ಮಹಾಭಾರತದಲ್ಲಿ ನಿಮ್ಮ ರಾಶಿ ಯಾರಿಗೆ ಹೊಂದಿಕೆಯಾಗುತ್ತೆ ಗೊತ್ತಾ?

ಭಾರತದಲ್ಲಿ ತುಂಬಾ ಪಾತ್ರಗಳಿವೆ. ಒಂದೊಂದು ಪಾತ್ರಕ್ಕೂ ವಿಶೇಷ ಗುಣಗಳಿವೆ. ಹಾಗಾದರೆ.. ಜ್ಯೋತಿಷ್ಯ ಶಾಸ್ತ್ರದಲ್ಲಿ ನಿಮ್ಮ ರಾಶಿ.. ಮಹಾಭಾರತದಲ್ಲಿ ಯಾವ ಕ್ಯಾರೆಕ್ಟರ್​ಗೆ ಹೊಂದಿಕೆಯಾಗುತ್ತೆ ಅಂತಾ ತಿಳಿದುಕೊಳ್ಳೋಣ ಬನ್ನಿ.

ಮಹಾಭಾರತ


ಭಾರತೀಯ ಪುರಾಣಗಳಲ್ಲೇ ಶ್ರೇಷ್ಠ ಇತಿಹಾಸ ಮಹಾಭಾರತ. ಭಾರತದಲ್ಲಿ ತುಂಬಾ ಪಾತ್ರಗಳಿವೆ. ಒಂದೊಂದು ಪಾತ್ರಕ್ಕೂ ವಿಶೇಷ ಗುಣಗಳಿವೆ. ಹಾಗಾದರೆ.. ಜ್ಯೋತಿಷ್ಯ ಶಾಸ್ತ್ರದಲ್ಲಿ ನಿಮ್ಮ ರಾಶಿ.. ಮಹಾಭಾರತದಲ್ಲಿ ಯಾವ ಕ್ಯಾರೆಕ್ಟರ್​ಗೆ ಹೊಂದಿಕೆಯಾಗುತ್ತೆ ಅಂತಾ ತಿಳಿದುಕೊಳ್ಳೋಣ ಬನ್ನಿ..

ಕನ್ನಡ ಜ್ಯೋತಿಷ್ಯ


1.ಮೇಷ ರಾಶಿ- ಭೀಮ..
ಮೇಷ ರಾಶಿಯವರು ಮಹಾಭಾರತದಲ್ಲಿ ಭೀಮನ ಪಾತ್ರಕ್ಕೆ ಸರಿಹೋಗ್ತಾರೆ. ಧೈರ್ಯ, ಶಕ್ತಿ, ಯೋಧರ ಸ್ಪೂರ್ತಿಗೆ ಮೇಷ ರಾಶಿ ಹೆಸರುವಾಸಿಯಾಗಿದೆ. ಭೀಮನಲ್ಲೂ ಇದೇ ಗುಣಗಳಿವೆ.ಭೀಮನಲ್ಲಿರುವ ಗುಣಗಳೆಲ್ಲಾ ಮೇಷರಾಶಿಯಲ್ಲಿ ಇರುತ್ತೆ.  ಉತ್ಸಾಹದಿಂದ ಯಾವುದೇ ಹೋರಾಟಕ್ಕಾದರೂ ಮುಂದೆ ಹೋಗ್ತಾರೆ. ತನ್ನ ಕುಟುಂಬವನ್ನು ರಕ್ಷಿಸುವುದರಲ್ಲಿಯೂ ಮುಂದಿರುತ್ತಾರೆ. ಮುಖಸ್ತುತಿ ಸ್ವಭಾವದೊಂದಿಗೆ, ನಿರ್ಭಯವಾಗಿ ಇರುತ್ತಾರೆ.


