ಮನೆ ಕೆಲಸದವಳೊಂದಿಗೆ ಕೆಟ್ಟ ವರ್ತನೆ: ಹರ್ಯಾಣ ಐಜಿ ಅರೆಸ್ಟ್!

Published : Aug 23, 2020, 12:10 PM IST

ಮಹಿಳೆಯ ಮನೆಗೆ ನುಗ್ಗಿ ಥಳಿಸಿ ಹಾಗೂ ಕೆಟ್ಟದಾಗಿ ನಡೆದುಕೊಂಡ ಆರೋಪದಡಿಯಲ್ಲಿ ಹರ್ಯಾಣದ ಐಜಿಯನ್ನು ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಸಂಸತ್ರ್ಸತೆ ಅನೇಕ ಸೆಕ್ಷನ್‌ಗಳಡಿ ದೂರು ದಾಖಲಿಸಿದ್ದಾರೆ. ಐಜಿ ಸಾಹೇಬರು ಕುಡಿದ ಮತ್ತಿನಲ್ಲಿ ಮಹಿಳೆ ಹಾಗೂ ಆಕೆಯ ಮಗಳನ್ನು ಥಳಿಸಿದ್ದು, ಬಳಿಕ ಇಬ್ಬರಿಗೂ ಕೆಟ್ಟ ಪದಗಳಿಂದ ನಿಂದಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಮಹಿಳೆಯ ದೂರು ಹಾಗೂ ಈ ಘಟನೆಯ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಐಜಿ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

PREV
15
ಮನೆ ಕೆಲಸದವಳೊಂದಿಗೆ ಕೆಟ್ಟ ವರ್ತನೆ: ಹರ್ಯಾಣ ಐಜಿ ಅರೆಸ್ಟ್!

ಈ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಹರ್ಯಾಣದ ಹೋಂ ಗಾರ್ಡ್‌ನ ಐಜಿ ಹೇಮಂತ್ ಕಲ್ಸಲ್‌ರವರು ಪಿಂಜೋರ್‌ನಲ್ಲಿ ವಾಸಿಸುತ್ತಿದ್ದ ತನ್ನ ಮನೆ ಕೆಲಸದಾಕೆಯ ಮನೆಗೆ ನುಗ್ಗಿ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಹೀಗಿರುವಾಗ ಮಹಿಳೆ ಹಾಗೂ ಅವರ ಮಗಳು ಐಜಿ ವರ್ತನೆಯನ್ನು ಖಂಡಿಸಿದ್ದಾರೆ. ಇದರಿಂದ ಕೋಪಗೊಂಡ ಐಜಿ ಇಬ್ಬರ ಮೇಲೂ ಕೈ ಎತ್ತಿದ್ದಾರೆ. ಕೌಂಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಅವರು ತಮ್ಮನ್ನು ಪೀಡಿಸುತ್ತಿದ್ದರೆಂಬುವುದು ಮಹಿಳೆಯ ಆರೋಪ.

25

ರಾತ್ರಿ ಸುಮಾರು 8 ಗಂಟೆಗೆ ಐಜಿ ಸಾಹಹೇಬರು ಬಂದು, ಮನೆಯ ಡೋರ್ ಬೆಲ್ ಬಾರಿಸಲಾರಂಭಿಸಿದರು. ನಾನು ಗೇಟ್ ಓಪನ್ ಮಾಡುತ್ತಿದ್ದಂತೆಯೇ ನನ್ನನ್ನು ಒಡೆಯಲಾರಂಭಿಸಿದರು ಹಾಗೂ ಮನೆಎಯಿಂದ ಹೊರ ಹಾಕಿದರು. ಕೂಗಾಟ ಕೇಳಿ ನನ್ನ ಗಂಡ ಹೊರ ಬಂದರು. ಕೂಡಲೇ ಅವರ ಮೇಲೂ ಕೈ ಮಾಡಿದ್ದಾರೆ. ಈ ಜಗಳ ಕೇಳಿ ಮನೆ ಎದುರು ನೆರೆ ಹೊರೆಯವರೂ ಜಮಾಯಿಸಿದ್ದರು ಎಂದು ಮಹಿಳೆ ಘಟನೆಯನ್ನು ವಿವರಿಸಿದ್ದಾರೆ.

35

ಕಲ್ಸಲ್ ನಮ್ಮನ್ನು ಹೊಡೆಯುತ್ತಿದ್ದ ವೇಳೆ ತಾನು ಹರ್ಯಾಣ ಸಿಎಂ ಖಟ್ಟರ್ ಆಪ್ತ, ಹೀಗಾಗಿ ತನ್ನನ್ನೇನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದ ಎಂದು ಮಹಿಳೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಮಹಿಳೆ ಘಟನೆಯ ವಿಡಿಯೋವನ್ನೂ ಮಾಡಿದ್ದು, ಸದ್ಯ ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಐಜಿ ಸಹೇಬರ ಮಗಳು ಓಡಿ ಹೋಗಿ ತನ್ನ ಪ್ರಿಯಕರನೊಂದಿಗೆ ಮದುವೆಯಾಗಿದ್ದಾಳೆ. ಈ ಕೋಪವನ್ನು ಅವರು ನಮ್ಮ ಮೇಲೆ ತೋರಿಸುತ್ತಿದ್ದಾರೆ. ಇದೇ ಕಾರಣದಿಂದ ಅವರು ನಮ್ಮ ಮೇಲೆ ಕೈ ಮಾಡಿದ್ದಾರೆ ಎಂದೂ ಮಹಿಳೆ ತಿಳಿಸಿದ್ದಾರೆ.

45

ಐಜಿ ಮಹಿಳೆಯ ಮನೆಯವರ ಮೇಲೆ ಹೊಡೆದಾಡುವಾಗ ಸ್ಥಳೀಯರೆಲ್ಲಾ ಅವರ ಕಾರನ್ನು ಸುತ್ತುವರೆದಿದ್ದಾರೆ, ಅಲ್ಲದೇ ಪೊಲೀಸರನ್ನು ಕರೆದು ಅವರನ್ನು ಅರೆಸ್ಟ್ ಮಾಡುವಂತೆ ಆಗ್ರಹಿಸಿದ್ದಾರೆ. ಇದಾದ ಬಳಿಕ ಪೊಲೀಸರು ಐಜಿಯನ್ನು ಪಿಂಜೋರ್ ಠಾಣೆಗೆ ಕರೆದೊಯ್ದಿದ್ದಾರೆ. ಬಳಿಕ ದೂರು ದಾಖಲಿಸಲಾಗಿದೆ.

55

ಆರಂಭದಲ್ಲಿ ಪೊಲೀಸರು ಐಜಿಯನ್ನು ಬಂಧಿಸಲು ನಿರಾಕರಿಸಿದಾಗ ಸ್ಥಳೀಯರೆಲ್ಲಾ ಸೇರಿ ಪೊಲೀಸರಿಇಗೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದರಿಂದ ಹೆಸರಿದ ಪೊಲೀಸರಿ ಕ್ರಮ ಕೈಗೊಂಡಿದ್ದಾರೆ.

click me!

Recommended Stories