ಸರ್ಕಾರ ₹13 ಲಕ್ಷ ಖರ್ಚು ಮಾಡಿ ಮೆಸ್ಸಿ ಆಹ್ವಾನಿಸಿದ್ರೂ ಕೇರಳಕ್ಕೆ ಬರುತ್ತಿಲ್ಲ ಲಿಯೋನಲ್ ಮೆಸ್ಸಿ

Published : Aug 07, 2025, 09:31 PM IST

ಕೇರಳ ಸರ್ಕಾರ ಬರೋಬ್ಬರಿ 13 ಲಕ್ಷ ರೂಪಾಯಿ ಖರ್ಚು ಮಾಡಿ ಫುಟ್ಬಾಲಿಗ ಲಿಯೋನಲ್ ಮೆಸ್ಸಿಯನ್ನು ಆಹ್ವಾನಿಸಿದೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. ಆದರೆ ಮೆಸ್ಸಿ ಮಾತ್ರ ಕೇರಳಕ್ಕೆ ಭೇಟಿ ನೀಡುತ್ತಿಲ್ಲ.

PREV
15

ಅರ್ಜೆಂಟೀನಾ ಫುಟ್ಬಾಲಿಗ ಲಿಯೋನಲ್ ಮೆಸ್ಸಿಯನ್ನು ಕೇರಳಕ್ಕೆ ಕರೆಸಲು ಕೇರಳ ಸರ್ಕಾರ ಬರೋಬ್ಬರಿ 13 ಲಕ್ಷ ರೂಪಾಯಿ ಖರ್ಚು ಮಾಡಿದೆ ಅನ್ನೋ ಸ್ಫೋಟಕ ಮಾಹಿತಿ ಬಯಲಾಗಿದೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಕೇರಳ ಸರ್ಕಾರ 2024ರಲ್ಲಿ ಲಿಯೋನಲ್ ಮೆಸ್ಸಿಯನ್ನು ಕೇರಳಕ್ಕೆ ಕರೆಯಿಸಲು 13 ಲಕ್ಷ ರೂಪಾಯಿ ಖರ್ಚು ಮಾಡಿದೆ ಎಂದಿದೆ. ಇಷ್ಟು ಖರ್ಚು ಮಾಡಿದರೂ ಇದೀಗ ಮೆಸ್ಸಿ ಭಾರತಕ್ಕೆ ಭೇಟಿ ನೀಡುತ್ತಿದ್ದರೂ ಕೇರಳಕ್ಕೆ ಭೇಟಿ ನೀಡುತ್ತಿಲ್ಲ ಅನ್ನೋದು ಖಚಿತವಾಗಿದೆ.

25

ಲಿಯೋನ್ ಮೆಸ್ಸಿಯನ್ನು ಆಹ್ವಾನಿಸಲು 2024ರಲ್ಲಿ ಕೇರಳ ಕ್ರೀಡಾ ಸಚಿವ ವಿ ಅದ್ಬುರಹಿಮಾನ್ ಅವರನ್ನು ಸರ್ಕಾರ ಸ್ಪೇನ್‌ಗೆ ಕಳುಹಿಸಿಕೊಟ್ಟಿತ್ತು. ಕ್ರೀಡಾ ಸಚಿವರು ಕ್ರೀಡಾ ಹಾಗೂ ಯುವಜನ ವಿಭಾಗದ ಕಾರ್ಯದರ್ಶಿಯನ್ನು ಜೊತೆಗೆ ಕರೆದುಕೊಂಡು ಸ್ಪೇನ್ ಪ್ರವಾಸ ಮಾಡಿದ್ದರು. ಇದಕ್ಕಾಗಿ ಕೇರಳ ಸರ್ಕಾರ 13 ಲಕ್ಷ ರೂಪಾಯಿ ಖರ್ಚು ಮಾಡಿತ್ತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಆದರೆ ಈ ಆರೋಪವನ್ನು ಕ್ರೀಡಾ ಸಚಿವರು ಅಲ್ಲಗೆಳೆದಿದ್ದಾರೆ.