ಕನ್ನಡ ಜ್ಯೋತಿಷ್ಯ

2.ವೃಷಭ ರಾಶಿ- ಯುಧಿಷ್ಠಿರ
ವೃಷಭ ರಾಶಿ ಸ್ಥಿರತೆ, ಸಹನೆಯಿಂದ ತುಂಬಿರುತ್ತಾರೆ. ಈ ಗುಣಗಳು ಯುಧಿಷ್ಠಿರನಲ್ಲಿ ಸ್ಪಷ್ಟವಾಗಿ ಕಾಣಿಸುತ್ತವೆ. ಯುಧಿಷ್ಠಿರನ ಹಾಗೇ ವೃಷಭ ರಾಶಿಯವರು ಸತ್ಯ, ಧರ್ಮದ ವಿಷಯದಲ್ಲಿ ತುಂಬಾ ಬದ್ಧತೆಯಿಂದ ಇರುತ್ತಾರೆ. 

ಕನ್ನಡ ಜ್ಯೋತಿಷ್ಯ

3.ಮಿಥುನ ರಾಶಿ- ಶಕುನಿ...
ಮಿಥುನ ರಾಶಿ ಮಹಾಭಾರತದಲ್ಲಿ ಶಕುನಿ ಕ್ಯಾರೆಕ್ಟರ್​ಗೆ ಮ್ಯಾಚ್ ಆಗುತ್ತೆ. ಶಕುನಿಯಲ್ಲಿರುವ ಬುದ್ಧಿವಂತಿಕೆ, ದ್ವಂದ್ವ ಸ್ವಭಾವ ಮಿಥುನ ರಾಶಿಯವರಲ್ಲಿ ಸ್ಪಷ್ಟವಾಗಿ ಇರುತ್ತೆ.ಪಾಂಡವರು ವನವಾಸಕ್ಕೆ ಹೋಗುವುದಕ್ಕೆ, ಕೊನೆಗೆ ಕೌರವರ ಜೊತೆ ಯುದ್ಧ ಮಾಡುವುದಕ್ಕೆ ಹೀಗೆ.. ಮಹಾಭಾರತದ ಹಿಂದಿನ ಅಸಲಿ ಕಥೆ ನಡೆಯಿಸಿದ್ದು ಶಕುನಿ ಅಂತಾನೇ ಹೇಳಬಹುದು. ಮಿಥುನ ರಾಶಿಯವರು ಕೂಡಾ ಸೈಲೆಂಟ್ ಆಗಿ ಮಾಡಬೇಕಾದ್ದನ್ನೆಲ್ಲಾ ಮಾಡ್ತಾ ಇರ್ತಾರೆ, ಬೇರೆಯವರ ಮನಸ್ಸನ್ನು ಬದಲಾಯಿಸುವ ಹಾಗೆ ಮಾತನಾಡೋದು ಇವರಿಗೆ ಮಾತ್ರ ಸಾಧ್ಯ.

ಕನ್ನಡ ಜ್ಯೋತಿಷ್ಯ


4ಕರ್ಕಾಟಕ ರಾಶಿ - ಕುಂತಿ
ಕರ್ಕಾಟಕ ರಾಶಿ ರಕ್ಷಣೆ, ಸಾನುಭೂತಿ ಗುಣಗಳಿಗೆ ಹೆಸರುವಾಸಿಯಾಗಿದೆ, ಈ ಗುಣಗಳು ಪಾಂಡವರ ತಾಯಿ ಕುಂತಿಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತವೆ. ಕುಂತಿಗೆ ತನ್ನ ಮಕ್ಕಳ ಮೇಲೆ ಅಪಾರ ಪ್ರೀತಿ, ಅವರ ಯೋಗಕ್ಷೇಮಕ್ಕಾಗಿ ವೈಯಕ್ತಿಕ ತ್ಯಾಗಗಳನ್ನು ಮಾಡಲು ಸಿದ್ಧರಿರುತ್ತಾರೆ. ಕರ್ಕಾಟಕ ರಾಶಿಯವರು ಕೂಡಾ ನಿತ್ಯವೂ ಕುಟುಂಬಕ್ಕಾಗಿ ತಾಪತ್ರಯ ಪಡುತ್ತಾ ಇರುತ್ತಾರೆ.

