ಫಿಫಾ ವಿಶ್ವಕಪ್‌ನಲ್ಲಿ ವೈರಲ್‌ ಆಗಿದ್ದ ಮಾಡೆಲ್‌ ಮತ್ತೆ ಪ್ರತ್ಯಕ್ಷ; ಪಡ್ಡೆ ಹುಡುಗರ ಕಣ್ಣಿಗೆ ಹಬ್ಬ

First Published | Jun 20, 2023, 3:40 PM IST

ದೋಹಾ: 2022ರ ಕತಾರ್‌ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಒಬ್ಬ ಮಾಡೆಲ್‌ ತಮ್ಮ ಕ್ರೋವೆಷಿಯಾ ತಂಡವನ್ನು ಬೆಂಬಲಿಸಿ ವ್ಯಾಪಕ ಗಮನ ಸೆಳೆದಿದ್ದರು. ಆ ಮಾಡೆಲ್ ಇದೀಗ ಮತ್ತೆ ಪ್ರತ್ಯಕ್ಷರಾಗಿದ್ದಾಳೆ. ಯಾರವಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

2022ರ ಕತಾರ್ ಫಿಫಾ ವಿಶ್ವಕಪ್ ಟೂರ್ನಿಯ ವೇಳೆ ಇವಾನಾ ನೊಲ್ ಎನ್ನುವ ಮಾಡೆಲ್‌ ತಮ್ಮ ನೆಚ್ಚಿನ ಕೊವೇಷಿಯಾ ತಂಡವನ್ನು ಬೆಂಬಲಿಸಿ ಫುಟ್ಬಾಲ್ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.

ಇವಾನಾ ನೊಲ್ ಅವರ ಲುಕ್‌ನಿಂದಲೇ ಆಕೆ, 'ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಸೆಕ್ಸಿಯೆಷ್ಟು ಫ್ಯಾನ್‌' ಎನ್ನುವ ಮಟ್ಟಕ್ಕೆ ಜಾಗತಿಕ ಮಟ್ಟದಲ್ಲಿ ಇವಾನಾ ನೊಲ್ ಸುದ್ದಿಯಾಗಿದ್ದರು.

Tap to resize

ಇನ್ನು ಇವಾನಾ ಕಳೆದ ಭಾನುವಾರ ನ್ಯಾಷನಲ್‌ ಲೀಗ್ ಫೈನಲ್‌ ಟೂರ್ನಿಯಲ್ಲಿ ಸ್ಪೇನ್ ಹಾಗೂ ಕ್ರೊವೇಷಿಯಾ ನಡುವಿನ ಫುಟ್ಬಾಲ್‌ ಪಂದ್ಯವನ್ನು ಕಣ್ತುಂಬಿಕೊಳ್ಳಲು ಮೈದಾನಕ್ಕೆ ಬಂದು ಮತ್ತೆ ಗಮನ ಸೆಳೆದಿದ್ದರು.

ನೆದರ್‌ಲೆಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಸ್ಪೇನ್ ಫುಟ್ಬಾಲ್ ತಂಡವು ಕ್ರೊವೇಷಿಯಾವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಮಣಿಸುವ ಮೂಲಕ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿತ್ತು.

ಡೇಲಿಮೇಲ್ ವರದಿಯ ಪ್ರಕಾರ, ಸ್ಪೇನ್ ವಿರುದ್ದ ಕ್ರೊವೇಷಿಯಾ ತಂಡವನ್ನು ಬೆಂಬಲಿಸಲು ಮೈದಾನಕ್ಕೆ ಬಂದಿದ್ದ ಇವಾನಾ ನೊಲ್ ಅವರಿಗೆ ಈ ಫಲಿತಾಂಶ ಆಕೆಯ ಹಾರ್ಟ್‌ ಬ್ರೇಕ್‌ ಆಗುವಂತೆ ಮಾಡಿತಂತೆ.

ಇವಾನಾ ನೊಲ್ ತಮ್ಮ ಹಾಟ್‌ ಲುಕ್‌ನಿಂದಲೇ ಫಿಫಾ ಫುಟ್ಬಾಲ್ ವಿಶ್ವಕಪ್‌ ಟೂರ್ನಿಯ ವೇಳೆ ತಾವೊಬ್ಬ ಜನಪ್ರಿಯ ಸೆಲಿಬ್ರಿಟಿ ರೂಪದಲ್ಲಿ ಬೆಳೆದು ನಿಂತರು. ಆಕೆಯನ್ನು ಇನ್‌ಸ್ಟಾಗ್ರಾಂನಲ್ಲಿ 3 ಮಿಲಿಯನ್ ಮಂದಿ ಫಾಲೋ ಮಾಡುತ್ತಿದ್ದಾರೆ.

ಇಷ್ಟೊಂದು ಪ್ರಚಾರ ಸಿಕ್ಕಿದ ಬಳಿಕ ಕಳೆದ ಡಿಸೆಂಬರ್‌ನಲ್ಲಿ ಮಾತನಾಡಿದ್ದ ಇವಾನಾ, "ನಾನು ಎಲ್ಲರ ಜತೆ ಎಂಜಾಯ್ ಮಾಡುತ್ತೇನೆ. ನಾನು ಚೆನ್ನಾಗಿ ಕಾಣುತ್ತೇನೆ ಎನ್ನುವ ಕಾರಣಕ್ಕಾಗಿಯೇ ಜನರು ನನ್ನನ್ನು ಇಷ್ಟಪಡುತ್ತಿದ್ದಾರೆ" ಎಂದು ಹೇಳಿದ್ದರು.

ಇನ್ನು ಮುಂದುವರೆದು, "ನಾನು ಎಲ್ಲರ ಜತೆ ಬೆರೆಯಲು ಸಿದ್ದನಿದ್ದೇನೆ. ನನ್ನ ಉದ್ದೇಶ ಎಲ್ಲರ ಮುಖದಲ್ಲೂ ನಗುವಿನ ಮಂದಹಾಸ ಮೂಡುವಂತೆ ಮಾಡುವುದಾಗಿದೆ" ಎಂದು ಇವಾನಾ ಹೇಳಿದ್ದರು.

ನನ್ನನ್ನು ಎಲ್ಲಾ ಕಡೆಯ ಫ್ಯಾನ್ಸ್‌ ಪ್ರೀತಿ ಮಾಡುತ್ತಾರೆ. ಆದರೆ ಕ್ಯಾಮರಾಗಳನ್ನು ನನ್ನನ್ನು ಫಾಲೋ ಮಾಡುವುದರಿಂದ ನನ್ನ ಸ್ನೇಹಿತರು ನನ್ನ ಜತೆ ಕುಳಿತುಕೊಳ್ಳಲು ಹಿಂಜರಿಯುತ್ತಾರೆ' ಎಂದು ತಮ್ಮ ಅಸಮಾಧಾನವನ್ನು ಇವಾನಾ ಹೊರಹಾಕಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯವಾಗಿರುವ ಇವಾನಾ ನೊಲ್, ಇನ್‌ಸ್ಟಾಗ್ರಾಂನಲ್ಲಿ ಹಾಟ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆಹುಡುಗರ ನಿದ್ದೆ ಕದಿಯುವಲ್ಲಿ ಯಶಸ್ವಿಯಾಗಿದ್ದಾರೆ.

Latest Videos

click me!