುವುದಕ್ಕೆ ಈ ಮುದ್ದು ಮೊಗದ ಸುಂದರಿ ಮಾಳವಿಕಾಳೇ ಉದಾಹರಣೆ.
ಈ ಮುದ್ದು ಮೊಗದ ಸುಂದರಿ, ಅಂಜದೆ ಅಂದುಕೊಂಡನ್ನು ಸಾಧಿಸಿ ತೋರಿಸಿದ ಮಾಳವಿಕಾಗೆ ಅಂತರಾಷ್ಟ್ರೀಯ ದಿನದ ಪ್ರಯುಕ್ತ ಪ್ರಧಾನಿ ಮೋದಿ ಸೋಶಿಯಲ್ ಮೀಡಿಯಾ ಖಾತೆ ನಿರ್ವಹಿಸುವ ಅವಕಾಶ ಕೂಡಾ ಲಭಿಸಿದೆ.
ಮಹಿಳಾ ದಿನದಂದು ತಮ್ಮ ಖಾತೆಯಿಂದ ಬಿಡುವು ಪಡೆದ ಮಾಳವಿಕಾ ಪಿಎಂ ಮೋದಿ ಖಾತೆಯಿಂದ ಟ್ವೀಟ್ ಮಾಡುತ್ತಿದ್ದು, ಅಲ್ಲಿ ತಮ್ಮ ಜೀವನಗಾಥೆಯನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಬದುಕುವ ಛಲ ಬಿಡದೆ ಅಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ ಅವುಗಳನ್ನು ಮೆಟ್ಟಿ ನಿಲ್ಲುವ ಸಂದೇಶ ನೀಡಿದ್ದಾರೆ.

Latest Videos

click me!