24 ಗಂಟೆಯಲ್ಲಿ 60,975 ಕೊರೋನಾ ಕೇಸ್: ದೇಶದಲ್ಲಿ ಒಟ್ಟು 31.67 ಲಕ್ಷ ಸೋಂಕಿತರು!

Published : Aug 25, 2020, 04:37 PM ISTUpdated : Apr 28, 2021, 01:44 PM IST

ದೇಶದಲ್ಲಿ ಕೊರೋನಾತಂಕ ದಿನಗಳೆದಂತೆ ಹೆಚ್ಚಾಗಲಾರಂಭಿಸಿದೆ. ಭಾರತದಲ್ಲಿ ಕಳೆದ 24 ಗಂಟೆಯಲ್ಇ 60,975 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 31,67,323ಕ್ಕೇರಿದೆ ಎಂದು ಮಂಗಳವಾರ ಬೆಳಗ್ಗೆ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಅಲ್ಲದೇ ಕಳೆದ 24 ಗಂಟೆಯಲ್ಲಿ 848 ಮಂದಿ ಮೃತಪಟ್ಟಿದ್ದು, ಮಹಾಮಾರಿಯಿಂದ ಮೃತಪಟ್ಟವರ ಸಂಖ್ಯೆ 58,390ಕ್ಕೇರಿದೆ. ಇನ್ನು 66,550 ಮಂದಿ ಸೋಮವಾರ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಒಂದು ದಿನದಲ್ಲಿ ಅತಿ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ,ಹಾಗೂ ಈವರೆಗೂ ಒಟ್ಟು 24,05,585 ಮಂದಿ ಗುಣಮುಖರಾಗಿದ್ದಾರೆ. ಇಲ್ಲಿದೆ ನೋಡಿ ಕೊರೋನಾ ಸಂಬಂಧಿತ ಹತ್ತು ಪ್ರಮುಖ ಬೆಳವಣಿಗೆಗಳು

PREV
110
24 ಗಂಟೆಯಲ್ಲಿ 60,975 ಕೊರೋನಾ ಕೇಸ್: ದೇಶದಲ್ಲಿ ಒಟ್ಟು 31.67 ಲಕ್ಷ ಸೋಂಕಿತರು!

ವಿಶ್ವ ಆರೋಗ್ಯ ಸಂಸ್ಥೆಯ ದಾಖಲೆಗಳನ್ವಯ ಆಗಸ್ಟ್ 4ರಿಂದ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಕೊರೋನಾ ಪ್ರಕರಣ ದಾಖಲಾಗುತ್ತಿರುವ ದೇಶವಾಗಿದೆ. ಅಲ್ಲದೇ ಅತಿ ಹೆಚ್ಚು ಕೊರೋನಾ ಪ್ರಕರಣಗಳು ವರದಿಯಾದ ಮೂರನೇ ರಾಷ್ಟ್ರವಾಗಿದೆ. ಮೊದಲ ಸ್ಥಾನದಲ್ಲಿ ಅಮೆರಿಕವಿದ್ದರೆ, ಎರಡನೇ ಸ್ಥಾನದಲ್ಲಿ ಬ್ರೆಜಿಲ್ ಇದೆ.

210

ಕಳೆದ 24 ಗಂಟೆಯಲ್ಲಿ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು, ಕರ್ನಾಟಕ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ ಅತಿ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಅತಿ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

310

ಇನ್ನು ಮಹಾಮಾರಿ ಆರಂಭವಾದಾಗಿನಿಂದ ದೇಶದ ಐದು ರಾಜ್ಯಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಜೂನ್‌ವರೆಗೂ ಕೊರೋನಾದಿಂದ ತತ್ತರಿಸಿದ ಎರಡನೇ ರಾಜ್ಯವಾಗಿದ್ದ ದೆಹಲಿ ಸದ್ಯ ಆರನೇ ಸ್ಥಾನಕ್ಕಿಳಿದಿದೆ.

410

ಹರ್ಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್ ಖಟ್ಟರ್ ತಮಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಟ್ವೀಟ್ ಮಾಡಿದ್ದಾರೆ. ಅವರು ಗುರುಗಾಂವ್‌ನ ಮೆದಾಂತ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

510

ಕಳೆದ ಕೆಲ ದಿನಗಳಲ್ಲಿ ದೇಶದ ಪ್ರಮುಖ ರಾಜಕಾರಣಿಗಳಿಗೂ ಕೊರೋನಾ ಸೋಂಕು ಕಾನಿಸಿಕೊಂಡಿದೆ. ಕೇಂಧ್ರ ಗೃಹ ಸಚಿವ ಅಮಿತ್ ಶಾ, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್, ಮಧ್ಯಪ್ರದೇಶ ಮುಖ್ಯಮಂತ್ರಿ ಗಜೇಂದ್ರ ಸಿಂಗ್ ಶೆಖಾವತ್, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕರ್ನಾಟಕ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ.. ಹೀಗೆ ಅನೇಕರಿಗೆ ಈ ಮಹಮಾರಿ ತಗುಲಿದೆ.

610

ಇನ್ನು ಆಕ್ಸ್‌ಫರ್ಡ್‌ ಅಭಿವೃದ್ಧಿಪಡಿಸಿದ ಎರಡನೇ ಹಂತದ ಕ್ಲಿನಿಕಲ್ ಟೆಸ್ಟ್ ಇಂದು, ಮಂಗಳವಾರ ಪುಣೆ ಮೂಲದ ಸೆರಂ ಸಂಸ್ಥೆ ಆರಂಭಿಸಲಿದೆ.

710

ಕರ್ನಾಟಕದಲ್ಲಿ ಪ್ರಯಾಣಿಕರಿಗೆ ಹೇರಲಾಗಿದ್ದ ಎಲ್ಲಾ ನಿಯಮಗಳನ್ನು ತೆರವು ಮಾಡಲಾಗಿದೆ. ಯಾವೊಬ್ಬ ಪ್ರಯಾಣಿಕರಿಗೂ ಇನ್ಮುಂದೆ ಕ್ವಾರಂಟೈನ್ ಇರುವುದಿಲ್ಲ.

810

ಪಿಎಂ ಕೇರ್ಸ್‌ ಫಂಡ್‌ ಟ್ರಸ್ಟ್ ಬಿಹಾರದಲ್ಲಿ ಐನೂರು ಬೆಡ್‌ಗಳ ಎರಡು ಕೋವಿಡ್‌ ಆಸ್ಪತ್ರೆಗಳನ್ನು ನಿರ್ಮಿಸಲಿದೆ.

910

ವಿಶ್ವಾದ್ಯಂತ ಈವರೆಗೆ ಒಟ್ಟು 2.36 ಕೋಟಿ ಕೊರೋನಾ ಪ್ರಕರಣಗಳು ದಾಖಲಾಗಿವೆ. 8.12 ಲಕ್ಷ ಮಂದಿ ಈ ಮಹಾಮಾರಿಯಿಂದ ಸಾವನ್ನಪ್ಪಿದ್ದಾರೆ.

1010

ಮೆರಿಕದಲ್ಲಿ 57.39 ಲಕ್ಷ ಕೊರೋನಾ ಪ್ರಕರಣಗಳು ದಾಖಲಾಗಿದ್ದರೆ ಅತ್ತ ಬ್ರೆಜಿಲ್‌ನಲ್ಲಿ 36.22 ಲಕ್ಷ ಕೊರೋನಾ ಪ್ರಕರಣಗಳು ಈವರೆಗೆ ದಾಖಲಾಗಿವೆ. 

click me!

Recommended Stories