ಇಡೀ ವಿಶ್ವವನ್ನು ಆವರಿಸಿಕೊಳ್ಳುತ್ತಾ ಇಸ್ಲಾಂ? ಬಾಬಾ ವಂಗಾ ಅಚ್ಚರಿಯ ಭವಿಷ್ಯ!

Published : Jun 09, 2025, 07:14 PM IST

ಬಾಬಾ ವಂಗಾ ಅವರ ಭವಿಷ್ಯವಾಣಿಯ ಪ್ರಕಾರ, 5079 ರ ವೇಳೆಗೆ ನೈಸರ್ಗಿಕ ವಿಕೋಪಗಳಿಂದ ಜಗತ್ತು ನಾಶವಾಗುತ್ತದೆ ಎಂದೂ ಭವಿಷ್ಯ ನುಡಿದಿದ್ದಾರೆ.

PREV
16

ಪ್ರವಾದಿಗಳು/ವಿದ್ವಾಂಸರು ಅಥವಾ ಧಾರ್ಮಿಕ ಗುರುಗಳ ವಿಷಯ ಬಂದಾಗಲ್ಲೆಲ್ಲಾ ಬಲ್ಗೇರಿಯಾದ ಬಾಬಾ ವಂಗಾ ಹೆಸರು ಬಂದೇ ಬರುತ್ತದೆ. ಈಗಾಗಲೇ ಬಾಬಾ ವಂಗಾ ಅವರ ಅನೇಕ ಭವಿಷ್ಯವಣಿಗಳನ್ನು ನುಡಿದಿದ್ದಾರೆ. ಬಾಬಾ ವಂಗಾ ಅವರ ಭವಿಷ್ಯವಾಣಿ ಸದಾ ಚರ್ಚೆಯಲ್ಲಿರುತ್ತವೆ.

26

ಇಡೀ ವಿಶ್ವವನ್ನು ಇಸ್ಲಾಂ ಧರ್ಮ ಆವರಿಸಿಕೊಳ್ಳುತ್ತಾ ಎಂಬ ಪ್ರಶ್ನೆಗೆ ಬಾಬಾ ವಂಗಾ ಭವಿಷ್ಯವಾಣಿ ನುಡಿದಿದ್ದಾರೆ. ಯುರೋಪ್‌ನಿಂದ ಆರಂಭವಾಗಿ ಇಸ್ಲಾಂ ಧರ್ಮ ಪ್ರಪಂಚದಾದ್ಯಂತ ಹರಡುತ್ತದೆ ಎಂದು ಹೇಳಿದ್ದಾರೆ. ಹಾಗಾದ್ರೆ ಬಾಬಾ ವಂಗಾ ಭವಿಷ್ಯವಾಣಿ ಏನು ಎಂದು ನೋಡೋಣ ಬನ್ನಿ.

36

ಬಾಬಾ ವಂಗಾ ಭವಿಷ್ಯ

2043 ರ ವೇಳೆಗೆ 44 ದೇಶಗಳು ಮುಸ್ಲಿಂ ಆಳ್ವಿಕೆಗೆ ಒಳಪಡುತ್ತವೆ. 2076 ರ ವೇಳೆಗೆ ಕಮ್ಯುನಿಸ್ಟ್ ಆಡಳಿತವು ಜಗತ್ತಿಗೆ ಮರಳುತ್ತದೆ. ಇಷ್ಟು ಮಾತ್ರವಲ್ಲದೆ, ಬಾಬಾ ವಂಗಾ ಅವರ ಭವಿಷ್ಯವಾಣಿಯ ಪ್ರಕಾರ, 5079 ರ ವೇಳೆಗೆ ನೈಸರ್ಗಿಕ ವಿಕೋಪಗಳಿಂದಾಗಿ ಇಡೀ ಜಗತ್ತು ನಾಶವಾಗುತ್ತದೆ ಎಂದಿದ್ದಾರೆ.

