ಅದ್ಭುತ ವೈಶಿಷ್ಟ್ಯಗಳುಳ್ಳ ಜಿಯೋ ಸ್ಮಾರ್ಟ್‌ ಗ್ಲಾಸ್‌ ಅನಾವರಣ: ಮಾರ್ಕ್‌ ಜುಕರ್‌ಬರ್ಗ್‌ ವಿರುದ್ಧ ಪೈಪೋಟಿಗಿಳಿದ ಅಂಬಾನಿ!

First Published | Oct 31, 2023, 5:24 PM IST

ದೆಹಲಿಯಲ್ಲಿ ನಡೆದ IMC 2023 ಟೆಕ್ ಈವೆಂಟ್‌ನಲ್ಲಿ ರಿಲಯನ್ಸ್ ತನ್ನ ಜಿಯೋ ಸ್ಮಾರ್ಟ್ ಗ್ಲಾಸ್ ಫಸ್ಟ್‌ ಲುಕ್‌ ಅನ್ನು ಪ್ರದರ್ಶಿಸಿದೆ. ಇದು ಅದ್ಭುತ ವೈಶಿಷ್ಟ್ಯಗನ್ನು ಒಳಗೊಂಡಿದ್ದು, ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. 

ದೆಹಲಿಯಲ್ಲಿ ನಡೆದ IMC 2023 ಟೆಕ್ ಈವೆಂಟ್‌ನಲ್ಲಿ ರಿಲಯನ್ಸ್ ತನ್ನ ಜಿಯೋ ಸ್ಮಾರ್ಟ್ ಗ್ಲಾಸ್ ಅನ್ನು ಪ್ರದರ್ಶಿಸಿತು. ಟೆಲಿಕಾಂ ಆಪರೇಟರ್ ತನ್ನ ಬಳಕೆದಾರರನ್ನು ಓಲೈಸಲು ವಿವಿಧ ವಿಭಾಗಗಳಿಗೆ ವಿಸ್ತರಿಸುತ್ತಿದೆ.

ಕಂಪನಿಯು ಈಗ ಫೀಚರ್ ಫೋನ್ ಮಾತ್ರವಲ್ಲದೆ ಲ್ಯಾಪ್‌ಟಾಪ್‌, ಬ್ರಾಡ್‌ಬ್ಯಾಂಡ್ ಸಾಧನಗಳು, ಗೇಮಿಂಗ್ ಕಂಟ್ರೋಲರ್‌, ಸ್ಮಾರ್ಟ್‌ಫೋನ್‌ ಮತ್ತು ಹೆಚ್ಚಿನದನ್ನು ಮಾರಾಟ ಮಾಡುತ್ತದೆ. ಈಗ, ರಿಲಯನ್ಸ್ ತನ್ನ ಸ್ಮಾರ್ಟ್ ಗ್ಲಾಸ್ ಅನ್ನು ಪರಿಚಯಿಸಿದ್ದು ಇದನ್ನು ಕಂಪನಿಯು ಜಿಯೋ ಗ್ಲಾಸ್‌ (Jio Glass) ಎಂದು ಕರೆಯುತ್ತಿದೆ. ವಿವರಗಳು ಇಲ್ಲಿವೆ.

Tap to resize

ಪ್ರಸ್ತುತ ಸ್ಮಾರ್ಟ್ ಗ್ಲಾಸ್ ಮಾರುಕಟ್ಟೆಯಲ್ಲಿ ಮಾರ್ಕ್ ಜುಕರ್‌ಬರ್ಗ್ ಅವರ ಮೆಟಾ ಪ್ರಾಬಲ್ಯ ಹೊಂದಿದೆ. JioSpaceFiber ನೊಂದಿಗೆ ಎಲೋನ್ ಮಸ್ಕ್‌ಗೆ ಪೈಪೋಟಿ ನೀಡಲು ತಯಾರಿ ನಡೆಸುತ್ತಿರುವ ಅಂಬಾನಿ, ಮಾರ್ಕ್ ಜುಕರ್‌ಬರ್ಗ್‌ಗೆ ಕೂಡ ಪ್ರತಿಸ್ಪರ್ಧಿಯಾಗ್ತಿದ್ದಾರೆ.
 

ರಿಲಯನ್ಸ್ ಜಿಯೋಗ್ಲಾಸ್ ಅನ್ನು AR, VR ಮೋಡ್‌ಗಳೊಂದಿಗೆ ಅನಾವರಣಗೊಳಿಸಿದೆ: ಏನಿದು? ವೈಶಿಷ್ಟ್ಯಗಳು?

