1.ಮೀನ ರಾಶಿ..
2026ರಲ್ಲಿ ರಾಹು ಮೀನ ರಾಶಿಯಲ್ಲೇ ಸಂಚರಿಸುತ್ತಿದ್ದಾನೆ. ಇದರಿಂದ ಈ ರಾಶಿಯವರು ಹೆಚ್ಚಾಗಿ ಭ್ರಮೆಗಳಲ್ಲಿ ಬದುಕುತ್ತಾರೆ. ಇದರಿಂದಾಗಿ.. ಇವರನ್ನು ಇತರರು ಸುಲಭವಾಗಿ ಮೋಸ ಮಾಡುವ ಸಾಧ್ಯತೆ ಇದೆ. ಹೊಸದಾಗಿ ಪರಿಚಯವಾದ ವ್ಯಕ್ತಿಗಳು ನಿಮ್ಮನ್ನು ಮಾತಿನಲ್ಲೇ ಬುಟ್ಟಿಗೆ ಹಾಕಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಮುಗ್ಧತೆಯನ್ನು ಬಳಸಿಕೊಂಡು ಹಣ ಕೇಳುವ ಸಾಧ್ಯತೆ ಇದೆ. ಹಾಗಾಗಿ, ಈ ರಾಶಿಯವರು ಈ ವರ್ಷ.. ದೊಡ್ಡ ಮೊತ್ತದ ಹಣವನ್ನು ಯಾರಿಗೂ ಸಾಲವಾಗಿ ಕೊಡಬೇಡಿ. ಹಾಗೆಯೇ ಯಾರಿಗೂ ಶ್ಯೂರಿಟಿ ಸಹಿ ಕೂಡ ಹಾಕಬೇಡಿ.