ಸಂಪೂರ್ಣ ಆರೋಗ್ಯ ಪರಿಶೀಲನೆಗಾಗಿ ಮರುವಿನ್ಯಾಸ
ಗ್ಯಾಲಕ್ಸಿ ವಾಚ್8 ಸರಣಿಯಲ್ಲಿ ರೂಪ ಮತ್ತು ಕಾರ್ಯ ಎರಡನ್ನೂ ಮರುವಿನ್ಯಾಸಗೊಳಿಸಲಾಗಿದ್ದು, ಅತ್ಯುತ್ತಮ ಕಾರ್ಯಕ್ಷಮತೆ ಜೊತೆಗೆ ಅತ್ಯಂತ ಆರಾಮವನ್ನು ಒದಗಿಸುತ್ತದೆ. ಅಲ್ಲದೇ ಇದು ದೈನಂದಿನ ಆರೋಗ್ಯ ನೋಡಿಕೊಳ್ಳಲು ಒಂದು ಸೂಕ್ತ ಸಂಗಾತಿಯಾಗಿ ಕಾರ್ಯ ನಿರ್ವಹಿಸುತ್ತದೆ. ಗ್ಯಾಲಕ್ಸಿ ವಾಚ್ ಆಲ್ಟ್ರಾದಲ್ಲಿ ಪರಿಚಯಿಸಲಾದ ವಿಶಿಷ್ಟ ಕುಶನ್ ಡಿಸೈನ್ ಈಗ ಇಡೀ ಗ್ಯಾಲಕ್ಸಿ ವಾಚ್ ಶ್ರೇಣಿಯನ್ನು ಮರುವಿನ್ಯಾಸಗೊಳಿಸುತ್ತಿದೆ. ಇದುವರೆಗಿನ ಅತ್ಯಂತ ತೆಳುವಾದ ವಾಚ್ ಡಿಸೈನ್ ಒದಗಿಸುವ ಸಲುವಾಗಿ ಗ್ಯಾಲಕ್ಸಿ ವಾಚ್8ನ ಆಂತರಿಕ ರಚನೆಯನ್ನು ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾಗಿದೆ ಮತ್ತು ಘಟಕಗಳ ಮೌಂಟಿಂಗ್ ಸಾಮರ್ಥ್ಯವನ್ನು ಶೇ.30ರಷ್ಟು ಸುಧಾರಿಸಲಾಗಿದೆ, ಇದರಿಂದಾಗಿ ಶೇ.11ರಷ್ಟು ತೆಳುವಾದ ವಾಚ್ ಡಿಸೈನ್ ದೊರಕಿದೆ. ಲಗ್ ಸಿಸ್ಟಮ್ ಅನ್ನು ಈ ಡಿಸೈನ್ ಜೊತೆ ಒದಗಿಸಲಾಗಿದ್ದು, ಈ ವಿನ್ಯಾಸವು ಮಣಿಕಟ್ಟಿನ ಚಲನೆಗೆ ಪೂರಕವಾಗಿ ಚಲಿಸುತ್ತದೆ. ಆ ಮೂಲಕ ಉತ್ತಮ ಸೌಲಭ್ಯ ಒದಗಿಸುತ್ತದೆ ಮತ್ತು ಸುಲಭವಾಗಿ ಆರೋಗ್ಯ ಚೆಕ್ ಮಾಡಲು ಅನುವು ಮಾಡಿಕೊಡುತ್ತದೆ.
ತೀವ್ರ ಸೂರ್ಯನ ಬೆಳಕಿನಲ್ಲಿಯೂ ಡಿಸ್‌ಪ್ಲೇ ನೋಡಬಹುದಾಗಿದ್ದು, ಶೇ.50ರಷ್ಟು ಹೆಚ್ಚು ಪ್ರಕಾಶಮಾನವಾಗಿ ಕಾಣಿಸುತ್ತದೆ. ಅಲ್ಲದೇ 3,000 ನಿಟ್ಸ್ ಬ್ರೈಟ್ ನೆಸ್ ಅನ್ನು ಹೊಂದಿದ್ದು, ಸುಲಭವಾಗಿ ನೋಡಲು ಸಾಧ್ಯವಾಗುತ್ತದೆ. ಅತ್ಯಾಧುನಿಕ ಬ್ಯಾಟರಿಯು ಈ ಕಾಲದ ಜೀವನಶೈಲಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತದೆ. ಡ್ಯುಯಲ್-ಫ್ರೀಕ್ವೆನ್ಸಿ ಜಿಪಿಎಸ್ ಹೆಚ್ಚು ವಿವರವಾಗಿ ಮತ್ತು ನಿಖರವಾಗಿ ಸ್ಥಳಗಳನ್ನು ತೋರಿಸುತ್ತದೆ. 3ಎನ್ಎಂ ಪ್ರೊಸೆಸರ್ ವೇಗವಾದ ಕಾರ್ಯಕ್ಷಮತೆ ಮತ್ತು ವಿದ್ಯುತ್ ದಕ್ಷತೆಯನ್ನು ಒದಗಿಸುತ್ತದೆ. ಗ್ರೌಂಡ್‌ಬ್ರೇಕಿಂಗ್ ಬಯೋಆಕ್ಟಿವ್ ಸೆನ್ಸರ್ ಉತ್ತಮವಾದ ಮತ್ತು ನಿಖರವಾದ ಆರೋಗ್ಯ ಒಳನೋಟಗಳನ್ನು ನೀಡುತ್ತದೆ. ನಿಮ್ಮ ಆರೋಗ್ಯದ ಸಂಪೂರ್ಣ ಚಿತ್ರಣವನ್ನು ಒದಗಿಸುತ್ತದೆ.