ಮೂಗಿನ ಹೊಳ್ಳೆ ಕೂದಲು ಕಿತ್ತರೆ ಪ್ರಾಣವೇ ಹೋದೀತು ಎಚ್ಚರ!!

Suvarna News   | Asianet News
Published : Apr 28, 2021, 06:42 PM IST

ಮನುಷ್ಯ ಉಸಿರಾಡಲು ಇರುವ ಮುಖ್ಯವಾದ ಅಂಗ ಎಂದರೆ ಅದು ಮೂಗು. ಉಸಿರಾಡುವ ಗಾಳಿಯಲ್ಲಿ ಕಂಡು ಬರುವ ಅನೇಕ ಕಲುಷಿತ ಕಣಗಳನ್ನು ಹೊರತು ಪಡಿಸಿ ಶುದ್ಧವಾದ ಗಾಳಿಯನ್ನು ಶ್ವಾಸ ಕೋಶಕ್ಕೆ ತಲುಪಿಸುವ ಕೆಲಸವನ್ನು ಮೂಗಿನ ಒಳ ಭಾಗದಲ್ಲಿ ಕಂಡು ಬರುವ ಕೂದಲು ಮಾಡುತ್ತದೆ.  

PREV
110
ಮೂಗಿನ ಹೊಳ್ಳೆ ಕೂದಲು ಕಿತ್ತರೆ ಪ್ರಾಣವೇ ಹೋದೀತು ಎಚ್ಚರ!!

ಇದನ್ನು  ದೇಹದ ' ಏರ್ ಫಿಲ್ಟರ್ ಸಿಸ್ಟಮ್ ' ಎಂದು ಕರೆಯಬಹುದು. ಒಂದು ವೇಳೆ  ಇಂತಹ ವ್ಯವಸ್ಥೆಯನ್ನು ತೆಗೆದು ಹಾಕಿದರೆ ಅದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಸೋಂಕು ಕಾರಕ ಕ್ರಿಮಿಗಳು ನೇರವಾಗಿ ಶ್ವಾಸಕೋಶ ತಲುಪಲು ಅನುಕೂಲ ಮಾಡಿಕೊಟ್ಟಂತೆ ಆಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಇದನ್ನು ಸಂಪೂರ್ಣವಾಗಿ ತೆಗೆದು ಬಿಡುವ ಬಗ್ಗೆ ಆಲೋಚನೆ ಮಾಡಬೇಡಿ. ಒಂದು ವೇಳೆ ಈ ಒಂದು ಕೆಟ್ಟ ನಿರ್ಧಾರಕ್ಕೆ ಬಂದರೆ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳು ಏನು ಎಂಬುದನ್ನು ತಿಳಿಯೋಣ 

210

ಮೂಗಿನ ಸೋಂಕಿಗೆ ಕಾರಣವಾಗಬಹುದು
ಮೂಗಿನ ಹೊಳ್ಳೆಯಲ್ಲಿ ಅತ್ಯಂತ ವಿರಳವಾಗಿ ಸಣ್ಣ ಸಣ್ಣ ಕೂದಲು ಕಂಡು ಬರುತ್ತದೆ. ನಿರ್ಲಕ್ಷ್ಯ ವಹಿಸಿ ಇದನ್ನು ಒಂದು ವೇಳೆ ತೆಗೆದು ಬಿಡಬೇಕು ಎನ್ನುವ ನಿರ್ಧಾರ ಮಾಡಿ ಚಿಮಟದ ಸಹಾಯದಿಂದ ಅಥವಾ ಬೇರೆ ಯಾವುದೇ ರೂಪದಲ್ಲಿ ಈ ಕೂದಲನ್ನು ತೆಗೆಯುವ ಪ್ರಯತ್ನ ಮಾಡಿದ್ದಾದರೆ ದೀರ್ಘಕಾಲದ ಸೋಂಕು ಕಾಡಬಹುದು.