ಕೇವಲ 75 ಗ್ರಾಂ ತೂಕದ ಕನ್ನಡಕವನ್ನು ಧರಿಸಿರುವುದನ್ನು ಕಲ್ಪಿಸಿಕೊಳ್ಳಿ. ಜಿಯೋ ಗ್ಲಾಸ್‌ ನಿಮಗಾಗಿ ಅದನ್ನು ಹೊರತಂದಿದೆ. ಅದೂ, ಸ್ಮಾರ್ಟ್ ವೈಶಿಷ್ಟ್ಯಗಳೊಂದಿಗೆ. ಈ ಫ್ಯೂಚರಿಸ್ಟಿಕ್‌ ಲುಕ್ಕಿಂಗ್ ಕನ್ನಡಕ ನಯವಾದ ಮೆಟ್ಯಾಲಿಕ್‌ ಫ್ರೇಮ್ ಮತ್ತು 2 ಲೆನ್ಸ್‌ಗಳನ್ನು ಹೊಂದಿವೆ. 

USB - C ಕೇಬಲ್ ಬಳಸಿ ನೀವು ಅವುಗಳನ್ನು ನಿಮ್ಮ ಸ್ಮಾರ್ಟ್‌ಫೋನ್‌ಗೆ ಸಂಪರ್ಕಿಸಬಹುದು, ಇದು ಸಾಧನಕ್ಕೆ ವಿದ್ಯುತ್ ಮೂಲವಾಗಿಯೂ ಕಾರ್ಯನಿರ್ವಹಿಸುತ್ತದೆ. ಕಂಪನಿಯು ವೈರ್‌ಲೆಸ್ ಸಂಪರ್ಕಕ್ಕೆ ಬೆಂಬಲವನ್ನು ನೀಡುತ್ತದೆ ಎಂದು ಹೇಳಲಾಗುತ್ತಿದ್ದು, ಭವಿಷ್ಯದಲ್ಲಿ ಇದನ್ನು ಸೇರಿಸಬಹುದು. ಆದರೆ, ನೀವು ನಿಮ್ಮ ಸಂಪರ್ಕಿತ ಸ್ಮಾರ್ಟ್‌ಫೋನ್ ಅನ್ನು JioGlass ಗಾಗಿ ವರ್ಚುವಲ್ ಕಂಟ್ರೋಲರ್‌ ಆಗಿ ಬಳಸಬಹುದು.
 

ಎಲ್ಲಕ್ಕಿಂತ ಮುಖ್ಯವಾಗಿ ಜಿಯೋ ಗ್ಲಾಸ್‌ ನಿಮ್ಮ ಸ್ಮಾರ್ಟ್‌ಫೋನ್ ಪರದೆಯನ್ನು 100-ಇಂಚಿನ ವರ್ಚುವಲ್ ಡಿಸ್‌ಪ್ಲೇ ಆಗಿ ಪರಿವರ್ತಿಸುತ್ತದೆ. ಇದು ನಿಮ್ಮ ಕಣ್ಣುಗಳ ಮುಂದೆಯೇ ತೇಲುತ್ತಿರುವಂತೆ ತೋರುವ ಪರದೆಯನ್ನು ರಚಿಸುತ್ತದೆ. ಪ್ರತಿ ಕಣ್ಣು 1080p ಪ್ರದರ್ಶನವನ್ನು ಪಡೆಯುತ್ತದೆ.

ಜಿಯೋ ಗ್ಲಾಸ್‌ ಡಿಟ್ಯಾಚೇಬಲ್ ಫ್ಲ್ಯಾಪ್‌ ಅನ್ನು ಹೊಂದಿದೆ, ಇದನ್ನು ಒಮ್ಮೆ ತೆಗೆದ ಜನರು ಆಗ್ಮೆಂಟೆಡ್ ರಿಯಾಲಿಟಿ (AR) ವಿಷಯವನ್ನು ಆನಂದಿಸಬಹುದು. ಹಾಗೂ, ಫ್ಲ್ಯಾಪ್‌ ಅನ್ನು ಹಾಕಿಕೊಂಡ ಬಳಕೆದಾರರು ವರ್ಚುವಲ್ ರಿಯಾಲಿಟಿ (VR) ವಿಷಯವನ್ನು ನೋಡಲು ಸಾಧ್ಯವಾಗುತ್ತದೆ. ಇದು ವಾಲ್ಯೂಮ್ ಅಥವಾ ವರ್ಚುವಲ್ ಪರದೆಯ ಹೊಳಪನ್ನು ಸರಿಹೊಂದಿಸಲು ಟ್ರ್ಯಾಕ್‌ಪ್ಯಾಡ್ ನಿಯಂತ್ರಣಗಳನ್ನು ಸಹ ಹೊಂದಿದೆ.