35

ಲಿಯೋನಲ್ ಮೆಸ್ಸಿಯನ್ನು ಆಹ್ವಾನಿಸಲು ಸ್ಪೇನ್‌ಗೆ ತೆರಳಿದ್ದೇನೆ. ಆದರೆ ಸರ್ಕಾರದಿಂದ ಒಂದು ರೂಪಾಯಿ ಖರ್ಚು ಮಾಡಿಲ್ಲ ಎಂದು ಕ್ರೀಡಾ ಸಚಿವ ವಿ ಅದ್ಬುರಹಿಮಾನ್ ಹೇಳಿದ್ದಾರೆ. ಕಾರ್ಯದರ್ಶಿ ಜೊತೆಗೆ ತೆರಳಿ ಮಸ್ಸಿ ಭೇಟಿ ಆಹ್ವಾನ ನೀಡಲಾಗಿದೆ. ಇದಕ್ಕೆ ಸರ್ಕಾರ ಒಂದು ರೂಪಾಯಿ ಖರ್ಚು ಮಾಡಿಲ್ಲ ಎಂದಿದ್ದಾರೆ. ಆದರೆ ತಾವೇ ಸ್ವಂತ ಖರ್ಚಿನಲ್ಲಿ ಹೋಗಿದ್ದಾರ ಅನ್ನೋ ಕುರಿತು ಯಾವುದೇ ಮಾಹಿತಿ ನೀಡಿಲ್ಲ.

45

ಲಿಯೋನಲ್ ಮೆಸ್ಸಿಗೆ ಇದೇ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಆದರೆ ಕೇರಳಕ್ಕೆ ಭೇಟಿ ನೀಡುತ್ತಿಲ್ಲ. ಕೋಲ್ಕತಾ, ಮುಂಬೈ ಹಾಗೂ ದೆಹಲಿಗೆ ಭೇಟಿ ನೀಡುವುದು ಬಹುತೇಕ ಖಚಿತಗೊಂಂಡಿದೆ. ಆದರೆ ಕೇರಳಕ್ಕೆ ಮೆಸ್ಸಿ ಭೇಟಿ ನೀಡುತ್ತಿಲ್ಲ ಅನ್ನೋದು ಖಚಿತಗೊಂಡಿದೆ. ಕೋಲ್ಕತಾ, ಮುಂಬೈ, ದೆಹಲಿ ಬೇಟಿ ಬಳಿಕ ಅಲ್ಪ ಸಮಯದಲ್ಲಿ ಕೇರಳ ಪ್ರವಾಸ ಅಸಾಧ್ಯವಾಗಿರುವ ಕಾರಣ ಮೆಸ್ಸಿ ಭೇಟಿ ನೀಡುತ್ತಿಲ್ಲ ಎಂದು ಕೇರಳ ಕ್ರೀಡಾ ಸಚಿವರು ಸ್ಪಷ್ಟಪಡಿಸಿದ್ದಾರೆ.

55

ಕೇರಳದಲ್ಲಿ ಮೆಸ್ಸಿ ಅಭಿಮಾನಿಗಳ ಸಂಖ್ಯೆ ಹೆಚ್ಚಿದ.ಇಲ್ಲಿನ ಜನರ ಆಸಕ್ತಿಗೆ ಅನುಗುಣವಾಗಿ ಮೆಸ್ಸಿ ಆಹ್ವಾನಿಸಲಾಗಿತ್ತು.ಖರ್ಚು ಮಾಡಿರುವ ಆರೋಪ ರಾಜಕೀಯ ಪ್ರೇರಿತ ಎಂದು ಕ್ರೀಡಾ ಸಚಿವರು ಹೇಳಿದ್ದಾರೆ. ಆದರೆ ಕೇರಳದ ವಿಪಕ್ಷಗಳು ಪಿಣರಾಯಿ ವಿಜಯನ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದೆ. ಸಾರ್ವಜನಿಕ ಹಣವನ್ನು ಪೋಲು ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.

Read more Photos on
click me!

Recommended Stories