ಅದಾನಿಯನ್ನ ಇವತ್ತೇ ಬಂಧಿಸಬೇಕು, ಪ್ರಧಾನಿ ಮೋದಿ ರಕ್ಷಿಸುತ್ತಾರೆ: ರಾಹುಲ್ ಗಾಂಧಿ ಕಿಡಿ

Published : Nov 21, 2024, 01:16 PM ISTUpdated : Nov 21, 2024, 01:18 PM IST

ಭಾರತದ ಬಿಲಿಯನೇರ್ ಗೌತಮ್ ಅದಾನಿ ಲಂಚ, ವಂಚನೆಯ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಬಹುಕೋಟಿ ವಂಚನೆ  ಪ್ರಕರಣದಲ್ಲಿ ನ್ಯೂಯಾರ್ಕ್ ಯುಎಸ್ ಜಿಲ್ಲಾ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದೆ  

PREV
16
ಅದಾನಿಯನ್ನ ಇವತ್ತೇ ಬಂಧಿಸಬೇಕು, ಪ್ರಧಾನಿ ಮೋದಿ ರಕ್ಷಿಸುತ್ತಾರೆ:  ರಾಹುಲ್ ಗಾಂಧಿ ಕಿಡಿ

ಭಾರತದ ಬಿಲಿಯನೇರ್ ಗೌತಮ್ ಅದಾನಿ ಲಂಚ, ವಂಚನೆಯ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಬಹುಕೋಟಿ ವಂಚನೆ  ಪ್ರಕರಣದಲ್ಲಿ ನ್ಯೂಯಾರ್ಕ್ ಯುಎಸ್ ಜಿಲ್ಲಾ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದೆ
 

26
Adani Group

ಈ ಪ್ರಕರಣದಲ್ಲಿಅದಾನಿ ಗ್ರೂಪ್‌ ಅಧ್ಯಕ್ಷರಾಗಿರುವ ಗೌತಮ್ ಅದಾನಿ ಮತ್ತು ಇತರ ಉದ್ಯಮ ಕಾರ್ಯನಿರ್ವಾಹಕರನ್ನು ದೋಷಾರೋಪಣೆ ಮಾಡಿದೆ. ಅದಾನಿ ವಿರುದ್ಧ ದೋಷಾರೋಪಣೆ ಸಲ್ಲಿಸಲಾಗಿದ್ದು, ಸೆಕ್ಯುರಿಟೀಸ್ ವಂಚನೆ ಮತ್ತು ಸೆಕ್ಯುರಿಟೀಸ್ ಮತ್ತು ವೈರ್ ವಂಚನೆ ಎಸಗಲು ಸಂಚು ಹೂಡಿದ ಆರೋಪ ಹೊರಿಸಲಾಗಿದೆ.

36

 ಸಿಎನ್ ಎನ್ ವರದಿ ಪ್ರಕಾರ, ಅದಾನಿ ಮತ್ತು ಇತರ ಏಳು ಹಿರಿಯ ವ್ಯಾಪಾರ ಕಾರ್ಯನಿರ್ವಾಹಕರು ಸೌರ ಶಕ್ತಿಯ ಒಪ್ಪಂದಗಳನ್ನು ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಸುಮಾರು 265 ಡಾಲರ್ ಮಿಲಿಯನ್ ಲಂಚವನ್ನು ನೀಡಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.
 

46

ಗೌತಮ್ ಅದಾನಿಯ ದೋಷಿ ಎನ್ನುವ ತೀರ್ಪು ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಸಂಸದ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆದಾನಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

56
Rahul Gandhi And Narendra Modi

 ಅಮೆರಿಕದಲ್ಲಿ ಲಂಚ ಹಗರಣಕ್ಕೆ ಸಂಬಂಧಿಸಿದಂತೆ ವಿವಾದಗಳಲ್ಲಿ ಸಿಲುಕಿರುವ ಗೌತಮ್ ಬಗ್ಗೆ ರಾಹುಲ್, ಅಮೆರಿಕದ ಏಜೆನ್ಸಿ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದೆ, ಆದರೆ ಭಾರತದಲ್ಲಿ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರಧಾನಿ ಮೋದಿ ಅದಾನಿ ಜೊತೆ ಶಾಮಿಲಾಗಿದ್ದಾರೆ. ಹೀಗಾಗಿ ಅದಾನಿಯನ್ನ ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

66

ಗೌತಮ ಅದಾನಿ ವಿರುದ್ಧ ಲಂಚ, ವಂಚನೆ ಪ್ರಕರಣದಲ್ಲಿ ದೋಷಿ ಎಂದು ನ್ಯಾಯಾಲಯ ಹೇಳುತ್ತಿದ್ದಂತೆಯೇ ಇತ್ತ ಅದಾನಿ ಹೂಡಿಕೆದಾರರು ಆತಂಕಗೊಂಡಿದ್ದಾರೆ. ಅದಾನಿ ಗ್ರೂಪ್‌ನ ಸ್ಟಾಕ್‌ಗಳ ನೆಲಕಚ್ಚಿವೆ. ಅಂದಾಜು 2.6 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿದೆ. ಇದು ಕೇವಲ ಆರಂಭ, ಮುಂದಿನ ದಿನಗಳಲ್ಲಿ ಅದಾನಿ ಗ್ರೂಪ್ ಶೇರುಗಳು ಇನ್ನಷ್ಟು ತೊಂದರೆಯನ್ನು ಎದುರಿಸಲಿದೆ ಎಂದು ಸ್ಟಾಕ್ ಮಾರ್ಕೆಟ್ ಎಕ್ಸಪರ್ಟ್ ಗಳು ಅಭಿಪ್ರಾಯ ಪಟ್ಟಿದ್ದಾರೆ.

Read more Photos on
click me!

Recommended Stories