ಪ್ರಧಾನಿ ನಿವಾಸಕ್ಕೆ ಬಂದ ಅತಿಥಿಗೆ ಮುದ್ದಾದ ಹೆಸರಿಟ್ಟ ನರೇಂದ್ರ ಮೋದಿ!

Published : Sep 14, 2024, 02:23 PM IST

ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿವಾಸಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಈ ಅತಿಥಿ ಬೇರೆ ಯಾರೂ ಅಲ್ಲ ಮುದ್ದಾದ ಕರು. ಪ್ರಧಾನಿಗಳು ಕರುವಿನ ಜೊತೆ ಕಳೆದ ಸುಂದರ ಕ್ಷಣದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ.

PREV
16
ಪ್ರಧಾನಿ ನಿವಾಸಕ್ಕೆ ಬಂದ ಅತಿಥಿಗೆ ಮುದ್ದಾದ ಹೆಸರಿಟ್ಟ ನರೇಂದ್ರ ಮೋದಿ!

ಪ್ರಧಾನಿ ಮೋದಿಯವರು ಶೇರ್ ಮಾಡಿಕೊಂಡಿರುವ 42 ಸೆಕೆಂಡ್ ವಿಡಿಯೋದಲ್ಲಿ ಸರ್ಕಾರಿ ನಿವಾಸದೊಳಗೆ ಪುಟಾಣಿ ಕರು ಬರೋದನ್ನು ನೋಡಬಹುದು. ಈ ಕರುವನ್ನು ಅಪ್ಪಿಕೊಂಡು ಪ್ರಧಾನಿಗಳು ಮುದ್ದಿಸಿದ್ದಾರೆ. ಈ ಪೋಸ್ಟ್‌ಗೆ ಗಾವಃ: ಸರ್ವಸುಖ್ ಪ್ರದಾ. ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಮಂತ್ರಿ ಗೃಹ ಕುಟುಂಬಕ್ಕೆ ಹೊಸ ಸದಸ್ಯರೊಬ್ಬರು ಮಂಗಳಕರ ಆಗಮನವಾಗಿದೆ ಎಂದು ಬರೆದುಕೊಂಡಿದ್ದಾರೆ.

26

ಪ್ರಧಾನಿ ನಿವಾಸದಲ್ಲಿಯ ಗೋ ಮಾತೆ ಹೊಸ ಕರುವಿಗೆ ಜನ್ಮ ನೀಡಿದೆ. ಕರುವಿನ ಹಣೆ ಮೇಲೆ ಜ್ಯೋತಿ ಚಿಹ್ನೆ ಇದೆ. ಹಾಗಾಗಿ ಕರುವಿಗೆ 'ದೀಪಜ್ಯೋತಿ' ಎಂದು ಹೆಸರಿಡಲಾಗಿದೆ ಎಂಬ ವಿಷಯವನ್ನು ಪ್ರಧಾನಿಗಳು ಹಂಚಿಕೊಂಡಿದ್ದಾರೆ.

36

ಪ್ರಧಾನಿಗಳಿಗಿರುವ ಪ್ರಾಣಿಗಳ ಮೇಲಿನ ಪ್ರೀತಿಯ ಈ ವಿಡಿಯೋ ಮತ್ತು ಫೋಟೋವನ್ನು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು, ಇದುವರೆಗಿನ ಇದು ಸುಂದರವಾದ ವಿಡಿಯೋ ಇದಾಗಿದೆ ಎಂದು ಬರೆದುಕೊಂಡಿದ್ದಾರೆ.

46

ಅತ್ಯಂತ ಅದ್ಭುತವಾದ ಮತ್ತು ಆಕರ್ಷಕ ದೃಶ್ಯ. ಪ್ರಧಾನಿ ನಿವಾಸದಲ್ಲಿ ಗೋಮಾತೆ ಕರುವಿಗೆ ಜನ್ಮ ನೀಡಿರುವುದು ಸಂತಸದ ವಿಷಯವಾಗಿದೆ. ಈ ವಿಡಿಯೋ ಮೂಲಕ ಮತ್ತೊಮ್ಮೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುತ್ತಿದ್ದೀರಿ. ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಉಳಿಸುವ ಮತ್ತೊಂದು ಹೆಜ್ಜೆ ಇದಾಗಿದೆ ಎಂದು ನೆಟ್ಟಿಗರು ಹೇಳಿದ್ದಾರೆ.

56

ಡಾ.ಪಂಕಜ್ ಕುಮಾರ್ ಓಜಾ ಎಂಬವರು, ಇದೊಂದು ತುಂಬಾ ಸುಂದರವಾದ ವಿಡಿಯೋ ಇದಾಗಿದೆ. ಹಸುವಿನ ಮೇಲಿನ ನಿಮ್ಮ ಸಮರ್ಪಣೆ ಮತ್ತು ಪ್ರೀತಿ ಅನನ್ಯವಾದದ್ದು. ಜ್ಞಾನ ಮತ್ತು ಬೆಳಕಿನ ಸಂಕೇತವಾಗಿರುವ 'ದೀಪಜ್ಯೋತಿ' ಎಂಬ ಹೆಸರು ತುಂಬಾ ಅರ್ಥಪೂರ್ಣವಾಗಿದೆ ಎಂದು ಕೊಂಡಾಡಿದ್ದಾರೆ.

66

ಇದು ಕೇವಲ ಗೋ ಮಾತೆಯ ಸೇವೆ ಅಲ್ಲ. ಇದು ನಮ್ಮ ಧರ್ಮಗ್ರಂಥಗಳಲ್ಲಿ ತಿಳಿಸಲಾದ ಜ್ಞಾನದ ಪ್ರಸರಣ ಎಂದು ನರೇಂದ್ರ ಮೋದಿಯವರ ಅಭಿಮಾನಿಗಳು ಕೊಂಡಾಡಿದ್ದಾರೆ. ಹೊಸ ಅತಿಥಿಯನ್ನು ಬರಮಾಡಿಕೊಂಡ ನಿಮಗೆ ಶುಭಾಶಯಗಳು ಎಂದು ಹೇಳಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories