ತನ್ನ 5 ಕೋಟಿ ಆಸ್ತಿ ಎರಡು ಆನೆಗಳ ಹೆಸರಿಗೆ ಬರೆದ ಅಖ್ತರ್ ಇಮಾಮ್!

First Published Jun 9, 2020, 5:56 PM IST

ತನ್ನ ಪ್ರಾಣ ಕಾಪಾಡಿದ ಆನೆಗಳನ್ನು ದಾನಾಪುರದ ಜಾನಿಪುರ್‌ ನಿವಾಸಿ ಅಖ್ತರ್ ಇಮಾಮ್‌ ತನ್ನ ಐದು ಕೋಟಿಗೂ ಅಧಿಕ ಆಸ್ತಿಗೆ ಒಡೆಯರನ್ನಾಗಿಸಿದ್ದಾರೆ. ಈ ನಿಟ್ಟಿನಲ್ಲಿ ಈ ಎರಡು ಆನೆಗಳ ಹೆಸರಿನಲ್ಲಿ ದಾಖಲೆಗಳನ್ನೂ ರಿಜಿಸ್ಟರ್ ಆಫೀಸ್‌ನಲ್ಲಿ ರಿಜಿಸ್ಟರ್ ಮಾಡಿಸಿದ್ದಾರೆ. ಅಲ್ಲದೇ ಈ ಆನೆಗಳ ಹಹೆಸರಿಗಗೆ ತನ್ನ ಆಸ್ತಿಯನ್ನು ಬರೆದಿರುವುದಾಗಿ ಇಮಾಮ್ ಸಾರ್ವಜನಿಕವಾಗಿ ಘೋಷಿಸಿದ್ದಾರೆ. ಅಲ್ಲದೇ ನಮಗೇನಾದರೂ ಆದರೆ ನಮ್ಮ ಇಡೀ ಆಸ್ತಿ ಐರಾವತ ಸಂಸ್ಥೆಗೇ ಹೋಗುತ್ತದೆ. ಇದರಿಂದ ಆನೆಗಳನ್ನು ಸಂರಕ್ಷಿಸಿ ಬೇಟೆಗಾರರಿಂದ ಕಾಪಾಡುವ ಕೆಲಸವಾಗಬೇಕು ಎಂದಿದ್ದಾರೆ. ಇನ್ನು ತನ್ನೆಲ್ಲಾ ಆಸ್ತಿಯನ್ನು ಆನೆಗಳ ಹೆಸರಿಗೆ ಬರೆದ ಇಮಾಮ್ ಇವುಗಳಿಗೆ ನಾಮಕರಣ ಕೂಡಾ ಮಾಡಿದ್ದಾರೆ. ಒಂದರ ಹೆಸರು ಮೋತಿ ಎಂದಾದರೆ ಮತ್ತೊಂದಕ್ಕೆ ರಾಣಿ ಎಂದು ಹೆಸರಿಟ್ಟಿದ್ದಾರೆ. ಇವರಿಗೆ ಈ ಆನೆಗಳೇ ಕುಟುಂಬವಾಗಿದೆ.

