ಅಲ್ ನಸರ್ ಕ್ಲಬ್‌ ಜತೆ ಒಪ್ಪಂದ: ಕ್ರಿಸ್ಟಿಯಾನೋ ರೊನಾಲ್ಡೋ ಬಾರಿಸುವ ಪ್ರತಿ ಒಂದು ಗೋಲಿಗೆ ಒಂದು ಕೋಟಿ ರುಪಾಯಿ!

Published : Jul 19, 2025, 03:37 PM IST

ಪೋರ್ಚುಗಲ್ ಫುಟ್ಬಾಲ್ ದಂತಕಥೆ ಕ್ರಿಸ್ಟಿಯಾನೋ ರೊನಾಲ್ಡೋ ಇದೀಗ ಮತ್ತೊಮ್ಮೆ ಅಲ್ ನಸರ್ ಕ್ಲಬ್‌ ಜತೆ ಮರು ಒಪ್ಪಂದ ಮಾಡಿಕೊಂಡಿದ್ದಾರೆ. ಇದು ರೊನಾಲ್ಡೋ ಪಾಲಿಗೆ ಹೊಸ ಸಂಪತ್ತಿನ ಮಳೆ ಸುರಿಸುವಂತೆ ಮಾಡಿದೆ.

PREV
18

ದಿಗ್ಗಜ ಪೋರ್ಚುಗೀಸ್ ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೋ ಸೌದಿ ಅರೇಬಿಯಾದ ಫುಟ್ಬಾಲ್ ಕ್ಲಬ್ ಅಲ್ ನಸರ್ ಕ್ಲಬ್ ಜತೆ ಹೊಸ ಮೆಗಾ ಮನಿ ಡೀಲ್‌ಗೆ ಸಹಿಹಾಕಿದ್ದಾರೆ.

28

40 ವರ್ಷದ ರೊನಾಲ್ಡೋ ಇದೀಗ ತಮ್ಮ ವಾರ್ಷಿಕ ಮೂಲ ವೇತನ 178(GBP) ಗ್ರೇಟ್ ಬ್ರಿಟನ್‌ ಪೌಂಡ್ ಮಿಲಿಯನ್ ಡಾಲರ್(2000 ಕೋಟಿ ರುಪಾಯಿ) ರುಪಾಯಿ ಪಡೆದುಕೊಳ್ಳಲಿದ್ದಾರೆ. ಇದರ ಜತೆಗೆ ಇನ್ನಷ್ಟು ಅನುಕೂಲಗಳು ರೊನಾಲ್ಡೋಗಿವೆ.

38

ಇನ್ನು ಇದಷ್ಟೇ ಅಲ್ಲದೇ ರೊನಾಲ್ಡೋ ಬೋನಸ್ ರೂಪದಲ್ಲಿ 24.5 ಮಿಲಿಯನ್ ಡಾಲರ್ ಗ್ರೇಟ್‌ ಬ್ರಿಟನ್ ಪೌಂಡ್, ಇನ್ನು ಎರಡನೇ ವರ್ಷ 38 ಮಿಲಿಯನ್ GBP ಪಡೆಯಲಿದ್ದಾರೆ.

48

ಒಂದು ವೇಳೆ ರೋನಾಲ್ಡೋ ಗೆಲುವು ದಾಖಲಿಸಿದರೆ,

ಸೌದಿ ಪ್ರೊ ಲೀಗ್ ಗೆದ್ದರೇ: 8 ಮಿಲಿಯನ್

ಎಎಫ್‌ಸಿ ಚಾಂಪಿಯನ್ಸ್ ಲೀಗ್: 5 ಮಿಲಿಯನ್

ಗೋಲ್ಡನ್ ಬೂಟ್: 4 ಮಿಲಿಯನ್ ತಮ್ಮ ಜೇಬಿಗಿಳಿಸಿಕೊಳ್ಳಲಿದ್ದಾರೆ.

58

ಇನ್ನು ರೊನಾಲ್ಡೋ ಪ್ರತಿ ಗೋಲಿಗೆ ಸುಮಾರು 80,000 GBP ಪಡೆಯಲಿದ್ದಾರೆ. 80,000 GBP ಅಂದರೆ ಭಾರತೀಯ ರುಪಾಯಿ ಲೆಕ್ಕಾಚಾರದಲ್ಲಿ ಒಂದು ಕೋಟಿ ರುಪಾಯಿಗಳು. ಗೋಲು ಗಳಿಸಲು ಅಸಿಸ್ಟ್ ಮಾಡಿದರೇ ರೊನಾಲ್ಡೋ 40,000 GBP(50 ಲಕ್ಷ ರುಪಾಯಿ) ಪಡೆಯಲಿದ್ದಾರೆ.

68

ಇದೆಲ್ಲಕ್ಕಿಂತ ಇನ್ನೂ ಇಂಟ್ರೆಸ್ಟಿಂಗ್ ಸಂಗತಿಯೆಂದರೇ, ಕ್ರಿಸ್ಟಿಯಾನೋ ರೊನಾಲ್ಡೋಗೆ ಅಲ್ ನಸರ್ ಕ್ಲಬ್ 15% ಓನರ್‌ಶಿಪ್‌ ಸ್ಟೇಕ್ ನೀಡಲಿದೆ.

78

ಇನ್ನು ಇದೆಲ್ಲದರ ಜತೆಗೆ ಕ್ರಿಸ್ಟಿಯಾನೋ ರೊನಾಲ್ಡೋ ಸ್ಪಾನ್ಸರ್‌ಶಿಪ್ ಡೀಲ್ ಮೂಲಕವೇ ವಾರ್ಷಿಕ 600 ಕೋಟಿ ರುಪಾಯಿ ಹಣವನ್ನು ತಮ್ಮ ಜೇಬಿಗಿಳಿಸಿಕೊಳ್ಳಲಿದ್ದಾರೆ.

88

ಅಲ್ ನಸರ್ ಕ್ಲಬ್ ಕ್ರಿಸ್ಟಿಯಾನೋ ರೊನಾಲ್ಡೋ ಅವರಿಗೆ ವಿಮಾನ ಪ್ರಯಾಣದ ವೆಚ್ಚದ ರೂಪದಲ್ಲಿ ಬರೋಬ್ಬರಿ 50 ಕೋಟಿ ರುಪಾಯಿ ನೀಡಲಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories