ಇದೊಂದು ಕಾರಣಕ್ಕೆ ನೆಹರುಗೆ ಪಟೇಲರು ಪ್ರಧಾನಿ ಪಟ್ಟ ಬಿಟ್ಟುಕೊಟ್ಟಿದ್ದರು!

First Published Oct 31, 2020, 6:09 PM IST

ನವದೆಹಲಿ(ಅ.  31)  ವಲ್ಲಭಭಾಯ್ ಪಟೇಲ್ ಅವರ ಜನ್ಮದಿನಾಚರಣೆ ಸಂದರ್ಭ ನಟಿ ಕಂಗನಾ ರಣಾವತ್ ಪಟೇಲರಿಗೆ ನಮನ ಸಲ್ಲಿಸಿದ್ದಾರೆ. ಜತೆಗೆ ಇನ್ನೊಂದು ವಿಚಾರವನ್ನು ಹೇಳಿದ್ದಾರೆ.

ನೆಹರು ಇಂಗ್ಲಿಷ್ ಚೆನ್ನಾಗಿ ಮಾತನಾಡುತ್ತಾರೆ ಎಂಬ ಕಾರಣಕ್ಕೆ ಪಟೇಲರು ಪ್ರಧಾನಿ ಸ್ಥಾನ ತ್ಯಾಗ ಮಾಡಿದರು. ಈ ತ್ಯಾಗದ ಕೆಟ್ಟ ಪರಿಣಾಮವನ್ನು ದೇಶ ದಶಕಗಳ ಕಾಲ ಅನುಭವಿಸಬೇಕಾಯಿತು ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
undefined
ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನ. ಈ ಹಿನ್ನೆಲೆ ರಾಜಕೀಯ ಗಣ್ಯರು ಸೇರಿದಂತೆ ಸಿನಿ ತಾರೆಯರು ಕೂಡ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ. ಬಾಲಿವುಡ್ ನಟಿ ಕಂಗನಾ ರಣಾವತ್ ಪಟೇಲ್ ಅವರ ಫೋಟೋವೊಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ನೆಹರು ವಿಚಾರ ಬರೆದಿದ್ದಾರೆ.
undefined
ನೀವು ಇಂದಿನ ಅಖಂಡ ಭಾರತವನ್ನು ನಮಗೆ ನೀಡಿದ ಮಹಾನ್ ವ್ಯಕ್ತಿ. ಆದರೆ ನೀವು ಪ್ರಧಾನ ಮಂತ್ರಿಯಾಗಿ ನಿಮ್ಮ ಸ್ಥಾನವನ್ನು ತ್ಯಾಗ ಮಾಡುವ ಮೂಲಕ ನಿಮ್ಮ ಉತ್ತಮ ನಾಯಕತ್ವ ಮತ್ತು ದೂರದೃಷ್ಟಿಯನ್ನು ನಮ್ಮಿಂದ ದೂರವಿಟ್ಟಿದ್ದೀರಿ ಎಂದು ಇನ್ನೊಂದು ಟ್ವೀಟ್ ನಲ್ಲಿ ಬರೆದಿದ್ದಾರೆ.
undefined
ಇವರು ಭಾರತದ ನಿಜವಾದ ಉಕ್ಕಿನ ಮನುಷ್ಯ. ಗಾಂಧೀಜಿ ನೆಹರೂ ಅವರಂತಹ ದುರ್ಬಲ ಮನಸ್ಸಿನ ವ್ಯಕ್ತಿಯನ್ನು ಪ್ರಧಾನಿಯನ್ನಾಗಿಸಲು ಬಯಸಿದ್ದರು.
undefined
ಗಾಂಧೀಜಿ ನೆಹರು ಅವರನ್ನು ಮುಂದಿಟ್ಟುಕೊಂಡು ದೇಶ ಮುನ್ನೆಡಸಬಹುದು ಎಂದುಕೊಂಡಿದ್ದರು.
undefined
ಆದರೆ ಅವರ ನಿರ್ಧಾರ ತಪ್ಪಾಗಿತ್ತು. ಗಾಂಧೀಜಿ ಅವರ ಹತ್ಯೆ ಬಳಿಕ ನಡೆದದ್ದು ಮಾತ್ರ ದೊಡ್ಡ ದುರಂತ ಎಂದು ಇನ್ನೊಂದು ಕಡೆ ಬರೆದಿದ್ದಾರೆ.
undefined
click me!