ಶೇ.70 ರಷ್ಟು ಡಿಸ್ಕೌಂಟ್‌ ಆಫರ್, ಕೇವಲ 799 ರೂಗೆ ಹೊಸ ಐಟೆಲ್ ಬಡ್ಸ್‌ ಲಭ್ಯ!

First Published | Dec 3, 2024, 6:44 PM IST

ಭಾರತದ ಐಟೆಲ್ ಇದೀಗ ಹೊಸ ಆಡಿಯೋ ಬಡ್ಸ್ ಎಸ್2, ಬಟ್ಸ್ S ANC ಹಾಗೂ ರೋರ್ 54 ಲಾಂಚ್ ಮಾಡಿದೆ. ವಿಶೇಷ ಅಂದರೆ ಬಿಡುಗಡೆ ಆಫರ್ ಆಗಿ ಶೇಕಡಾ 70 ರಷ್ಟು ಡಿಸ್ಕೌಂಟ್ ನೀಡಿದೆ. ಹೀಗಾಗಿ ಕೇವಲ 799 ರೂಪಾಯಿಗೆ ಲಭ್ಯವಿದೆ 

ಭಾರತದ ಸ್ಮಾರ್ಟ್‌ಫೋನ್ ಹಾಗೂ ಬಡ್ಸ್‌ಗೆ  ಭಾರಿ ಬೇಡಿಕೆ. ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಗ್ಯಾಜೆಟ್ಸ್ ಕಡಿಮೆ ಬೆಲೆಯಲ್ಲಿ ಹಲವು ಕಂಪನಿಗಳು ನೀಡುತ್ತಿದೆ. ಇದೀಗ ಭಾರತದ ಕಂಪನಿ ಐಟೆಲ್ ಹೊಸ ಬಡ್ಸ್ ಬಿಡುಗಡೆ ಮಾಡಿದೆ. ಐಟೆಲ್ ಎಸ್2, ಬಟ್ಸ್ S ANC ಹಾಗೂ ರೋರ್ 54 ಲಾಂಚ್ ಮಾಡಲಾಗಿದೆ. 

ಲಾಂಚ್ ವಿಶೇಷವಾಗಿ ಐಟೆಲ್ ಭರ್ಜರಿ ಆಫರ್ ನೀಡಿದೆ. ಬಡ್ಸ್ ಮೇಲೆ ಶೇಕಡಾ 70 ರಷ್ಟು ಡಿಸ್ಕೌಂಟ್ ಘೋಷಿಸಿದೆ. ಇದರ ಪರಿಣಾಮ ಇದೀಗ ಐಟೆಲ್ ರೋರ್ 54 ಕೇವಲ 799 ರೂಪಾಯಿಗೆ ಲಭ್ಯವಿದೆ. ಇನ್ನು ಐಟೆಲ್ ಎಸ್2 ಬೆಲೆ 1,199 ರೂಪಾಯಿ ಆಗಿದ್ದರೆ, ಬಟ್ಸ್ S ANC ಬೆಲೆ 1,499 ರೂಪಾಯಿಗೆ ಇಳಿಕೆಯಾಗಿದೆ.  

Tap to resize

ಮೊದಲ ನೋಟದಲ್ಲೇ ಸೆಳೆಯುವಂತೆ ವಿನ್ಯಾಸ ಈ ಬಡ್ಸ್‌ಗಿದೆ. ಪ್ರಮುಖ ವಿಶೇಷತೆ ಅಂದರೆ ಕೇವಲ 10  ನಿಮಿಷ ಚಾರ್ಜ್ ಮಾಡಿದರೆ ಬರೋಬ್ಬರಿ 180 ನಿಮಿಷಗಳ ಪೇಬ್ಯಾಕ್ ನೀಡಲಿದೆ. ಆಡಿಯೋ ಸ್ಪಷ್ಟ, ನಿಖರ ವಾಯ್ಸ್ ನೀಡಲಿದೆ. 50 ಗಂಟೆ ಪ್ಲೇ ಟೈಮ್, ಮಳೆಯಲ್ಲಿ ನೆನೆದರೂ, ನೀರಿಗೆ ಬಿದ್ದರೂ ಸಮಸ್ಯೆಯಾಗುವುದಿಲ್ಲ. 50 ಗಂಟೆ ಪ್ಲೇ ಟೈಮ್ ಸೇರಿದಂತೆ ಹಲವು ವಿಶೇಷತೆ ಇದರಲ್ಲಿದೆ. 

ಬಟ್ಸ್ S ANC ಹಾಗೂ ರೋರ್ 54 ಬಡ್ಸ್ ಕೂಡ ಇದೇ ರೀತಿ ಗರಿಷ್ಠ ಸಮಯ ಪ್ಲೇ ಟೈಮ್ ನೀಡಲಿದೆ. ನಿಮ್ಮ ಮನೋರಂಜನೆಗೆ ಯಾವುದೇ ಅಡೆ ತಡೆ ಇರುವುದಿಲ್ಲ. ವಿಶೇಷ ಅಂದರೆ ಲೊ ಲೇಟೆನ್ಸಿ ಗೇಮಿಂಗ್ ಫೀಚರ್ ಕಾರಣ, ಉತ್ತಮ ಗೇಮಿಂಗ್ ಅನುಭವ ನೀಡಲಿದೆ.ನಿಖರ ಸಂಪರ್ಕದ ಬ್ಲೂಟೂತ್ ಸೇರಿದಂತೆ ಹಲವು ಫೀಚರ್ಸ್ ಇದರಲ್ಲಿದೆ. 

Latest Videos

click me!