310

ಕೆಲವರಿಗೆ ಕೂದಲು ತೆಗೆದ ಜಾಗದಲ್ಲಿ ರಕ್ತ ಮತ್ತು ಕೀವು ಕಂಡುಬಂದು ಸೋಂಕುಕಾರಕ ರೋಗಾಣುಗಳು ಹೊರಗಿನ ಧೂಳು ಮತ್ತು ಕೊಳೆ ಜೊತೆ ಸೇರಿಕೊಂಡು ಸಂಪೂರ್ಣ ಮೂಗಿನ ಹೊಳ್ಳೆಯನ್ನು ಹಾನಿ ಮಾಡುವ ಸಾಧ್ಯತೆ ಇರುತ್ತದೆ.

410

ಮುಖ್ಯವಾಗಿ ಅನ್ಯ ಕಣಗಳ ವಿರುದ್ಧ ರಕ್ಷಣೆಗಾಗಿ ಇರುವ ಮೂಗಿನ ಒಳಗಿನ ಕೂದಲನ್ನು ಸಂಪೂರ್ಣವಾಗಿ ಕಿತ್ತು ಹಾಕುವ ಬದಲು ಕೇವಲ ಉದ್ದವಾಗಿ ಬೆಳೆದಿರುವ ಕೂದಲಿನ ಭಾಗವನ್ನು ಕತ್ತರಿಸುವುದು ಒಳ್ಳೆಯದು.

510

ಮೂಗು ತುಂಬಾ ಸೂಕ್ಷ್ಮವಾದ ಭಾಗ ನೆನಪಿರಲಿ
ಮುಖದ ಭಾಗದಲ್ಲಿ ಸೂಕ್ಷ್ಮವಾದ ಭಾಗ ಎಂದರೆ ಅದು ಕಣ್ಣುಗಳು. ಆದರೆ ರಕ್ತ ಸಂಚಾರದ ವಿಚಾರಕ್ಕೆ ನೋಡಿಕೊಂಡರೆ ಕಣ್ಣು ಗಳಿಗಿಂತ ಸೂಕ್ಷ್ಮ ಎಂದರೆ ಅದು ಮೂಗು ಎಂದು ಹೇಳುತ್ತಾರೆ.

610

ಏಕೆಂದರೆ ಮೂಗಿನ ಅಂಚುಗಳಲ್ಲಿ ನೇರವಾಗಿ ರಕ್ತ ಸಂಚಾರವನ್ನು ಮೆದುಳಿಗೆ ವರ್ಗಾಯಿಸುವಂತಹ ರಕ್ತನಾಳಗಳು ಇರುವ ಕಾರಣ ಮೂಗಿನ ಹೊಳ್ಳೆಯಲ್ಲಿ ನಿರ್ದಾಕ್ಷಿಣ್ಯವಾಗಿ ಕೂದಲನ್ನು ತೆಗೆದರೆ ಅದರಿಂದ ಮೆದುಳಿಗೂ ಕೂಡ ಹಾನಿಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಬಗ್ಗೆ ಎಚ್ಚರ ವಹಿಸಿ.

710

ಇದರಿಂದ  ಸಾವು ಕೂಡ ಸಂಭವಿಸಬಹುದು
ಮೇಲೆ ಹೇಳಿದಂತೆ ಮೂಗಿನ ಅಂಚಿನ ಭಾಗಗಳಿಂದ ಮತ್ತು ಚರ್ಮದ ಒಳ ಪದರಗಳಿಂದ ರಕ್ತನಾಳಗಳು ಮೆದುಳಿಗೆ ಸಂಪರ್ಕ ಮಾಡುತ್ತವೆ. ಹಾಗಾಗಿ ಒಂದು ವೇಳೆ ಮೂಗಿನ ಹೊಳ್ಳೆಯಿಂದ ಕೂದಲನ್ನು ತೆಗೆಯಲು ಮುಂದಾದರೆ, ಇದು ನೇರವಾಗಿ ದೇಹದ ರೋಗ ನಿರೋಧಕ ಶಕ್ತಿ ಮೇಲೆ ಪ್ರಭಾವ ಬೀರುವ ಜೊತೆಗೆ ಮೆದುಳಿಗೆ ಉಂಟಾಗುವ ರಕ್ತ ಸಂಚಾರದಲ್ಲಿ ವ್ಯತ್ಯಾಸ ಮಾಡುತ್ತದೆ.