ಕನ್ನಡ ಜ್ಯೋತಿಷ್ಯ

ಸಿಂಹ ರಾಶಿ - ಕರ್ಣ
ಸಿಂಹ ರಾಶಿಯವರು ಅವರ ಗರ್ವ, ತೇಜಸ್ಸು, ಗೌರವದ ಭಾವಕ್ಕೆ ಹೆಸರುವಾಸಿ, ಮಹಾಭಾರತದ ಅತ್ಯಂತ ಸಂಕೀರ್ಣವಾದ ಪಾತ್ರಗಳಲ್ಲಿ ಒಬ್ಬರಾದ ಕರ್ಣನಲ್ಲಿ ಸ್ಪಷ್ಟವಾಗಿ ಕಾಣಿಸುವ ಗುಣಗಳಿವು. ಕುಂತಿಗೆ ಹುಟ್ಟಿದರೂ, ಕರ್ಣ ಕೌರವರ ಪಕ್ಷದಲ್ಲಿ ನಿಲ್ಲುತ್ತಾನೆ. ಅವನು ತನ್ನ ಧೈರ್ಯ, ನೈಪುಣ್ಯತೆ, ದೊಡ್ಡ ಹೃದಯದ ಮೂಲಕ ಪ್ರಾಮುಖ್ಯತೆಯನ್ನು ಪಡೆದಿದ್ದಾನೆ. ಸಿಂಹ ರಾಶಿಯಲ್ಲೂ ಇದೇ ಗುಣಗಳು ಹೇರಳವಾಗಿ ಇರುತ್ತವೆ.
 

ಕನ್ನಡ ಜ್ಯೋತಿಷ್ಯ


ಕನ್ಯಾ - ವಿದುರ
ಸೇವೆ, ಜ್ಞಾನ, ವಾಸ್ತವಿಕತೆಗೆ ಕನ್ಯಾ ರಾಶಿ ಚಿಹ್ನೆ. ಇದೇ ಗುಣಗಳು ವಿದುರನಲ್ಲಿಯೂ ಕಾಣಿಸುತ್ತವೆ. ಕುರು ಸಾಮ್ರಾಜ್ಯದಲ್ಲಿ ಬುದ್ಧಿವಂತ ಸಲಹೆಗಾರನಾಗಿ, ವಿದುರ ತನ್ನ ಬುದ್ಧಿವಂತಿಕೆ, ನೈತಿಕ ಸಮಗ್ರತೆ, ಸಮಸ್ಯೆಗಳಿಗೆ ವಾಸ್ತವಿಕ ದೃಷ್ಟಿಕೋನಕ್ಕೆ ಹೆಸರುವಾಸಿಯಾಗಿದ್ದಾನೆ. ನೀತಿಯ ಕಡೆಗೆ ಅವನ ಬದ್ಧತೆ, ಕಷ್ಟಕರ ಪರಿಸ್ಥಿತಿಯಲ್ಲಿಯೂ ಒಳ್ಳೆಯ ಸಲಹೆಗಳನ್ನು ನೀಡುವ ಸಾಮರ್ಥ್ಯ ಈ ಗುಣಗಳು ಕನ್ಯಾ ರಾಶಿಯಲ್ಲಿಯೂ ಇರುತ್ತವೆ.