46

ಯುರೋಪಿನ ನಗರವಾದ ಜರ್ಮನಿಗೆ ಇರಾನ್‌ನ ಮುಸ್ಲಿಂ ಆಡಳಿತಗಾರ ಬರುವ ಸಾಧ್ಯತೆಗಳಿವೆ. ಸದ್ಯ ಜರ್ಮನಿಯಲ್ಲಿ ಮುಸ್ಲಿಂ ಜನಸಂಖ್ಯೆ ಕೇವಲ ಶೇಕಡಾ 5 ರಷ್ಟಿದ್ದು, ಇದು ಕ್ರಮೇಣ ಹಂತ ಹಂತವಾಗಿ ಏರಿಕೆಯಾಗುತ್ತಿದೆ. ಈ ಮುಸ್ಲಿಂ ಆಡಳಿತ ಯುರೋಪಿಗೆ ಸೀಮಿತವಾಗಿರದೇ ಅಮೆರಿಕೆ ಸೇರಿದಂತೆ ಇನ್ನಿತರ ದೇಶಕ್ಕೂ ವ್ಯಾಪಿಸಲಿದೆ.ಆದರೆ ಜರ್ಮನಿ ಇಸ್ಲಾಂನಿಂದ ಪ್ರಾಬಲ್ಯ ಹೊಂದಿದಾಗ, ಪರಿಸ್ಥಿತಿ ಹದಗೆಡಲು ಪ್ರಾರಂಭಿಸುತ್ತದೆ.

56

ಭವಿಷ್ಯವಾಣಿ ನಿಜವಾದರೆ ಏನಾಗುತ್ತದೆ?

ಭವಿಷ್ಯವಾಣಿಯ ಪ್ರಕಾರ, ಜರ್ಮನಿ ಮತ್ತು ಯುರೋಪ್ ಇಸ್ಲಾಂನಿಂದ ಪ್ರಾಬಲ್ಯ ಹೊಂದಿದಾಗ, ಭಯಾನಕ ಯುದ್ಧ ನಡೆಯಬಹುದು. ಯುರೋಪ್ ಮತ್ತು ಜರ್ಮನಿಯ ಜೊತೆಗೆ, ಭಾರತ, ರಷ್ಯಾ, ಫ್ರಾನ್ಸ್, ಬ್ರಿಟನ್ ಮತ್ತು ಇತರ ದೇಶಗಳು ಸಹ ಇದರಲ್ಲಿ ಭಾಗಿಯಾಗುತ್ತವೆ. ಇತರ ಇಸ್ಲಾಮಿಕ್ ರಾಷ್ಟ್ರಗಳು ಈ ದೇಶಗಳ ವಿರುದ್ಧ ಒಟ್ಟಾಗಿ ನಿಲ್ಲುತ್ತವೆ. ಈ ಯುದ್ಧವು ತುಂಬಾ ಅಪಾಯಕಾರಿಯಾಗಿದ್ದು, ಸಾವಿರಾರು ಮತ್ತು ಲಕ್ಷಾಂತರ ಜನರು ಸಾಯಬಹುದು.

66

ಬಾಬಾ ವಂಗಾ ಯಾರು ?

ಬಾಬಾ ವಂಗಾ ಬಲ್ಗೇರಿಯಾದ ಪ್ರಸಿದ್ಧ ಪ್ರವಾದಿನಿ, ಅವರ ಪೂರ್ಣ ಹೆಸರು ವ್ಯಾಂಜೆಲಿಯಾ ಪಾಂಡೇವಾ ಗುಶ್ಟೆರೋವಾ. ಅವರು ಜಾಗತಿಕ ಘಟನೆಗಳ ಬಗ್ಗೆ ಅನೇಕ ಗಮನಾರ್ಹ ಭವಿಷ್ಯವಾಣಿಗಳನ್ನು ಮಾಡಿದ್ದಾರೆ. ಜನವರಿ 31, 1911 ರಂದು ಸ್ಟ್ರುಮಿಕಾದಲ್ಲಿ ಜನಿಸಿದರು. ಅಪಘಾತದಿಂದಾಗಿ, ಅವರು ಚಿಕ್ಕ ವಯಸ್ಸಿನಲ್ಲಿಯೇ ದೃಷ್ಟಿ ಕಳೆದುಕೊಂಡರು. ದೃಷ್ಟಿ ಕಳೆದುಕೊಂಡರೂ ಅನೇಕ ಭವಿಷ್ಯವಾಣಿಗಳನ್ನು ನೀಡಿದ್ದಾರೆ.

Read more Photos on
click me!

Recommended Stories