810

ಜೊತೆಗೆ ಮೂಗಿನ ಭಾಗದಿಂದ ನೇರವಾಗಿ ಸೋಂಕನ್ನು ಮೆದುಳಿಗೆ ವರ್ಗಾವಣೆ ಮಾಡುತ್ತದೆ. ಮೆದುಳಿನ ಮೇಲೆ ಒಂದು ರೀತಿಯ ಒತ್ತಡವನ್ನು ಉಂಟು ಮಾಡುವಲ್ಲಿ ಈ ಪ್ರಕ್ರಿಯೆ ಯಶಸ್ವಿಯಾಗುತ್ತದೆ ಎಂದು ಹೇಳಬಹುದು. ಹೀಗಾಗಿ ಕೆಲವೊಮ್ಮೆ ಇದರಿಂದ ವ್ಯಕ್ತಿಗೆ ಪಾರ್ಶ್ವವಾಯು ಕಂಡುಬರಬಹುದು ಅಥವಾ ಸಾವು ಕೂಡ ಸಂಭವಿಸಬಹುದು.

910

ಮೂಗಿನ ಮೇಲೆ ಕಂಡುಬರುವ ಮೊಡವೆಗಳು ಕೂಡ ಡೇಂಜರ್!!
ಇದುವರೆಗೂ ಕೇವಲ ಮೂಗಿನ ಒಳಗಿನ ಕೂದಲಿನ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಮೂಗಿನ ಮೇಲ್ಭಾಗದಲ್ಲಿ ಕಂಡು ಬರುವ ಮೊಡವೆಗಳನ್ನು ಬೆರಳುಗಳಿಂದ ಹಿಸುಕಿ ಬುಡ ಸಹಿತ ಅವುಗಳನ್ನು ತೆಗೆದು ಹಾಕಲು ಮುಂದಾದರೆ ಅಲ್ಲಿರುವ ರಕ್ತನಾಳಗಳಿಂದ ಸೋಂಕು ಉಂಟಾಗಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಇರುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ತ್ರಾಂಬೋಸಿಸ್ ಎಂದು ಕರೆಯುತ್ತಾರೆ. ಶೇಕಡ 30 % ಮಂದಿ ಈ ಒಂದು ಸಂಭವದಿಂದ ಸಾಯುತ್ತಿದ್ದಾರೆ.

1010

ಹಾಗಾದರೆ  ಏನು ಮಾಡಬೇಕು?
ಮುಖದ ಮೇಲೆ ಸೂಕ್ಷ್ಮ ಭಾಗ ಎಂದು ಯಾವ ಅಂಗಗಳು ಇರುತ್ತವೆ ಅವುಗಳ ಬಗ್ಗೆ ಸ್ವಲ್ಪ ಜಾಗರೂಕತೆ ವಹಿಸಬೇಕು. ಯದ್ವಾತದ್ವಾ ನಡೆದುಕೊಳ್ಳಲು ಹೋಗಬಾರದು.
ಒಂದು ವೇಳೆ ಮೂಗಿನ ಕೂದಲನ್ನು ತೆಗೆಯಬೇಕು ಎಂದುಕೊಂಡರೆ ಮೊದಲೇ ಹೇಳಿದ ಹಾಗೆ ಕೇವಲ ಮೂಗಿನ ಹೊರಭಾಗದಲ್ಲಿ ಬೆಳೆದು ಬಂದಿರುವ ಕೂದಲನ್ನು ಮಾತ್ರ ಕತ್ತರಿಯಿಂದ ಕತ್ತರಿಸಿ.

click me!

Recommended Stories