ಕನ್ನಡ ಜ್ಯೋತಿಷ್ಯ

ತುಲಾ - ದ್ರೌಪದಿ
ಶುಕ್ರ ಗ್ರಹ ಆಳುವ ರಾಶಿ ತುಲಾ. ಈ ರಾಶಿ ಸೌಂದರ್ಯ, ಸಮತೋಲನ, ನ್ಯಾಯವನ್ನು ಸೂಚಿಸುತ್ತದೆ. ಮಹಾಭಾರತದಲ್ಲಿ ದ್ರೌಪದಿ ಈ ಗುಣಗಳನ್ನು ಹೊಂದಿರುತ್ತಾಳೆ. ಆಕೆ ಸೌಂದರ್ಯ, ದಯೆಗೆ ಹೆಸರುವಾಸಿಯಾಗಿದ್ದಾಳೆ. ದ್ರೌಪದಿ ನ್ಯಾಯಕ್ಕೆ ಸಂಕೇತವಾಗಿ ಕೂಡಾ ನಿಲ್ಲುತ್ತಾಳೆ. ಕೌರವ ಸಭೆಯಲ್ಲಿ ಅವಮಾನ ಆದ ನಂತರ ನ್ಯಾಯಕ್ಕಾಗಿ ಆಕೆ ಪಟ್ಟು ಹಿಡಿದಿದ್ದು ತುಲಾ ರಾಶಿಯನ್ನು ಪ್ರತಿಬಿಂಬಿಸುತ್ತದೆ.

ಕನ್ನಡ ಜ್ಯೋತಿಷ್ಯ

ವೃಶ್ಚಿಕ - ದುರ್ಯೋಧನ
ವೃಶ್ಚಿಕ ರಾಶಿ ತೀವ್ರತೆ, ಮಹತ್ವಾಕಾಂಕ್ಷೆ, ಅಧಿಕಾರಕ್ಕಾಗಿ ಬಯಕೆಯೊಂದಿಗೆ ಸಂಬಂಧ ಹೊಂದಿದೆ. ಇದು ದುರ್ಯೋಧನನಲ್ಲಿ ಸ್ಪಷ್ಟವಾಗಿ ಕಾಣಿಸುವ ಗುಣಗಳು. ಮಹಾಭಾರತದಲ್ಲಿ ಪ್ರಮುಖ ವಿರೋಧಿಯಾಗಿ, ಪಾಂಡವರೊಂದಿಗೆ ದುರ್ಯೋಧನನ ತೀವ್ರವಾದ ದ್ವೇಷ, ರಾಜ್ಯವನ್ನು ಆಳಬೇಕೆಂಬ ಅವನ ಅತಿಯಾದ ಆಸೆ ವೃಶ್ಚಿಕ ರಾಶಿಯ ಗುಣಲಕ್ಷಣಗಳೊಂದಿಗೆ ಸಂಬಂಧ ಹೊಂದಿದೆ.

ಕನ್ನಡ ಜ್ಯೋತಿಷ್ಯ


ಧನಸ್ಸು - ಅರ್ಜುನ
ಸಾಹಸದ ಸ್ಫೂರ್ತಿ, ಸ್ವಾತಂತ್ರ್ಯದ ಮೇಲಿನ ಪ್ರೀತಿ, ಜ್ಞಾನಕ್ಕಾಗಿ ತಪಸ್ಸಿಗೆ ಹೆಸರುವಾಸಿಯಾದ ಧನಸ್ಸು, ಮಹಾಭಾರತದಲ್ಲಿ ಅರ್ಜುನ. ಮೂರನೇ ಪಾಂಡವ ಸಹೋದರ, ಅರ್ಜುನ ಒಬ್ಬ ನಿಷ್ಣಾತ ಬಿಲ್ಲುಗಾರ. ಸತ್ಯಾನ್ವೇಷಕ. ಈ ಗುಣಗಳೆಲ್ಲಾ ಧನಸ್ಸು ರಾಶಿಯಲ್ಲಿ ಸ್ಪಷ್ಟವಾಗಿ ಇರುತ್ತವೆ.

