ಬಿಹಾರ ವಿಧಾನಸಭಾ ಚುನಾವಣಾ ಪೂರ್ವ ಸಮೀಕ್ಷೆ: ಇಬ್ಬರಲ್ಲಿ ಯಾರಿಗೆ ಸ್ಪಷ್ಟ ಬಹುಮತ?

Published : Sep 29, 2025, 12:24 PM IST

ಟೈಮ್ಸ್ ನೌ ಮತ್ತು ಜೆವಿಸಿ ನಡೆಸಿದ ಬಿಹಾರ ವಿಧಾನಸಭಾ ಚುನಾವಣಾ ಪೂರ್ವ ಸಮೀಕ್ಷೆಯು ಒಂದು ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತವನ್ನು ಭವಿಷ್ಯ ನುಡಿದಿದೆ. ಆ ಮೈತ್ರಿ ಕೂಟ ಯಾವುದು  ಎಂದು ನೋಡೋಣ ಬನ್ನಿ

PREV
15
ಬಿಹಾರ ವಿಧಾನಸಭಾ ಚುನಾವಣೆ

ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಉಳಿದಿದ್ದು, ಖಾಸಗಿ ಮಾಧ್ಯಮ ವಾಹಿನಿ ಮತ್ತು ಕೆಲವೊಂದು ಸಂಸ್ಥೆಗಳು ಚುನಾವಣಾ ಪೂರ್ವ ಸಮೀಕ್ಷೆ ನಡೆಸುತ್ತಿವೆ. ಬಿಹಾರ ಚುನಾವಣೆ ನಿತೀಶ್ ಕುಮಾರ್ ವರ್ಸಸ್ ತೇಜಸ್ವಿ ಯಾದವ್ ಎಂದೇ ಬಿಂಬಿತವಾಗಿದೆ.

25
ಟೈಮ್ಸ್ ನೌ ಮತ್ತು ಜೆವಿಸಿ ಹೊಸ ಸಮೀಕ್ಷೆ

ಟೈಮ್ಸ್ ನೌ ಮತ್ತು ಜೆವಿಸಿ ಹೊಸ ಸಮೀಕ್ಷೆ ಪ್ರಕಟವಾಗಿದೆ. ಈ ಸರ್ವೇ ಪ್ರಕಾರ, ಎನ್‌ಡಿಎ ಕೂಟ 130 ರಿಂದ 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆಗಳಿವೆ. ಬಿಜೆಪ ತನ್ನ ಸ್ವಂತ ಬಲದಿಂದ ಸುಮಾರು 66 ರಿಂದ 77 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ನಿತೀಶ್ ಕುಮಾರ್ ಅವರ ಜೆಡಿಯು 52 ರಿಂದ 58 ಮತ್ತು ಎನ್‌ಡಿಎ ಕೂಟದ ಇತರೆ ಪಕ್ಷಗಳು 13-15 ಕ್ಷೇತ್ರಗಳಲ್ಲಿ ಗೆಲ್ಲಲಿವೆಯಂತೆ.

35
ತೇಜಸ್ವಿ ಯಾದವ್ ಮೈತ್ರಿಮಹಾಕೂಟ

ಟೈಮ್ಸ್ ನೌ ಮತ್ತು ಜೆವಿಸಿ ಸಮೀಕ್ಷೆ ಪ್ರಕಾರ, ತೇಜಸ್ವಿ ಯಾದವ್ ಅವರ ಮೈತ್ರಿಮಹಾಕೂಟ 81-103 ಕ್ಷೇತ್ರಗಳಲ್ಲಿ ಗೆಲ್ಲಬಹುದು. ಲಾಲೂ ಅವರ ಆರ್‌ಜೆಡಿ ಸ್ವಂತ ಬಲದಲ್ಲಿ 87-71, ಕಾಂಗ್ರೆಸ್ 11-14 ಮತ್ತು ಇಂಡಿಯಾ ಬ್ಲಾಕ್‌ ಜೊತೆ ಗುರುತಿಸಿಕೊಂಡಿರುವ ಪಕ್ಷಗಳು 13-18 ಗೆಲುವು ದಾಖಲಿಸಬಹುದು.

ಇದನ್ನೂ ಓದಿ:  ಚುನಾವಣಾ ಹೊಸ್ತಿಲಲ್ಲಿ ಬಿಹಾರದಲ್ಲಿ ಮಹಿಳೆಯರ ಓಲೈಸುವ ಗ್ಯಾರಂಟಿ ಯೋಜನೆ

45
ಜನ್ ಸೂರಜ್ ಪಕ್ಷ

ಬಿಹಾರ ಚುನಾವಣೆಯಲ್ಲಿ ಜನ್ ಸೂರಜ್ ಪಕ್ಷದ ಮೂಲಕ ಪ್ರಶಾಂತ್ ಕಿಶೋರ್ ಅಖಾಡಕ್ಕಿಳಿದಿದ್ದಾರೆ. ಸಮೀಕ್ಷೆ ಪ್ರಕಾರ, ಜನ್ ಸೂರಜ್ ಪಕ್ಷ ಕೇವಲ 4 ರಿಂದ 6 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಹೇಳಲಾಗುತ್ತಿದೆ. ಬಿಹಾರ ಚುನಾವಣೆಯಲ್ಲಿ ಈ ಬಾರಿಯೂ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷದಿಂದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ.

ಇದನ್ನೂ ಓದಿ: ಬಿಹಾರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರೊ ಓವೈಸಿಗೆ ಶಾಕ್ ನೀಡಿದ ಮುಸ್ಲಿಂ ಬಾಹುಳ್ಳವುಳ್ಳ ಗ್ರಾಮ

55
ಎಐಎಂಐಎಂ ಪಕ್ಷ

2020ರ ವಿಧಾನಸಭಾ ಚುನಾವಣೆಯಲ್ಲಿ ಎಐಎಂಐಎಂ ಪಕ್ಷ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಈ ಸಂಖ್ಯೆ ಇಳಿಕೆಯಾಗಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಎಐಎಂಐ ಮತ್ತು ಬಿಎಸ್‌ಪಿ ಜೊತೆಯಾಗಿ 5 ರಿಂದ 6 ಕ್ಷೇತ್ರಗಳನ್ನು ತಮ್ಮದಾಗಿಸಿಕೊಳ್ಳಬಹುದು ಎಂದು ಸಮೀಕ್ಷೆ ಹೇಳಿದೆ.

ಇದನ್ನೂ ಓದಿ: ಬಿಹಾರ ಚುನಾವಣೆ ಪೂರ್ವ ಸಮೀಕ್ಷೆ: ಬಿಹಾರಿಗಳು ಲಾಟೀನು ಹಿಡಿತಾರಾ? ಕಮಲ ಮುಡೀತಾರಾ?

Read more Photos on
click me!

Recommended Stories