ಪಾಟ್ನಾದಲ್ಲಿರುವ ಜಾನಿಪುರ್‌ ನಿವಾಸಿ ಹಾಗೂ ಐರಾವತ ಸಂಸ್ಥೆಯ ಮುಖ್ಯ ಮ್ಯಾನೇಜರ್ ಅಖ್ತರ್ ಇಮಾಮ್ 10 ವರ್ಷದಿಂದ ತನ್ನ ಹೆಂಡತಿ ಹಾಗೂ ಮಕ್ಕಳಿಂದ ದೂರವಿದ್ದಾರೆ. ಅಲ್ಲದೇ ತಾನು ಹನ್ನೆರಡನೇ ವಯಸ್ಸಿನಿಂದಲೂ ಇವುಗಳ ಸೇವೆ ಮಾಡುತ್ತಿದ್ದೇನೆಂದು ತಿಳಿಸಿದ್ದಾರೆ.
undefined
ಕೌಟುಂಬಿಕ ಕಲಹದ ಕಾರಣ ಹಹತ್ತು ವರ್ಷದ ಹಿಂದೆ ಅವರ ಹೆಂಡತಿ, ಇಬ್ಬರು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗುವಿನೊಂದಿಗೆ ತವರಿಗೆ ಹೋಗಿದ್ದರು. ಸಾಲದೆಂಬಂತೆ ಆಸ್ತಿ ಗಳಿಸುವ ಆಸೆಯಿಂದ ಅವರ ಮಗ ಮೆರಾಜ್(ರಿಂಕೂ) ತನ್ನದೇ ಪ್ರೇಯಸಿಯ ಮೇಲೆ ಅತ್ಯಾಚಾರವೆಸಗಿರುವ ಸುಳ್ಳು ಆರೋಪ ಹೊರಿಸಿ ಜೈಲಿಗೂ ಕಳುಹಿಸಿದ್ದರು.
undefined
ಆದರೆ ತನಿಖೆಯಲ್ಲಿ ಇದು ಸುಳ್ಳು ಎಂದು ಸಾಬೀತಾಯ್ತು. ಇದೇ ಕಾರಣದಿಂದ ಅವರು ತನ್ನ ಮಗನಿಗೆ ಆಸ್ತಿ ನೀಡಲಿಲ್ಲ.
undefined
ಇನ್ನು ಒಂದು ಬಾರಿ ಅಖ್ತರ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಈ ವೇಳೆ ಆನೆಗಳೇ ಅವರನ್ನು ರಕ್ಷಿಸಿದ್ದರಂತೆ. ಪಿಸ್ತೂಲ್ ಇದ್ದ ವ್ಯಕ್ತಿಯೊಬ್ಬ ಅವರು ಮಲಗಿದ್ದ ಕೋಣೆ ಕಡೆ ತೆರಳುತ್ತಿದ್ದಾಗ ಈ ಆನೆಗಳೇ ಜೋರಾಗಿ ಚೀರಾಡಿದ್ದವಂತೆ. ಇದನ್ನು ಕಂಡು ಬೆಚ್ಚಿ ಬಿದ್ದ ದುಷ್ಕರ್ಮಿ ಅಲ್ಲಿಂದ ಪರಾರಿಯಾಗಿದ್ದರಂತೆ.
undefined
ಇನ್ನು ಅಖ್ತರ್ ಮಗ ಮೆರಾಜ್ ಬೇಟೆಗಾರರ ಜೊತೆ ಸೇರಿ ಈ ಆನೆಗಳನ್ನು ಮಾರಾಟ ಮಾಡಲೂ ಯತ್ನಿಸಿದ್ದರಂತೆ. ಆದರೆ ಈ ವೇಳೆ ಆತ ಸಿಕ್ಕಿ ಬಿದ್ದಿದ್ದ. ಹೀಗಾಗೇ ನಾನು ನನ್ನ ಆಸ್ತಿಯನ್ನು ಆನೆಗಳ ಹೆಸರಿಗೆ ಬರೆದಿದ್ದೇನೆ. ಆನೆಗಳು ಇಲ್ಲದಿದ್ದರೆ ಈ ಆಸ್ತಿ ಕುಟುಂಬದ ಸದಸ್ಯರಿಗೂ ಸಿಗುವುದಿಲ್ಲ ಎಂದಿದ್ದಾರೆ.
undefined
ಇನ್ನು ಆಸ್ತಿಯ ಅರ್ಧದಷ್ಟು ಆಸ್ತಿ ಹೆಂಡತಿ ಹೆಸರಿಗೆ ಬರೆದಿದ್ದಾರೆ. ಹೀಗಿರುವಾಗ ತನ್ನ ಪಾಲಿನ ಐದು ಕೋಟಿ ಮೊತ್ತದ ಆಸ್ತಿ,, ಜಮೀನು, ಹೊಲ, ಬ್ಯಾಂಕ್ ಬ್ಯಾಲೆನ್‌ಸ್ ಹೀಗೆ ಎಲ್ಲವನ್ನೂ ಈ ಎರಡು ಆನೆಗಳ ಎಸರಿಗೆ ಬರೆದಿದ್ದಾರೆ. ಆನೆಗಳು ಒಂದು ವೇಳೆ ಮೃತಪಟ್ಟರೆ ಈ ಆಸ್ತಿ ಐರಾವತ ಸಂಸ್ಥೆಗೆ ಹೋಗುತ್ತದೆ ಎಂದಿದ್ದಾರೆ.
undefined
click me!