ಕಾಶಿ ದಾಖಲೆ ಮುರಿದ ಆಯೋಧ್ಯೆ, 6 ತಿಂಗಳಲ್ಲಿ ರಾಮಮಂದಿರಕ್ಕೆ ಭೇಟಿ ನಿಡಿದವರೆಷ್ಟು?

First Published | Sep 15, 2024, 5:06 PM IST

ರಾಮ ಮಂದಿರ ಉದ್ಘಾಟನೆಯಾದ ಬಳಿಕ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದವರ ಸಂಖ್ಯೆಯಲ್ಲಿ ದಾಖಲೆ ಸೃಷ್ಟಿಯಾಗಿದೆ. ಕಾಶಿ ವಿಶ್ವನಾಥನ ಸನ್ನಿಧಾನದ ದಾಖಲೆಯನ್ನು ರಾಮ ಮಂದಿರ ಮುರಿದಿದೆ. ಕೇವಲ 6 ತಿಂಗಳಲ್ಲಿ ರಾಮ ಮಂದಿರಕ್ಕೆ ಭೇಟಿ ನೀಡಿದವರೆಷ್ಟು?
 

ram mandir

ಬರೋಬ್ಬರಿ 500 ವರ್ಷಗಳ ಹೋರಾಟದ ಬಳಿಕ ಆಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿ ಅಷ್ಟೆ ಅದ್ಧೂರಿಯಾಗಿ ಪ್ರಾಣಪ್ರತಿಷ್ಠೆ ನಡೆದಿದೆ. ಜನವರಿ 22, 2024ರಲ್ಲಿ ರಾಮ ಮಂದಿರ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ. ಕಳೆದ 6 ತಿಂಗಳಿಂದ ಆಯೋಧ್ಯೆಯ ಬಾಲರಾಮನಿಗೆ ಪ್ರತಿನಿತ್ಯ ಪೂಜೆ, ಅಲಂಕಾರಗಳು ನಡೆಯುತ್ತಿದೆ. ಇದರ ನಡುವೆ ಆಯೋಧ್ಯೆ ರಾಮ ಮಂದಿರ ಹೊಸ ದಾಖಲೆ ಬರೆದಿದೆ.

ಆಯೋಧ್ಯೆ ರಾಮ ಮಂದಿರ ಉದ್ಘಾಟನೆಯಾಗಿ 6 ತಿಂಗಳು ಕಳೆದಿದೆ. ಈ 6 ತಿಂಗಳಲ್ಲಿ ರಾಮ ಮಂದಿರಕ್ಕೆ ಬರೋಬ್ಬರಿ 11 ಕೋಟಿ ಮಂದಿ ಭೇಟಿ ನೀಡಿ ದರ್ಶನ ಪಡೆದು ಪುನೀತರಾಗಿದ್ದಾರೆ. ಈ ಮೂಲಕ ಗರಿಷ್ಠ ಸಂಖ್ಯೆಯಲ್ಲಿ ಜನರು ಬೇಟಿ ನೀಡಿದ ಸ್ಥಳ ಅನ್ನೋ ಹೆಗ್ಗಳಿಕೆಗೆ ರಾಮ ಮಂದಿರ ಪಾತ್ರವಾಗಿದೆ. ಧಾರ್ಮಿಕ ಕ್ಷೇತ್ರಗಳ ಪೈಕಿಯೂ ಆಯೋಧ್ಯೆ ಮೊದಲ ಸ್ಥಾನ ಪಡೆದುಕೊಂಡಿದೆ.

