ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿಗೆ ಬುರ್ಖಾ ಸಂಕಷ್ಟ; ಆಯೋಗಕ್ಕೆ ಪತ್ರ!

First Published Dec 18, 2020, 5:36 PM IST

ಪಶ್ಚಿಮ ಬಂಗಳಾ ಚುನಾವಣೆಗೆ ಬಿಜೆಪಿ ತಯಾರಿ ಆರಂಭಿಸಿದೆ. ಈ ಬಾರಿ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವ ವಿಶ್ವಾಸದಲ್ಲಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ನಡೆಯುವ ಅಕ್ರಮಗಳಿಂದ ಬಿಜೆಪಿಗೆ ಸೋಲಾಗಬಾರದು ಎಂದು ಈಗಲೇ ಕಾರ್ಯಪ್ರವೃತ್ತವಾಗಿದೆ.  ಚುನಾವಣಾ ಆಯೋಗಕ್ಕೆ ಬಿಜೆಪಿ ಪತ್ರ ಬರೆದಿದ್ದು, ಬುರ್ಖಾ ಕುರಿತು ಆತಂಕ ವ್ಯಕ್ತಪಡಿಸಿದೆ.

2021ರಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಗೆ ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳು ತಯಾರಿ ಆರಂಭಿಸಿದೆ. ರ್ಯಾಲಿ, ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ಸೇರಿದಂತೆ ಹಲವು ಕಾರಣಗಳಿಂದ ಬಂಗಾಳದಲ್ಲಿ ಬಿಜೆಪಿ ಹೊಸ ಅಲೆ ಶುರುಮಾಡಿದೆ.
undefined
ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ಗೆ ವಿರುದ್ಧ ಭರ್ಜರಿ ಗೆಲುವಿನ ವಿಶ್ವಾಸದಲ್ಲಿರು ಬಿಜೆಪಿಗೆ ಬುರ್ಖಾ ಆತಂಕ ಎದುರಾಗಿದೆ. ಇದಕ್ಕಾಗಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.
undefined
ಮತದಾನದ ವೇಳೆ ಬುರ್ಖಾ ಧರಿಸಿ ಬರುವ ಮಹಿಳೆಯರು ಯಾರು, ಅವರ ನೈಜತೆ ಅವರ ಗುರತು ಪರಿಶೀಲಿಸಲು ಸೆಂಟ್ರಲ್ ಪೊಲೀಸ್ ಫೋರ್ಸ್(CPF) ಮಹಿಳಾ ಸಿಬ್ಬಂದಿ ನೇಮಕ ಮಾಡಲು ಬಿಜೆಪಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.
undefined
ಸಿಪಿಎಫ್ ಯೋಧರಿಗೆ ಬುರ್ಖಾ ಧರಿಸಿ ಬರುವ ಮಹಿಳೆಯರ ಗುರುತ ಪತ್ತೆ ಮಾಡಲು ಸಾಧ್ಯವಿಲ್ಲ. ಮತದಾರರಿಗೆ ಬೂತ್ ಪ್ರವೇಶಿಸಲು ಅನಮತಿ ನೀಡವವರಿಗೆ ಗುರುತ ಪರಿಶೀಲಿಸುವು ಕಾರ್ಯ ಅಸಾಧ್ಯವಾಗಿದೆ. ಹೀಗಾಗಿ ಮಹಿಳಾ ಸಿಬ್ಬಂದಿ ನೇಮಕ ಮಾಡಿ ಎಂದು ಪತ್ರದಲ್ಲಿ ಮನವಿ ಮಾಡಿದೆ
undefined
ಪಶ್ಚಿಮ ಬಂಗಾಳದ ಬಹುತೇಕ ಬುರ್ಖಾ ಧರಿಸಿದ ಮಹಿಳೆಯರು ಪ್ರಾಮಾಣಿಕವಾಗಿ ಮತದಾನ ಮಾಡುತ್ತಾರೆ. ಆದರೆ ರಾಜಕೀಯ ಪ್ರೇರಿತ ವ್ಯಕ್ತಿಗಳಿಂದ ಅಕ್ರಮ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಈ ಗೊಂದಲಕ್ಕೆ ಚುನಾವಣಾ ಆಯೋಗ ತೆರೆ ಎಳೆಯಬೇಕು ಎಂದು ಬಿಜೆಪಿ ಮನವಿ ಮಾಡಿದೆ.
undefined
ಬಿಜೆಪಿ ಪತ್ರದಲ್ಲಿ ಮತ್ತೊಂದು ವಿಚಾರವನ್ನು ಬಿಜೆಪಿ ಬೆಳಕಿಗೆ ತಂದಿದೆ. ಬಾಂಗ್ಲಾದೇಶ ಗಡಿ ಹಂಚಿಕೊಂಡಿರುವ ಭಾರತದ ಹಳ್ಳಿಗಳಲ್ಲಿ ಈಗಲೇ ಮತದಾರರ ಸಂಖ್ಯೆ ಧಿಢೀರ್ ಹೆಚ್ಚಾಗಿದೆ. ಇಲ್ಲಿ ನಕಲಿ ಮತದಾರ ಚೀಟಿ ನೀಡಿರುವ ಶಂಕೆಯನ್ನು ಬಿಜೆಪಿ ವ್ಯಕ್ತಪಡಿಸಿದೆ.
undefined
ಬಾಂಗ್ಲಾ ಗಡಿ ಭಾಗದಲ್ಲಿ ಅಲ್ಪ ಸಂಖ್ಯಾತ ವೋಟ್‌ಗಳಲ್ಲಿ ಗಣನೀಯ ಏರಿಕೆ ಕಂಡಿದೆ. ನವೆಂಬರ್ 18 ರಂದು ಚುನಾವಣಾ ಆಯೋಗ ಪ್ರಕಟಿಸಿದ ಮತದಾರರ ಪಟ್ಟಿಯಲ್ಲಿ ಗಮನಿಸಹುದು ಎಂದು ಬಿಜೆಪಿ ಪತ್ರದಲ್ಲಿ ಉಲ್ಲೇಖಿಸಿದೆ.
undefined
ಕೆಲವೇ ತಿಂಗಳಲ್ಲಿ ಪಶ್ಚಿಮ ಬಂಗಾಳ ಚುನಾವಣೆ ನಡೆಯಲಿದೆ. ದೀದಿ ಅಧಿಕಾರ ಅಂತ್ಯಗೊಳಿಸಲು ಪಣತೊಟ್ಟಿರುವ ಪಶ್ಚಿಮ ಬಂಗಾಳ ಇದಕ್ಕಾಗಿ ಹಲವು ರ್ಯಾಲಿ ನಡೆಸಿದೆ.
undefined
click me!