ಇವುಗಳ ಜೊತೆಗೆ, ಉತ್ತಮ ಆಡಿಯೋ ಅನುಭವಕ್ಕಾಗಿ ಸೈಡ್‌ಗಳಲ್ಲಿ ಎರಡು ಸ್ಪೀಕರ್‌ಗಳಿದ್ದು, ಪ್ರಾದೇಶಿಕ ಆಡಿಯೋಗೆ ಇನ್‌ ಬಿಲ್ಟ್‌ ಸಪೋರ್ಟ್‌ ಇದೆ. ಧ್ವನಿ ಕರೆಗಳಿಗಾಗಿ ಮೈಕ್ರೋಫೋನ್‌ ಅನ್ನು ಸಹ ಕಾಣಬಹುದು. ಜಿಯೋ ಗ್ಲಾಸ್‌ನೊಂದಿಗೆ ಬಳಕೆದಾರರು ಮೂರು ಗಂಟೆಗಳ ರನ್‌ಟೈಮ್ ಅನ್ನು ಪಡೆಯುತ್ತಾರೆ ಎಂದು ಕಂಪನಿ ಹೇಳಿಕೊಂಡಿದ್ದು, 4,000mAh ಬ್ಯಾಟರಿಯನ್ನು ಹೊಂದಿದೆ.

JioGlass: ಬೆಲೆ ಎಷ್ಟು ಮತ್ತು ಅದು ಯಾವಾಗ ಮಾರಾಟವಾಗಲಿದೆ?
ಕಂಪನಿಯು ಎರಡು ಆವೃತ್ತಿಗಳನ್ನು ಪ್ರಾರಂಭಿಸುತ್ತದೆ - ಒಂದು ಗ್ರಾಹಕರಿಗೆ ಮತ್ತು ಎರಡನೆಯದು ಉದ್ಯಮಗಳಿಗೆ. ಹೊಸ ಜಿಯೋ ಗ್ಲಾಸ್‌ ಸಾಧನದ ಬೆಲೆ ಮತ್ತು ಲಭ್ಯತೆಯ ವಿವರಗಳನ್ನು ರಿಲಯನ್ಸ್ ಇನ್ನೂ ಬಹಿರಂಗಪಡಿಸಿಲ್ಲ. ಈ ವರ್ಷದ ಕೊನೆಯಲ್ಲಿ ಜಿಯೋ ಸ್ಮಾರ್ಟ್ ಗ್ಲಾಸ್ ಲಭ್ಯವಾಗಬಹುದೆಂದು ಹೇಳಲಾಗುತ್ತಿದೆ.
 

ಜಿಯೋ ಗ್ಲಾಸ್‌ ಆರಂಭಿಕ ಪ್ರವೇಶ ಲಭ್ಯ: ಹೇಗೆ ನೋಡಿ..

ಟೆಸ್ಸೆರಾಕ್ಟ್‌ ವೆಬ್‌ಸೈಟ್‌ನಲ್ಲಿ ಸಾಧನವು 'ಶೀಘ್ರದಲ್ಲೇ ಬರುತ್ತಿದೆ' ಎಂದು ಪಟ್ಟಿಮಾಡಲಾಗಿದೆ. ಇದು ಪ್ರಸ್ತುತ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಆರಂಭಿಕ ಪ್ರವೇಶ ಕಾರ್ಯಕ್ರಮವನ್ನು ಚಾಲನೆ ಮಾಡುತ್ತಿದೆ. ಆರಂಭಿಕ ಪ್ರವೇಶ ಪಡೆಯಲು ಆಸಕ್ತಿ ಹೊಂದಿರುವವರು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆದರೆ, ನೀವು ಆರಂಭಿಕ ಪ್ರವೇಶ ಕಾರ್ಯಕ್ರಮಕ್ಕೆ ಸೈನ್ ಅಪ್ ಮಾಡಲು ಹೆಸರು, ಬ್ಯುಸಿನೆಸ್‌ ಇಮೇಲ್, ಸಂಸ್ಥೆಯ ಹೆಸರು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಕೆಲವು ವಿವರಗಳನ್ನು ಹಂಚಿಕೊಳ್ಳುವ ಅಗತ್ಯವಿದೆ ಎಂಬುದನ್ನು ನೆನಪಿನಲ್ಲಿಡಿ.
 

Latest Videos

click me!