ಲುಕ್ಕುಂಡಿ ಮಣ್ಣಿನಡಿ ಹುದುಗಿದೆಯಾ 1000 ದೇಗುಲ, ಹಿಂದೂ ದೇವಸ್ಥಾನ, ಜಿನ ದೇಗುಲ ಸೇರಿದಂತೆ ಸಾವಿರಕ್ಕೂ ಹೆಚ್ಚು ಮಂದಿರಗಳಿದ್ದ ಅತ್ಯಂತ ಸಮೃದ್ಧ ನಗರ ಲುಕ್ಕುಂಡಿ ಇದೀಗ ಮಣ್ಣಿನಡಿ ಹುದುಗಿ ಹೋಗಿದೆಯಾ? ಏನಿದರ ಇತಿಹಾಸ
ಲಕ್ಕುಂಡಿ ಇದೀಗ ಕರ್ನಾಟಕ ಮಾತ್ರವಲ್ಲ ದೇಶದ ಕುತೂಹಲ ಕೆರಳಿಸಿದೆ. ಗತಕಾಲದಲ್ಲಿ ಅತ್ಯಂತ ಸಮೃದ್ಧ ನಗರವಾಗಿದ್ದ ಲಕ್ಕುಂಡಿ ಇದೀಗ ಉತ್ಖನನದ ಮೂಲಕ ಇತಿಹಾಸದ ಪುಟಗಳು ತೆರೆದುಕೊಳ್ಳುತ್ತಿದೆ. ಜಮೀನಿನಲ್ಲಿ ಚಿನ್ನ ಸಿಕ್ಕ ಬಳಿಕ ಶುರುವಾದ ಉತ್ಖನನ ಲುಕ್ಕುಂಡಿಯ ಶ್ರೀಮಂತಿಕೆ, ಗತವೈಭವ ಸಾರಿ ಹೇಳುತ್ತಿದೆ. ಲಕ್ಕುಂಡಿ ಕುರಿತು ಇತಿಹಾಸ ತಜ್ಞೆ ಹನುಮಾಕ್ಷಿ ಗೋಗಿ ಸ್ಫೋಟಕ ಮಾಹಿತಿ ನೀಡಿದ್ದಾರೆ.
26
ಲಕ್ಕುಂಡಿಯಲ್ಲಿ ರಾಜರ ಆಳ್ವಿಕೆ
ಏಷ್ಯನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಹನುಮಾಕ್ಷಿ ಗೋಗಿ, ಲಕ್ಕುಂಡಿಗೆ ರಾಷ್ಟ್ರಕೂಟರ ಕಾಲದ ಇತಿಹಾಸ ಇದೆ ಎಂದಿದ್ದಾರೆ.ಲಕ್ಕುಂಡಿ ಇತಿಹಾಸ 9 ನೇ ಶತಮಾನದ ಶಿಲಾಶಾಸನಗಳಿಂದ ಸ್ಪಷ್ಟವಾಗಿದೆ. ಇಲ್ಲಿ ಹಾಗಾಗಿ ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಕಲಚೂರರು, ಯಾದವರು, ಹೊಸ್ಸಳರು, ವಿಜಯನಗರ ಅರಸರು ಆಳಿದ್ದಾರೆ ಎಂದಿದ್ದಾರೆ. ಇದೇ ವೇಳೆ ದೇವಸ್ಥಾನಗಳ ಇತಿಹಾಸ ಬಿಚ್ಚಿಟ್ಟಿದ್ದಾರೆ.
36
ದೇವಾಲಯಗಳ ಬಗ್ಗೆ ಶಾಸನದಲ್ಲಿ ಉಲ್ಲೇಖ
ಕಲ್ಯಾಣ ಚಾಲುಕ್ಯರ ಕಾಲದ 11,12 ನೇ ಶತಮಾನದ ದೇವಾಲಯ, ಬಸದಿಗಳು ಇಲ್ಲಿವೆ. ದೇವಾಲಯ, ಬಸದಿಗೆ ದಾನ ದತ್ತಿಕೊಟ್ಟ ಬಗ್ಗೆ ಶಾಸನದಲ್ಲಿ ಉಲ್ಲೇಖವಿದೆ. ಅತ್ತಿಮಬ್ಬೆ 10001 ಜಿನದೇವಾಲಯ ಕಟ್ಟಿಸಿದ್ದಾರೆ ಎಂಬ ಉಲ್ಲೇಖವಿದೆ. ಲಕ್ಕುಂಡಿಯಲ್ಲಿ 101 ದೇವಸ್ಥಾನ 101 ಬಾವಿ ಅನ್ನೋ ಉಲ್ಲೇಖ ಶಾಸನದಲ್ಲಿ ಇಲ್ಲ. ಆದರೆ ಆದ್ರೆ ಲಕ್ಕುಂಡಿಯಲ್ಲಿ ಸಾಕಷ್ಟು ದೇವಸ್ಥಾನಗಳಿವೆ ಎಂಬುದು ಸ್ಪಷ್ಟ ಎಂದು ಹನುಮಾಕ್ಷಿ ಹೇಳಿದ್ದಾರೆ.