Tap to resize

ಕಳೆದ 6 ತಿಂಗಳಲ್ಲಿ ಕಾಶಿ ವಿಶ್ವನಾಥ ಸನ್ನಿಧಾನಕ್ಕೆ 4.61 ಕೋಟಿ ಮಂದಿ ಭೇಟಿ ನೀಡಿದ್ದಾರೆ. ಆಯೋಧ್ಯೆಗೆ 11 ಕೋಟಿ ಭಕ್ತರು ಭೇಟಿ ನೀಡಿದ್ದಾರೆ. ಈ ಕುರಿತು ಅಂಕಿ ಅಂಶವನ್ನು ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ನೀಡಿದೆ. ಇದರಲ್ಲಿ ದೇಶಿಯ ಹಾಗೂ ಅಂತಾರಾಷ್ಟ್ರೀಯ ಮಂದಿಯೂ ಸೇರಿದ್ದಾರೆ ಎಂದು ಇಲಾಖೆ ಹೇಳಿದೆ.

ಉತ್ತರ ಪ್ರದೇಶ ಹಲವು ಧಾರ್ಮಿಕ ಸ್ಥಳ, ಪ್ರವಾಸಿ ತಾಣ ಸೇರಿದಂತೆ ವಿವದೆಡೆಗೆ ಕಳೆದ 6 ತಿಂಗಳಲ್ಲಿ ಒಟ್ಟು 33 ಕೋಟಿ ಮಂದಿ ಬೇಟಿ ನೀಡಿದ್ದಾರೆ. ಈ ಪೈಕಿ ಆಯೋಧ್ಯೆಗೆ 11 ಕೋಟಿಯಾದರೆ, ಕಾಶಿ ವಿಶ್ವನಾಥ ದೇವಸ್ಥಾನಕ್ಕೆ 4.61 ಕೋಟಿ ಮಂದಿ ಭೇಟಿ ನೀಡಿದ್ದಾರೆ. ಎರಡು ಧಾರ್ಮಿಕ ಕ್ಷೇತ್ರಗಳು ಶೇಕಡಾ 50 ರಷ್ಟು ಉತ್ತರ ಪ್ರದೇಶದ ಫೂಟ್‌ಫಾಲ್ ಹೊಂದಿದ ತಾಣವಾಗಿದೆ.

ಪ್ರಯಾಗರಾಜ್‌ಗೆ 4.53 ಕೋಟಿ, ಮಥುರಾಗೆ 3.07 ಕೋಟಿ ಮಂದಿ ಭೇಟಿ ನೀಡಿದ್ದಾರೆ. ಇನ್ನು ಆಗ್ರಾಗೆ ತಾಜ್‌ಮಹಲ್‌ಗೆ 69.8 ಲಕ್ಷ ಮಂದಿ ಭೇಟಿ ನೀಡಿದ್ದರೆ, ಲಖನೌಗೆ 35 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. 2022ರಲ್ಲಿ ಉತ್ತರ ಪ್ರದೇಶಕ್ಕೆ ಆಗಮಿಸಿದ ಒಟ್ಟು ಪ್ರವಾಸಿಗರ ಸಂಖ್ಯೆ 31.86 ಕೋಟಿ ಮಂದಿ. ಆದರೆ 2024ರ 6 ತಿಂಗಳಿಗೆ ಈಗಾಗಲೇ 33 ಕೋಟಿ ಪ್ರವಾಸಿಗರು ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.

ಉತ್ತರ ಪ್ರದೇಶ ಇದೀಗ ವಿಶ್ವದ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ಥಳವಾಗಿ ಹೊರಹೊಮ್ಮುತ್ತಿದೆ. ಪ್ರಮುಖವಾಗಿ ಹಿಂದೂಗಳ ಮೂರು ಪುಣ್ಯ ಕ್ಷೇತ್ರಗಳಾದ ಕಾಶಿ,ಮಥುರಾ ಹಾಗೂ ಆಯೋಧ್ಯೆ ಮೂರು ಕೂಡ ಉತ್ತರ ಪ್ರದೇಶದಲ್ಲಿದೆ. ಈ ಮೂರು ಕ್ಷೇತ್ರಗಳಿಗೆ ಕಳೆದ 6 ತಿಂಗಳಲ್ಲಿ 19 ಕೋಟಿ ಮಂದಿ ಭೇಟಿ ನೀಡಿ ದಾಖಲೆ ಬರೆದಿದ್ದಾರೆ.

Latest Videos

click me!