ಕನ್ನಡ ಜ್ಯೋತಿಷ್ಯ

ಮಕರ - ಭೀಷ್ಮ
ಮಕರ ರಾಶಿ ಶಿಸ್ತು, ಜವಾಬ್ದಾರಿ, ಬಲವಾದ ವಿಧಿಗೆ ಇನ್ನೊಂದು ಹೆಸರು. ಈ ಗುಣಗಳೆಲ್ಲಾ ಕುರು ರಾಜವಂಶದ ಪಿತಾಮಹ ಭೀಷ್ಮನಲ್ಲಿ ಸ್ಪಷ್ಟವಾಗಿ ಇರುತ್ತವೆ. ಭೀಷ್ಮನ ಬ್ರಹ್ಮಚರ್ಯ ಪ್ರತಿಜ್ಞೆ, ಹಸ್ತಿನಾಪುರ ಸಿಂಹಾಸನವನ್ನು ರಕ್ಷಿಸಲು ಆತ ಜೀವನಪೂರ್ತಿ ಬದ್ಧನಾಗಿದ್ದು ಮಕರ ರಾಶಿಯಲ್ಲಿ ಕಾಣಿಸುತ್ತವೆ. ಅದಕ್ಕೆ ಮಕರ ರಾಶಿಯವರು ಶಿಸ್ತಿನಿಂದ ಇರುತ್ತಾರೆ.

ಕನ್ನಡ ಜ್ಯೋತಿಷ್ಯ

ಕುಂಭ - ಕೃಷ್ಣ
ಮಹಾಭಾರತಕ್ಕೆ ಮೂಲ ಪುರುಷ ಶ್ರೀ ಕೃಷ್ಣ. ಆತನ ಗುಣಲಕ್ಷಣಗಳು ಜ್ಯೋತಿಷ್ಯ ಶಾಸ್ತ್ರದಲ್ಲಿ ಕೃಷ್ಣನಲ್ಲಿ ಕಾಣಿಸುತ್ತವೆ. ಅರ್ಜುನನ ರಥ ಸಾರಥಿಯಾಗಿ, ಮಾರ್ಗದರ್ಶಿಯಾಗಿ, ಮಹಾಭಾರತದಲ್ಲಿ ಕೃಷ್ಣನ ಪಾತ್ರ ದಾರ್ಶನಿಕ. ತತ್ವಜ್ಞಾನಿ. ಭಗವದ್ಗೀತೆಯಲ್ಲಿ ಆತನ ಬೋಧನೆಗಳು ಸಾರ್ವತ್ರಿಕ ಪ್ರೀತಿ, ನಿರ್ಲಿಪ್ತತೆ, ಜ್ಞಾನ ಕುಂಭ ರಾಶಿಯ ಆದರ್ಶಗಳನ್ನು ಪ್ರತಿಬಿಂಬಿಸುತ್ತವೆ. 

ಕನ್ನಡ ಜ್ಯೋತಿಷ್ಯ

ಮೀನ - ಶಕುಂತಲಾ
ಮೀನ ರಾಶಿ ಸಾನುಭೂತಿ, ಅಂತರ್ ದೃಷ್ಟಿ, ಆಧ್ಯಾತ್ಮಿಕ ರಂಗಕ್ಕೆ ಆಳವಾದ ಸಂಬಂಧದೊಂದಿಗೆ ಸಂಬಂಧ ಹೊಂದಿದೆ. ಈ ಗುಣಲಕ್ಷಣಗಳು ಶಕುಂತಲೆಯಲ್ಲಿ ಕಾಣಿಸುತ್ತವೆ. ಮಹಾಭಾರತದಲ್ಲಿ ಕೇಂದ್ರ ವ್ಯಕ್ತಿಯಲ್ಲದಿದ್ದರೂ, ಭರತನ ತಾಯಿಯಾಗಿ (ಆಕೆಯ ಹೆಸರನ್ನು ಭಾರತ ಎಂದು ಕರೆಯುತ್ತಾರೆ) ಆಕೆಯ ಕಥೆ ಪ್ರೀತಿ, ತ್ಯಾಗ, ಭಕ್ತಿ ಎಂಬ ಮೀನ ರಾಶಿಯ ಗುಣಲಕ್ಷಣಗಳನ್ನು ಪ್ರತಿಬಿಂಬಿಸುತ್ತದೆ. 

Latest Videos

click me!