ಲಕ್ಕುಂಡಿ ದೊಡ್ಡ ನಗರವಾಗಿತ್ತು.ಅತ್ತಿಮಬ್ಬೆ ಈ ನಾಡಿನಲ್ಲಿದ್ದರು. ಕಲ್ಯಾಣ ಚಾಲುಕ್ಯರ ತೈಲಪ, ಸತ್ಯಾಶ್ರಯ ಕಾಲದಲ್ಲಿ ದಂಡ ನಾಯಕರಾಗಿದ್ದರು. ಅತ್ತಿಮಬ್ಬೆಯ ಗಂಡ ನಾಗದೇವ, ಮಗ ಪಡವಳತೈಲನೂ ದಂಡನಾಯಕನಾಗಿದ್ದ. ಅತ್ತಿಮಬ್ಬೆಯ ಅರಮನೆ ಕೂಡ ಇದೇ ಜಾಗದಲ್ಲಿತ್ತು ಎಂದು ಶಾಸನ ಹೇಳುತ್ತದೆ ಎಂದಿದ್ದಾರೆ.
56
ಶಾಸನದಲ್ಲಿ ನಿಧಿ ಬಗ್ಗೆ ಉಲ್ಲೇಖವಿಲ್ಲ
ಲಕ್ಕುಂಡಿಯಲ್ಲಿ ಸಮೃದ್ಧವಾಗಿತ್ತು.1000 ಮಹಜನರಿದ್ದರು, ವರ್ತಕರಿದ್ದರು. ವ್ಯಾಪಾರಿಗಳು ಇದ್ದ ಕಾರಣ ಇಲ್ಲಿ ಸಾಕಷ್ಟು ಪ್ರಮಾಣದ ಸಂಪತ್ತು ಇತ್ತು. ಜನ ಹೇಳುವ ಹಾಗೆ ನಿಧಿ ಇತ್ತು ಎನ್ನೋದನ್ನ ನಂಬಲು ಸಾಧ್ಯವಿಲ್ಲ. ನಿಧಿಯ ಬಗ್ಗೆ ಶಾಸಕನದಲ್ಲಿ ಯಾವುದೇ ಉಲ್ಲೇಖ ಇಲ್ಲ..ಸಿಕ್ಕ ಸಿಕ್ಕಲ್ಲಿ ನಿಧಿ ಸಿಗಲ್ಲ.. ಪೂರ್ವಿಕರು ಮನೆ ಬಿಡುವ ಸಂದರ್ಭಗಳಲ್ಲಿ ಚಿನ್ನ ಹುಗಿಯುತ್ತಿದ್ದರು ಎಂದು ಇತಿಹಾಸ ತಜ್ಞೆ ಹೇಳಿದ್ದಾರೆ.
66
ಟಂಕಶಾಲೆ ಇರುವ ಭಾಗದಲ್ಲಿ ಚಿನ್ನ ಸಿಗುವ ಸಾಧ್ಯತೆ
ರಾಜ ಮಹಾರಾಜರ ಕಾಲದ ಟಂಕಶಾಲೆಯಲ್ಲಿ ಚಿನ್ನ ಇಡುತ್ತಿದ್ದರು. ಈ ಟಂಕಶಾಲೆ ಇರುವ ಭಾಗದಲ್ಲಿ ಚಿನ್ನ ಸಿಗುವ ಸಾಧ್ಯತೆ ಇದೆ. ಕೊಪ್ಪರಿಯಲ್ಲಿ ಚಿನ್ನ ತೆಗೆದಿಟ್ಟ ಬಗ್ಗೆ ಯಾವುದೇ ಉಲ್ಲೇಖ ಇಲ್ಲ. ಆದರೆ ಇತ್ತೀಚೆಗೆ ಸಿಕ್ಕ ಚಿನ್ನದ ರೀತಿಯಲ್ಲಿ ಮಡಿಕೆ, ಕುಡಿಕೆಯಲ್ಲಿ ಸಿಗುವ ಸಾಧ್ಯತೆ ಇದೆ ಎಂದಿದ್ದಾರೆ. ನಾಗ ಮಣಿ, ನಿಧಿ ರಕ್ಷಣೆಯ ನಾಗ ಅನ್ನೋದು ಕಾಲ್ಪನಿಕ ಎಂದಿದ್ದಾರೆ.